ಬೆಟಗೇರಿ: ಈ ಶಾಲೆಯಲ್ಲಿ ಮಕ್ಕಳಿಗೆ ನಿತ್ಯವೂ ಹನುಮನ ದರ್ಶನವಾಗುತ್ತಿದೆ. ಇದರಲ್ಲೇನು ವಿಶೇಷ ಅಂತೀರಾ?

ಹೌದು. ಗೋಕಾಕ ತಾಲ್ಲೂಕಿನ ಬೆಟಗೇರಿಯ ವಿ.ವಿ.ದೇಯಣ್ಣವರ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಈಚೆಗೆ ವೀರಾಂಜನೇಯನ ಹೊಸ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಶಾಲೆ ಮಕ್ಕಳು ಮತ್ತು ಶಿಕ್ಷಕರಿಗೆ ನಿತ್ಯವೂ ಹನುಮನು ದರ್ಶನ ನೀಡುತ್ತಿದ್ದಾನೆ.

‘ಈ ಶಾಲೆ ಮುಂದೆ ಇರುವ ಮರಗಳ ಮೇಲೆ ಕುಳಿತಿದ್ದ ಮಂಗಗಳ ಪೈಕಿ ಒಂದು ಆಕಸ್ಮಿಕವಾಗಿ ಪ್ರಾಣ ಬಿಟ್ಟಿತು. ಅದರ ಅಂತ್ಯಸಂಸ್ಕಾರ ಮಾಡಿದ ಸ್ಥಳದಲ್ಲೇ ಹನುಮನ ಮೂರ್ತಿ ನಿರ್ಮಿಸಿ, ಪ್ರಾಣ ಪ್ರತಿಷ್ಠಾಪನೆ ಮಾಡಿದ್ದೇವೆ’ ಎಂದು ಮುಖ್ಯಶಿಕ್ಷಕ ರಮೇಶ ಅಳಗುಂಡಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ರಮೇಶ ಅಳಗುಂಡಿ ಅವರ ಪುತ್ರ ದಿ.ಕಿರಣ ಅಳಗುಂಡಿ ಸ್ಮರಣಾರ್ಥವಾಗಿ, ಸಹೋದರ ಚೇತನ ಅಳಗುಂಡಿ ₹50 ಸಾವಿರ ವೆಚ್ಚದಲ್ಲಿ ವೀರಾಂಜನೇಯನ ಮೂರ್ತಿ ನಿರ್ಮಿಸಿ, ಶಾಲೆಗೆ ಕೊಡುಗೆಯಾಗಿ ಕೊಟ್ಟಿದ್ದಾರೆ’ ಎಂದು ಎಸ್ಡಿಎಂಸಿ ಅಧ್ಯಕ್ಷ ರಾಮಣ್ಣ ನೀಲಣ್ಣವರ ಹೇಳಿದರು.

‘ಹನುಮಂತ ಜಾಗೃತ ದೇವರು. ಮಕ್ಕಳಲ್ಲಿ ಹನುಮನ ಬಗ್ಗೆ ಭಕ್ತಿ ಬೆಳೆಯಲೆಂದು ಮೂರ್ತಿ ನಿರ್ಮಿಸಿಕೊಟ್ಟಿದ್ದೇನೆ’ ಎನ್ನುತ್ತಾರೆ ಚೇತನ ಅಳಗುಂಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.