ಹುಕ್ಕೇರಿ: ‘ಪ್ರಶಿಕ್ಷಣ ವರ್ಗಗಳ ಅಭಿಯಾನ ಯಾವುದೇ ಪಕ್ಷದಲ್ಲಿ ಇಲ್ಲ. ದೇಶಕ್ಕಾಗಿ ಚಿಂತನೆ ಮಾಡುವ ಪಕ್ಷವೆಂದರೆ ಅದು ಬಿಜೆಪಿ ಮಾತ್ರ’ ಬೆಳಗಾವಿ ಮಾಜಿ ಶಾಸಕ ಸಂಜಯ ಪಾಟೀಲ ಹೇಳಿದರು.

ತಾಲ್ಲೂಕಿನ ಹೆಬ್ಬಾಳ ಗ್ರಾಮದ ಲಕ್ಷ್ಮಿ ದೇವಿ ಸಭಾಮಂಟಪದಲ್ಲಿ ಶನಿವಾರ ಪಂಡಿತ ದೀನ ದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಮಹಾ ಅಭಿಯಾನದ ಅಂಗವಾಗಿ ಯಮಕನಮರಡಿ ಉತ್ತರ ಮಂಡಲದಲ್ಲಿ ಎರಡು ದಿನ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಮಾತನಾಡಿದರು.

‘ಕೇವಲ ಶಾಮಪ್ರಕಾಶ ಮುಖರ್ಜಿ ಮತ್ತು ದೀನದಯಾಳ್ ಉಪಾಧ್ಯ ಅವರು ಇಬ್ಬರೇ ಸಂಸದರು ಬಿಜೆಪಿಯಿಂದ ಆಯ್ಕೆಯಾಗಿದ್ದರು. ಈಗ ಸುಮಾರು 300 ಸಂಸದರು ಲೋಕಸಭೆಯಲ್ಲಿದ್ದು ಅಧಿಕಾರ ಚುಕ್ಕಾಣಿ ಹಿಡಿದು, ಮಹಾನ್ ನಾಯಕರ ಕನಸು ರಾಮ ಮಂದಿರ ನಿರ್ಮಾಣ, 370 ಮಸೂದೆ ತಿದ್ದುಪಡಿ ಮಾಡಿದರು. ಇಂತಹ ಅನೇಕ ಕಾರ್ಯಗಳನ್ನು ಪ್ರಧಾನಿ ನರೇಂದ್ರ ಮೋದಿ ಮಾಡಿದ್ದಾರೆ ಎಂದರು.

ವಿರೋಧ ಪಕ್ಷ ಕಾಂಗ್ರೆಸ್ ನವರು ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ನಿಧನರಾದ ಸಂದರ್ಭದಲ್ಲಿ ಅವರಿಗೆ 4 ಅಡಿ ಜಾಗ ನೀಡಿಲ್ಲ. ನಮ್ಮ ಪ್ರಧಾನಿ ಮೋದಿ ದೇಶಕ್ಕಾಗಿ 18 ತಾಸು ಕೆಲಸ ಮಾಡುತ್ತಿದ್ದಾರೆ. ಬಿಜೆಪಿಯಲ್ಲಿ ಕಾರ್ಯಕರ್ತರಿಗೆ ಬೆಲೆ ಇದೆ. ಆದರೆ ಕಾಂಗ್ರೆಸ್ ನಲ್ಲಿ ರಬ್ಬರ್ ಸ್ಟಾಂಪ್ ಇದ್ದವರನ್ನು ಮಾತ್ರ ಮಂತ್ರಿ ಮಾಡುತ್ತಾರೆ ಎಂದು ಲೆವಡಿ ಮಾಡಿದರು.

ರಾಜ್ಯ ಎಸ್ಪಿ ಮೋರ್ಚಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಸವರಾಜ ಹುಂದ್ರಿ ಮಾತನಾಡಿದರು. ಚಿಕ್ಕೋಡಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ ಅಪ್ಪಾಜಿಗೋಳ, ಯಮಕನಮರಡಿ ಉತ್ತರ ಮಂಡಲ ಅಧ್ಯಕ್ಷ ಶ್ರೀಶೈಲ ಯಮಕನಮರಡಿ, ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಉಪಾಧ್ಯಕ್ಷ ಅಜೀತ ಮುನ್ನೋಳಿ, ನಿರ್ದೇಶಕ ಕಲಗೌಡ ಪಾಟೀಲ, ಮುಖಂಡರಾದ ಶಿವಾನಂದ ನವನಾಳಿ, ಗುರುರಾಜ ಹುದ್ದಾರ, ರಾಜು ಮಠಪತಿ, ಶಿವಾನಂದ ಬಾಗೇವಾಡಿ, ಅಶೋಕ ಕುರಣಿ ಇದ್ದರು. ಸಂತು ಪಾಟೀಲ ಸ್ವಾಗತಿಸಿ, ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.