ಬೆಳಗಾವಿ: ‘ಪ್ರತಿಯೊಬ್ಬರೂ ರಕ್ತದಾನ ಮಾಡಿ ಇನ್ನೊಬ್ಬರ ಜೀವ ಉಳಿಸಬೇಕು’ ಎಂದು ಎಕ್ಸ್ಪರ್ಟ್ ವಾಲ್ವ್ ಮತ್ತು ಇಕ್ವಿಪ್ಮೆಂಟ್ಸ್ನ ವ್ಯವಸ್ಥಾಪಕ ನಿರ್ದೇಶಕ ವಿನಾಯಕ ಲೋಕೂರ ಹೇಳಿದರು.

ಇಲ್ಲಿನ ಕೆಎಲ್ಇ ಸಂಸ್ಥೆಯ ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ವಿಶ್ವ ಥಲಸ್ಸೆಮಿಯಾ ದಿನದ ಅಂಗವಾಗಿ, ಬ್ಲಡ್ ಬ್ಯಾಂಕ್ ಹಾಗೂ ಥಲಸ್ಸೆಮಿಯಾ ಕೇರ್ ಸೆಂಟರ್ ಆಶ್ರಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ದಾನ ಮಾಡಿದ ರಕ್ತವನ್ನು ಅಪಘಾತಕ್ಕೀಡಾದವರು ಹಾಗೂ ಹೆರಿಗೆ ಸಂದರ್ಭ ರಕ್ತಸ್ರಾವವಾದವರಿಗೆ ಮಾತ್ರ ಬಳಸುತ್ತಾರೆ ಎಂಬ ತಪ್ಪು ಕಲ್ಪನೆ ಜನರಲ್ಲಿದೆ. ಆದರೆ, ಥಲಸ್ಸೆಮಿಯಾದಿಂದ ಬಳಲುತ್ತಿರುವ ನೂರಾರು ಮಕ್ಕಳಿಗೆ ರಕ್ತ ಬಹಳ ಮುಖ್ಯ. ಜನರು ಮಾಡುವ ದಾನದಿಂದಲೇ ಅದನ್ನು ಸಂಗ್ರಹಿಸಬೇಕಾಗುತ್ತದೆ. ಅಂಥ ಮಕ್ಕಳ ಆರೋಗ್ಯ ಕಾಪಾಡಲು ಎಲ್ಲರೂ ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಬೇಕು’ ಎಂದು ಕೋರಿದರು.

ಚಿಕ್ಕಮಕ್ಕಳ ತಜ್ಞವೈದ್ಯೆ ಡಾ.ಸುಜಾತಾ ಜಾಲಿ, ‘ನಮ್ಮ ಆಸ್ಪತ್ರೆಯಲ್ಲಿ ಥಲಸ್ಸೆಮಿಯಾ ಪೀಡಿತ 285 ಮಕ್ಕಳಿದ್ದಾರೆ. ಅವರಿಗೆ ಉಚಿತವಾಗಿ ಚಿಕಿತ್ಸೆ, ಬೋನ್ ಮ್ಯಾರೋ ಮಾಡಲಾಗುತ್ತಿದೆ’ ಎಂದರು.

ಆಸ್ಪತ್ರೆ ಕ್ಲಿನಿಕಲ್ ಸರ್ವಿಸ್ ವಿಭಾಗದ ನಿರ್ದೇಶಕ ಡಾ.ಮಾಧವ ಪ್ರಭು ಮಾತನಾಡಿದರು. ಜೆಎನ್ಎಂಸಿ ಪ್ರಾಚಾರ್ಯ ಡಾ.ರಾಜೇಶ ಪವಾರ, ಉಪಪ್ರಾಚಾರ್ಯ ಡಾ.ಶಿವಾನಂದ ಬುಬನಾಳೆ, ಚಾರಿಟಬಲ್ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ಆರಿಫ್ ಮಾಲ್ದಾರ, ಬ್ಲಡ್ ಬ್ಯಾಂಕ್ ಮುಖ್ಯಸ್ಥ ಎಸ್.ವಿ.ವಿರಗಿ, ಡಾ.ಆರ್.ಎಸ್.ಮುಧೋಳ, ಡಾ.ಜ್ಞಾನೇಶ ಕಾಂಬಳೆ ಇತರರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260513-21-660052313

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.