ಬೆಳಗಾವಿ: ‘ಸುಪ್ರೀಂ ಕೋರ್ಟ್ನಲ್ಲಿ ಇರುವ ಕರ್ನಾಟಕ, ಮಹಾರಾಷ್ಟ್ರ ಗಡಿ ವಿವಾದ ಪ್ರಕರಣದಲ್ಲಿ ಗೆಲ್ಲಲು ಮಹಾರಾಷ್ಟ್ರ ಸರ್ಕಾರ ಹೆಚ್ಚಿನ ಕಾಳಜಿ ವಹಿಸಬೇಕು. ಜೂನ್ 29ರೊಳಗೆ ಅಲ್ಲಿನ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್, ಉಪಮುಖ್ಯಮಂತ್ರಿ ಏಕನಾಥ ಶಿಂದೆ ನಮ್ಮೊಂದಿಗೆ ಸಭೆ ಮಾಡಬೇಕು’ ಎಂದು ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್) ಮುಖಂಡರು ಒತ್ತಾಯಿಸಿದರು.

ನಗರದಲ್ಲಿ ಭಾನುವಾರ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ಮಹಾರಾಷ್ಟ್ರ ಸಚಿವ ಜಯಂತ ಸಾಮಂತ ಅವರನ್ನು ಭೇಟಿಯಾಗಿ, ತಮ್ಮ ಹಕ್ಕೊತ್ತಾಯ ಮಂಡಿಸಿದರು.
.ಬೆಳಗಾವಿ | ಎಂಇಎಸ್ ವಿರುದ್ಧ ಪ್ರತಿಭಟನೆ: ಕರವೇ ಕಾರ್ಯಕರ್ತರು ವಶಕ್ಕೆ.
ಇದಕ್ಕೆ ಪ್ರತಿಕ್ರಿಯಿಸಿದ ಸಾಮಂತ, ‘ಗಡಿ ವಿವಾದ ಪ್ರಕರಣ ಈಗ ಸುಪ್ರೀಂಕೋರ್ಟ್ನಲ್ಲಿ ಇದೆ. ಒಂದು ವ್ಯಾಜ್ಯ ನ್ಯಾಯಾಧೀಶರ ಮುಂದೆ ಇರುವಾಗ ಹೀಗೆ ಮಾತನಾಡುವುದು ಸರಿಯಲ್ಲ. ಮಹಾರಾಷ್ಟ್ರದಲ್ಲಿ ಜೂನ್ 25ರವರೆಗೆ ಪರಿಷತ್ ಚುನಾವಣೆ ನೀತಿಸಂಹಿತೆ ಜಾರಿಯಲ್ಲಿದೆ. ಹಾಗಾಗಿ ಸದ್ಯಕ್ಕೆ ಸಿ.ಎಂ, ಡಿಸಿಎಂ ಯಾವುದೇ ಸಭೆ ಮಾಡಲಾಗದು. ಆದರೆ. ನಿಮ್ಮ ಬೇಡಿಕೆಯನ್ನು ನಾನು ಅವರ ಗಮನಕ್ಕೆ ತರುತ್ತೇನೆ’ ಎಂದು ತಿಳಿಸಿದರು.

‘ನಾನು ಕರ್ನಾಟಕ, ಮಹಾರಾಷ್ಟ್ರ ಗಡಿ ವಿವಾದ ಪ್ರಕರಣದ ಬಗ್ಗೆ ಮಾತನಾಡುವುದಿಲ್ಲ. ಆದರೆ, ಗಡಿ ಮರಾಠಿಗರ ಹಿತರಕ್ಷಣೆಗೆ ನಾವು ಬದ್ಧವಾಗಿದ್ದೇವೆ’ ಎಂದರು.

ತಮ್ಮ ಬೇಡಿಕೆಗೆ ಹೀಗೆ ಜಾರಿಕೊಳ್ಳುವ ರೀತಿಯಲ್ಲಿ ಸಚಿವರು ಉತ್ತರ ನೀಡಿದ್ದರಿಂದ ಎಂಇಎಸ್ ಮುಖಂಡರಿಗೆ ನಿರಾಸೆಯಾಯಿತು.
.ಬೆಳಗಾವಿ | ದರ ಏರಿಕೆ: ಕೇಂದ್ರದ ವಿರುದ್ಧ ಕಾಂಗ್ರೆಸ್ ಕಿಡಿ.
‘ನಾನೂ ಸಹಿ ಮಾಡುವೆ’

‘ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂದು ಆಗ್ರಹಿಸಿ ಸಹಿ ಸಂಗ್ರಹ ಅಭಿಯಾನ ಮಾಡಲಾಗುತ್ತಿದೆ. ಗಡಿಯಲ್ಲಿ ಮರಾಠಿ ಭಾಷಿಕರ ಹಿತರಕ್ಷಣೆಗೆ ನಾವು ಬದ್ಧರಿದ್ದೇವೆ. ಈ ಅಭಿಯಾನದಲ್ಲಿ ಸಹಿ ಮಾಡುವಂತೆ ವಿನಂತಿಸಿದರೆ, ನಾನೂ ಸಹಿ ಮಾಡುವೆ’ ಎಂದು ಜಯಂತ ಸಾಮಂತ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.

‘ಈ ಅಭಿಯಾನದಲ್ಲಿ ಸಹಿ ಸಂಗ್ರಹಿಸಿದ ವರದಿಯನ್ನು ಸುಪ್ರೀಂಕೋರ್ಟ್ಗೆ ಕಳುಹಿಸಬೇಕೋ ಅಥವಾ ಬೇಡವೋ ಎಂಬುದನ್ನು ಈಗಲೇ ನಿರ್ಣಯಿಸಲಾಗದು. ನಾನು ಮರಾಠಿ ಭಾಷಿಕರ ಪರ ಸಹಿ ಮಾಡಬಹುದೇ ಹೊರತು, ಗಡಿ ವಿವಾದದ ಬಗ್ಗೆ ಹೆಚ್ಚು ಮಾತನಾಡಲಾರೆ. ಒಂದು ವಿಷಯ ನ್ಯಾಯಾಧೀಶರ ಮುಂದೆ ಇದ್ದಾಗ ಮಾತನಾಡುವುದು ಸೂಕ್ತವಲ್ಲ. ಈ ವಿಷಯವನ್ನೇ ಎಂಇಎಸ್ ಮುಖಂಡರಿಗೂ ಹೇಳಿದ್ದೇನೆ’ ಎಂದು ತಿಳಿಸಿದರು.

‘ಗಡಿಯಲ್ಲಿ ಮರಾಠಿ ಭಾಷಿಕರು ಮತ್ತು ಮರಾಠಿ ಭಾಷೆ ಉಳಿವಿವಾಗಿ ಪ್ರಯತ್ನಿಸುತ್ತಿದ್ದೇವೆ. ಈಚೆಗೆ ಗಡಿಯಲ್ಲಿನ ಮರಾಠಿ ಗ್ರಂಥಾಲಯಗಳಿಗೆ ₹2 ಕೋಟಿ ಅನುದಾನ ಕೊಟ್ಟಿದ್ದೇವೆ’ ಎಂದರು.
.ಬೆಳಗಾವಿ | ದರೋಡೆ: 10 ಆರೋಪಿಗಳ ಬಂಧನ.
‘ಬೆಳಗಾವಿಯಲ್ಲಿ ಇರುವ ಮರಾಠಿ ಭಾಷಿಕರು ಕರ್ನಾಟಕ ಸರ್ಕಾರಕ್ಕೆ ತೊಂದರೆ ಕೊಡಬಾರದು. ಅಂತೆಯೇ ಕರ್ನಾಟಕ ಸರ್ಕಾರವೂ ಮರಾಠಿ ಭಾಷಿಕರಿಗೆ ತೊಂದರೆ ಕೊಡಬಾರದು’ ಎಂದು ಹೇಳಿದರು.

‘ಕರ್ನಾಟಕದಲ್ಲಿ ಇರುವ ಶಿವಾಜಿ ಮಹಾರಾಜರ ತಂದೆ ಶಹಾಜಿ ಮಹಾರಾಜರ ಸಮಾಧಿ ಅಭಿವೃದ್ಧಿಗೆ ಪ್ರಮೋದ ಮಹಾಜನ ಅವರ ಸಹೋದರ ಪ್ರಕಾಶ ಮಹಾಜನ ಅಭಿಯಾನ ನಡೆಸುತ್ತಿದ್ದಾರೆ. ಇದಕ್ಕೆ ನನ್ನ ಬೆಂಬಲವೂ ಇದೆ. ಮುಂದಿನ ತಿಂಗಳು ಸಮಾಧಿ ಸ್ಥಳಕ್ಕೆ ಹೋಗುತ್ತೇನೆ. ಮಹಾರಾಷ್ಟ್ರದ ಮರಾಠಿ ಭಾಷಾ ಸಚಿವಾಲಯದಿಂದ ಇದನ್ನು ಅಭಿವೃದ್ಧಿಪಡಿಸುವ ವಿಚಾರವಿದೆ. ಮಹಾರಾಷ್ಟ್ರದ ಪ್ರತಿ ವ್ಯಕ್ತಿ ಶ್ರಮದಿಂದ ಈ ಸಮಾಧಿ ಸ್ಥಳ ಪುನರ್ ನಿರ್ಮಾಣವಾಗಬೇಕಿದೆ. ಈ ಸಂಬಂಧ ಕರ್ನಾಟಕದ ಮುಂದಿನ ಸಿ.ಎಂ ಗಮನಕ್ಕೂ ತರುತ್ತೇನೆ’ ಎಂದರು.
.ಬೆಳಗಾವಿ | 910 ಗ್ರಾಂ ಚಿನ್ನಾಭರಣ ಕಳವು: ಇಬ್ಬರ ಬಂಧನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.