ಬೆಳಗಾವಿ: ‘ಭಾಷೆ, ಗಡಿ, ನಾಡು, ನುಡಿ ಕುರಿತಂತೆ ಸಾಹಿತಿಗಳೆಂದೂ ಹಿಂದೆ ಸರಿದವರಲ್ಲ. ನಾವು ಮೌನವಾಗಿದ್ದುಕೊಂಡು ಅಕ್ಷರಗಳ ಮೂಲಕ ನಮ್ಮ ನಮ್ಮಕೆಲಸವನ್ನು ಮಾಡುತ್ತಿದ್ದೇವೆ’ ಎಂದು ಹಿರಿಯ ಸಾಹಿತಿ ಸರಜೂ ಕಾಟ್ಕರ್ ಹೇಳಿದರು.

‘ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ’ ಎಂಬ ನಿರ್ಣಯವನ್ನು ಮಹಾನಗರ ಪಾಲಿಕೆ ಪರಿಷತ್ ಸಭೆಯಲ್ಲಿ ಅಂಗೀಕರಿಸುವ ಕುರಿತು ಲೇಖಕರು, ಸಾಹಿತಿಗಳೇಕೆ ಮೌನ ವಹಿಸಿದ್ದಾರೆಂದು ಹೋರಾಟಗಾರರು ಪ್ರಶ್ನೆ ಮಾಡಿದ ಹಿನ್ನೆಲೆಯಲ್ಲಿ; ಸಂಘಟಕರಾದ ಗುಂಡೇನಟ್ಟಿ ಮಧುಕರ ಹಾಗೂ ಬಸವರಾಜ ಗಾರ್ಗಿ ನೇತೃತ್ವದಲ್ಲಿ ಮಂಗಳವಾರ ಸಾಹಿತ್ಯ ಭವನದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

‘ಕನ್ನಡ ಉಳಿಸುವ ಬೆಳೆಸುವ ಕುರಿತಂತೆ ಲೇಖಕರಿಗಿಂತ, ಹೋರಾಟಗಾರರು ಹೆಚ್ಚಿನ ಕೆಲಸವನ್ನು ಮಾಡಿದ್ದಾರೆ. ಕನ್ನಡ ಶಾಲೆಗಳ ಉಳಿವಿಗಾಗಿ, ಕನ್ನಡ ಶಾಲೆಗಳ ಕಟ್ಟಗಳ ಕುರಿತಂತೆ, ಸರ್ಕಾರಿ ಕಚೇರಿಗಳಲ್ಲಿ ಕನ್ನಡ ಬಳಿಕೆಗಾಗಿ ಬೇರೆ ಬೇರೆ ಕನ್ನಡ ಕೆಲಸಕ್ಕಾಗಿ ಕನ್ನಡ ಹೋರಾಟಗಾರರು ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ. ಹೋರಾಟಗಾರರು ನಾಡಿನ ಸೈನಿಕರಿದ್ದಂತೆ. ಸಾಹಿತಿಗಳಾದ ನಾವು ಹೋರಾಟಗಾರರ ಬೆಂಬಲವಾಗಿ ನಿಂತಿದ್ದೇವೆ. ನಿಲ್ಲಲೇಬೇಕು’ ಎಂದರು.

‘ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗವೆಂಬುದಕ್ಕೆ ಸಾಕಷ್ಟು ದಾಖಲೆಗಳಿವೆ. ಸಮಸ್ಯೆ ಕುರಿತಂತೆ ಮಹಾಜನ ಸಮಿತಿ ವರೆಗೆ ಒಟ್ಟು 20 ಸಮಿತಿಗಳಾಗಿವೆ. ಎಲ್ಲರೂ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗವೆಂದೇ ಹೇಳಿದ್ದಾರೆ. ಆದರೂ ಎಂ.ಇ.ಎಸ್. ನಾಯಕರು ಆ ಸಮಸ್ಯೆಯನ್ನು ಜೀವಂತವಾಗಿಡಲು ಹೊರಟಿದ್ದಾರೆ ಅಷ್ಟೆ’ ಎಂದು ಹೇಳಿದರು.

ಸಾಹಿತಿ ಎಲ್.ಎಸ್. ಶಾಸ್ತ್ರಿ ಮಾತನಾಡಿದರು. ಪ್ರೊ.ಎಚ್.ಬಿ. ರಾಜಶೇಖರ, ಪ್ರೊ.ಬಸವರಾಜ ಜಗಜಂಪಿ, ಪ್ರೊ.ಅರವಿಂದ ಕುಲಕರ್ಣಿ, ಪ್ರೊ.ಯಲ್ಲಪ್ಪ ಹಿಮ್ಮಡಿ, ನೀಲಗಂಗಾ ಚರಂತಿಮಠ, ಯ.ರು. ಪಾಟಿಲ, ಪ್ರೊ.ರಾಮಕೃಷ್ಣ ಮರಾಠೆ, ಅಶೋಕ ಮಳಗಲಿ, ರವಿ ಕೊಟಾರಗಸ್ತಿ, ಚಂದ್ರಶೇಖರ ನವಲಗುಂದ, ರಾಮಚಂದ್ರ ಕಟ್ಟಿ, ಆನಂದ ಪುರಾಣಿಕ, ಎ.ಎ. ಸನದಿ, ಶಿರೀಷ ಜೋಶಿ, ಅರವಿಂದ ಹುನಗುಂದ, ಆಶಾ ಯಮಕನಮರಡಿ, ವಾಸಂತಿ ಮೆಳೆದ, ಸುನಂದಾ ಹಾಲಬಾವಿ, ದೀಪಿಕಾ ಚಾಟೆ ಚರ್ಚೆಯಲ್ಲಿ ಪಾಲ್ಗೊಂಡರು.

ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನ, ರಂಗ ಸಂಪದ, ರಂಗಸೃಷ್ಟಿ ಸಾಂಸ್ಕೃತಿಕ ವೇದಿಕೆ, ಹಾಸ್ಯಕೂಟ, ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘ, ನಾಡಹಬ್ಬ ಉತ್ಸವ ಸಮಿತಿ, ಬೆಳಗಾವಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು, ಸಾಹಿತ್ಯ ಸಂವಾದ, ಕಲಾ ರಂಗ, ಜನ ಸಾಹಿತ್ಯ ಪೀಠ, ವೇಣುಗ್ರಾಮ ನಾಟ್ಯ ಸಂಘ, ಸಾಹಿತ್ಯ ಸಂಜೆ, ಶರಣ ಸಾಹಿತ್ಯ ಪರಿಷತ್ತು, ಬಸವರಾಜ ಕಟ್ಟಿಮನಿ ಪ್ರತಿಷ್ಠಾನ, ದ.ರಾ. ಬೇಂದ್ರೆ ಸ್ಮಾರಕ ಟ್ರಸ್ಟ್, ಕನ್ನಡ ಕಾವ್ಯ ಕೂಟ, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ, ಡಾ.ಬಿ.ಎ. ಸನದಿ ಸಾಂಸ್ಕೃತಿಕ ಪ್ರತಿಷ್ಠಾನ. ಡಿ.ಎಸ್. ಕರ್ಕಿ ಸಾಂಸ್ಕೃತಿಕ ಪ್ರತಿಷ್ಠಾನ, ಹೊಂಬೆಳೆಕು ಸಾಂಸ್ಕೃತಿಕ ಸಂಘ, ನಿವೇದಿತಾರ್ಪಣ ಸಂಗೀತ ಅಕಾಡಮಿ, ಕೃಷ್ಣಮೂರ್ತಿ ಪುರಾಣಿಕ ಪ್ರತಿಷ್ಠಾನ, ಸಂಘಟನೆಗಳ ಪ್ರತಿನಿಧಿಗಳು ಪಾಲ್ಗೊಂಡರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260603-21-1431123954

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.