ಬೆಳಗಾವಿ: ಮಹಾರಾಷ್ಟ್ರಕ್ಕೆ ಹೊಂದಿಕೊಂಡ ಬೆಳಗಾವಿ, ಚಿಕ್ಕೋಡಿ, ನಿಪ್ಪಾಣಿ ಮುಂತಾದ ತಾಲ್ಲೂಕುಗಳಲ್ಲಿ ಕನ್ನಡ ಶಾಲೆಗಳು ಭದ್ರವಾಗಿಲ್ಲ. ಇದರಿಂದ ಮಕ್ಕಳು ಅನಿವಾರ್ಯವಾಗಿ ಮರಾಠಿ ಮಾಧ್ಯಮಕ್ಕೆ ಸೇರುತ್ತಿದ್ದಾರೆ. ಶಿಕ್ಷಕರ ನೇಮಕಾತಿಯೂ ಸೇರಿದಂತೆ ಗಡಿಯ ಕನ್ನಡ ಶಾಲೆಗಳನ್ನು ಭದ್ರಪಡಿಸಬೇಕು ಎಂಬ ಕೂಗು ಸರ್ಕಾರದ ಕಿವಿಗೆ ಇನ್ನೂ ಮುಟ್ಟಿಲ್ಲ. ಪ್ರತಿ ಬಾರಿ ಬಜೆಟ್ ಬಂದಾಗಲೂ ಗಡಿಭಾಗದ ಮಕ್ಕಳ ಕಣ್ಣುಗಳಲ್ಲಿ ನಿರೀಕ್ಷೆ ಜಿಣುಗುತ್ತದೆ. ಆದರೆ, ಸರ್ಕಾರ ಮಾತ್ರ ಹುಸಿ ಮಾಡುತ್ತಲೇ ಬಂದಿದೆ.

ಇದೇ ಕಾರಣಕ್ಕೆ ಗಡಿ ಜಿಲ್ಲೆಯಲ್ಲಿ ಕನ್ನಡ ಗಟ್ಟಿಗೊಳ್ಳಬೇಕಾದ ಊರುಗಳಲ್ಲಿಯೂ ಮರಾಠಿ ಪ್ರಾಬಲ್ಯ ಹೆಚ್ಚುತ್ತ ಸಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕನ್ನಡಪರ ಹೋರಾಟಗಾರರು ಬಜೆಟ್ಗಿಂತಲೂ ಮುಂಚಿತವಾಗಿ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ.

ಪ್ರಾದೇಶಿಕವಾಗಿ ರಾಜ್ಯದ ಎರಡನೇ ಅತಿ ದೊಡ್ಡ ಜಿಲ್ಲೆಯಾದ ಬೆಳಗಾವಿಯನ್ನು ವಿಭಜಿಸಿ ಮೂರು ಜಿಲ್ಲೆಗಳಾಗಿ ಮಾಡಬೇಕೆಂಬ ಕೂಗು 40 ವರ್ಷಗಳಿಂದ ಇದೆ. ಜಿಲ್ಲೆಗೆ 12 ಏತನೀರಾವರಿಗಳನ್ನು ಘೋಷಣೆ ಮಾಡಲಾಗಿದೆ. 3 ಎತ ನೀರಾವರಿಗಳಿಗೆ ಅರ್ಧದಷ್ಟು ಮಾತ್ರ ಅನುದಾನ ಬಂದಿದ್ದು, ಕಾಮಗಾರಿ ಅರ್ಧಕ್ಕೆ ನಿಂತಿದೆ. ನೀರಾವರಿ ಉದ್ದೇಶದಿಂದ ಎಲ್ಲ ಏತ ನೀರಾವರಿಗೂ ಚಾಲನೆ ಕೊಡಬೇಕು.

ಜಿಲ್ಲೆಯ ಅಥಣಿ, ಚಿಕ್ಕೋಡಿ, ರಾಯಬಾಗ ಹಾಗೂ ಕಾಗವಾಡ ತಾಲ್ಲೂಕಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ದ್ರಾಕ್ಷಿ ಬೆಳೆಯಲಾಗುತ್ತದೆ. ಆದರೆ, ಶಿಥಲೀಕರಣ ಘಟಕ ಇಲ್ಲದ ಕಾರಣ ರೈತರು ನಷ್ಟ ಎದುರಿಸುತ್ತಿದ್ದಾರೆ. ಈ ಬೇಡಿಕೆ 50 ವರ್ಷಗಳಿಂದ ನನೆಗುದಿಗೆ ಬಿದ್ದಿದೆ.

ಸುವರ್ಣ ವಿಧಾನಸೌಧ ಪ್ರತಿವರ್ಷ ಅಧಿವೇಶನದಲ್ಲಿ 10 ದಿನ ಬಳಕೆಯಾಗುತ್ತಿದೆ. ಉಳಿದಂತೆ ಕೆಲವು ಇಲಾಖೆಗಳು ಇವೆ. ಸಮರ್ಪಕವಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಗಡಿ ಸಂರಕ್ಷಣಾ ಆಯೋಗ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಮುಖ್ಯಮಂತ್ರಿಗಳ ಕಚೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸೇರಿದಂತೆ ಕನ್ನಡ ನಾಡು– ನುಡಿಗೆ ಅಗತ್ಯವಿರುವ ಎಲ್ಲ ಕಚೇರಿಗಳನ್ನೂ ಇಲ್ಲಿಗೆ ಸ್ಥಳಾಂತರಿಸಬೇಕು.

ಸೊಗಲ ಸೋಮೇಶ್ವರ, ಗೋಕಾಕ– ಡಚಿನಮಲ್ಕಿ ಜಲಪಾತಗಳು, ನವಿಲುತೀರ್ಥ ಜಲಾಶಯ, ಐತಿಹಾಸಿಕ ಕಿತ್ತೂರು ಕೋಟೆಗೆಳ ಅಭಿವೃದ್ಧಿ ಜತೆಗೆ ಗಡಿ ಪ್ರವಾಸೋದ್ಯಮ ಅಭಿವೃದ್ಧಿ ಆಗಬೇಕಿದೆ.

ಜಿಲ್ಲೆಯಲ್ಲಿ 30 ಸಕ್ಕರೆ ಕಾರ್ಖಾನೆಗಳಿವೆ 200 ಲಕ್ಷ ಮೆಟ್ರಿಕ್ ಟನ್ಗೂ ಹೆಚ್ಚು ಕಬ್ಬು ಬೆಳೆಯಲಾಗುತ್ತದೆ. ಆದರೆ, ಕಬ್ಬಿನ ತೂಕದಲ್ಲಿ ಕಾರ್ಖಾನೆಗಳು ಮೋಸ ಮಾಡುತ್ತಿವೆ. ಸರ್ಕಾರದಿಂದ ತೂಕದ ಯಂತ್ರ ಅಳವಡಿಸುವ ಆದೇಶವಿದ್ದರೂ ಕಾರ್ಯಗತವಾಗಿಲ್ಲ ಎನ್ನುತ್ತಾರೆ ರೈತ ಮುಖಂಡರು.

ತಾಲ್ಲೂಕು ಕೇಂದ್ರ ಘೋಷಣೆ ಮಾಡಿ

ಗೋಕಾಕ ತಾಲ್ಲೂಕಿನ ಹೋಬಳಿ ಕೇಂದ್ರವಾದ ಕೌಜಲಗಿ ಭಾಗವು ಅತ್ಯಂತ ಹಿಂದುಳಿದ ಪ್ರದೇಶವಾಗಿದ್ದು ಕಳೆದ 50 ವರ್ಷಗಳಿಂದ ಈ ಪ್ರದೇಶ ಅಭಿವೃದ್ಧಿಗಾಗಿ ಈ ಭಾಗದ ಜನ ಕೌಜಲಗಿ ಪಟ್ಟಣವನ್ನು ತಾಲ್ಲೂಕು ಕೇಂದ್ರವಾಗಿ ಘೋಷಿಸಬೇಕೆಂದು ಒತ್ತಾಯಿಸುತ್ತ ಬಂದಿದ್ದಾರೆ. ಈ ಬಜೆಟ್ನಲ್ಲಾದರೂ ಈಡೇರುವುದೇ ಎಂಬ ನಿರೀಕ್ಷೆಯಲ್ಲಿದ್ದಾರೆ. ಈಗಿರುವ ಉಪತಹಶೀಲ್ದಾರ್ ಕಾರ್ಯಾಲಯನ್ನು ಮೇಲ್ದರ್ಜೆಗೇರಿಸಿ ವಿಶೇಷ ತಹಶೀಲ್ದಾರ್ ಕಾರ್ಯಾಲಯ ಮಂಜೂರು ಮಾಡಬೇಕು. ಇದರಿಂದ ಕೌಜಲಗಿ ಹಾಗೂ ಸುತ್ತಮುತ್ತಲಿನ 40 ಗ್ರಾಮಗಳಿಗೆ ಕೇವಲ 10 ರಿಂದ 15 ಕಿ.ಮೀ ಅಂತರದಲ್ಲಿ ತಹಶೀಲ್ದಾರ್ ಕಚೇರಿಯಲ್ಲಿ ಜನರು ಕೆಲಸ ಕಾರ್ಯಗಳನ್ನು ಮಾಡಿಕೊಳ್ಳಲು ಅನುಕೂಲವಾಗುತ್ತದೆ. ಕಾನೂನು ಸುವ್ಯವಸ್ಥೆ ಕಾಪಾಡಲು ನೂತನ ಪೊಲೀಸ್ ಠಾಣೆ ಮತ್ತು ಸಿಪಿಐ ಕಚೇರಿ ಘೋಷಣೆ ಆಗಬೇಕು. ಸರ್ಕಾರಿ ಪ್ರಥಮದರ್ಜೆ ಕಾಲೇಜು ಮಂಜೂರು ಆಗಬೇಕು. ಗ್ರಾಮ ಪಂಚಾಯಿತಿಯನ್ನು ಮೇಲ್ದರ್ಜೆಗೇರಿಸಿ ಪಟ್ಟಣ ಪಂಚಾಯಿತಿ ಅಥವಾ ರಡ್ಡೇರಟ್ಟಿ– ಮನ್ನಿಕೇರಿ ಗ್ರಾಮಗಳನ್ನು ಸೇರ್ಪಡಿಸಿ ಪುರಸಭೆ ಆಗಿಸಬೇಕೆಂಬುದು ಈ ಭಾಗದ ಜನತೆಯ ಬಹುದಿನದ ಬೇಡಿಕೆ. ‘ಕೌಜಲಗಿ ಭಾಗದ ಸಮಸ್ತ ಅಭಿವೃದ್ಧಿಗಾಗಿ ಕೌಜಲಗಿ ನೂತನ ತಾಲ್ಲೂಕು ಕೇಂದ್ರವಾಗಿ ಘೋಷಣೆ ಆಗಬೇಕು. ಶೈಕ್ಷಣಿಕವಾಗಿ ಬಿಇಒ ಕಚೇರಿ ಉಪ ನೋಂದಣಾಧಿಕಾರಿ ಕಚೇರಿ ಸರ್ಕಾರಿ ಪದವಿ ಕಾಲೇಜು ಮತ್ತು ವೃತ್ತಿಪರ ಕಾಲೇಜುಗಳು ಮಂಜೂರಾಗಬೇಕು’ ಎನ್ನುತ್ತಾರೆ ಸಿದ್ದಪ್ಪ ಹ. ಹಳ್ಳೂರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.