ಸಂಕೇಶ್ವರ: ‘ಗಡಿ ಭಾಗದ ಗ್ರಾಮಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದ್ದು, ಇಲ್ಲಿನ ಜನತೆಗೆ ಸುಗಮ ಸಾರಿಗೆ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವುದು ನನ್ನ ಮುಖ್ಯ ಗುರಿ. ಕೇವಲ ರಸ್ತೆ ನಿರ್ಮಾಣ ಅಷ್ಟೇ ಅಲ್ಲದೆ, ಪ್ರತಿಯೊಂದು ಹಳ್ಳಿಗೂ ಮೂಲ ಸೌಕರ್ಯಗಳು ತಲುಪುವವರೆಗೂ ನಮ್ಮ ಶ್ರಮ ಮುಂದುವರಿಯಲಿದೆ’ ಶಾಸಕ ನಿಖಿಲ್ ಕತ್ತಿ ಹೇಳಿದರು.

ಸಮೀಪದ ಹೊನ್ನಿಹಳ್ಳಿ, ಕೋಣನಕೇರಿ ಹಾಗೂ ಹಡಲಗಾ ಗ್ರಾಮಗಳಲ್ಲಿ ಮುಖ್ಯಮಂತ್ರಿ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ವಿವಿಧ ರಸ್ತೆ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಮುಖ್ಯಮಂತ್ರಿ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ಹೊನ್ನಿಹಳ್ಳಿ ಗ್ರಾಮದಿಂದ ಕಣಗಲಾ ಗಡಿಯ ವರೆಗೆ ₹50 ಲಕ್ಷ ವೆಚ್ಚದಲ್ಲಿ ರಸ್ತೆ ನಿರ್ಮಾಣ, ಕೋಣನಕೇರಿ ಗ್ರಾಮದಿಂದ ಚಂಪಾಹೊಸೂರ ಗಡಿಯವರೆಗೆ ₹95 ಲಕ್ಷ ವೆಚ್ಚದಲ್ಲಿ ರಸ್ತೆ ಸುಧಾರಣೆ ಹಾಗೂ ಹಡಲಗಾ ಗ್ರಾಮದ ಲಕ್ಷ್ಮೀದೇವಿ ದೇವಸ್ಥಾನದಿಂದ ಮಹಾರಾಷ್ಟ್ರ ರಾಜ್ಯ ಗಡಿಯವರೆಗೆ ₹25 ಲಕ್ಷ ವೆಚ್ಚದಲ್ಲಿ ರಸ್ತೆ ನಿರ್ಮಾಣ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.

ಮುಖಂಡರಾದ ಅಶೋಕ ಹಿರೆಕೂಡಿ, ಮಹಾದೇವ ಜಕಾತೆ, ಸುಧಾಕರ ದೇಸಾಯಿ, ಕುಮಾರ ತೊದಲೆ, ಸುಧಾಕರ ಬಡಿಗೇರ, ರಾಜು ಪಾಟೀಲ,ಪ್ರಶಾಂತ ಪಾಟೀಲ, ಚೇತನ ಬಶೆಟ್ಟಿ, ಸಚಿನ ಸಪಾಟೆ, ಸಂದೀಪ ದವಡತೆ, ವಿಜಯ ಜರಳಿ, ದಿನೇಶ ಕೊಳೆಕರ, ಅಪ್ಪಾಸಾಹೇಬ್ ಬೊರೆ ಗುತ್ತಿಗೆದಾರ ಮಲ್ಲಪ್ಪ ಬಿಸಿರೊಟ್ಟಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260601-21-1343682200

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.