ಬೆಳಗಾವಿ: ಸವದತ್ತಿ ತಾಲ್ಲೂಕಿನ ಚಚಡಿ ಗ್ರಾಮದಲ್ಲಿ ಸಾರಾಯಿ ಕುಡಿತದ ಚಟ ಹೆಚ್ಚಾಗಿದ್ದು, ಕುಟುಂಬಗಳಿಗೆ ಸಂಕಷ್ಟ ಎದುರಾಗಿದೆ. ಇಲ್ಲಿರುವ ಎಂಎಸ್ಐಎಲ್ ಮದ್ಯದ ಅಂಗಡಿ ಬಂದ್ ಮಾಡಬೇಕು ಎಂದು ಆಗ್ರಹಿಸಿ ಗ್ರಾಮದ ಹಲವಾರು ಮಹಿಳೆಯರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿ ಮುಂದೆ ಕೆಲಕಾಲ ಧರಣಿ ನಡೆಸಿದ ಮಹಿಳೆಯರು, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಮೊಳಗಿಸಿದರು. ಶಾಂತವಾಗಿ, ನೆಮ್ಮದಿಯಿಂದ ಬಾಳುತ್ತಿದ್ದ ಊರಿನಲ್ಲಿ ಸರ್ಕಾರ ಮದ್ಯದ ಅಂಗಡಿ ತೆರೆದು ವಾತಾವರಣ ಹಾಳು ಮಾಡಿದೆ ಎಂದು ಆಕ್ರೋಶ ಹೊರಹಾಕಿದರು. ತಕ್ಷಣವೇ ಮದ್ಯದ ಅಂಗಡಿ ಬಂದ್ ಮಾಡಬೇಕು ಎಂದೂ ಘೋಷಣೆ ಮೊಳಗಿಸಿದರು.

ಚಚಡಿ ಗ್ರಾಮವು ಸಾವಿರಾರು ವರ್ಷಗಳ ಚರಿತ್ರೆ ಹೊಂದಿರುವ ಐತಿಹಾಸಿಕ ಗ್ರಾಮ. ಇಲ್ಲಿ ಎಲ್ಲ ಧರ್ಮ ಹಾಗೂ ಜಾತಿಯವರೂ ಒಂದಾಗಿ ಬಾಳುತ್ತಿದ್ದಾರೆ. ಆದರೆ, ಕೆಲವು ವರ್ಷಗಳ ಹಿಂದೆ ಗ್ರಾಮದ ಕ್ರಾಸಿನಲ್ಲಿ ಸರ್ಕಾರವು ಎಂಎಸ್ಐಎಲ್ ಮದ್ಯ ಮಾರಾಟ ಮಳಿಗೆ ತೆರೆದಿದೆ. ಇದರಿಂದ ಪ್ರತಿ ದಿನವೂ ಒಂದಲ್ಲ ಒಂದು ಕಡೆ ತಂಟೆ– ತಕರಾರು– ಜಗಳಗಳು ನಡೆಯುತ್ತಿವೆ. ಹಲವು ಪುರುಷರು ಉದ್ಯೋಗ ಬಿಟ್ಟು ಸಾರಾಯಿ ಕುಡಿದು ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಹಲವರು ಸಣ್ಣ ವಯಸ್ಸಿನಲ್ಲಿಯೇ ಪ್ರಾಣ ಕಳೆದುಕೊಂಡಿದ್ದಾರೆ. ಯಾವುದೇ ಜಾತ್ರೆ, ಉತ್ಸವ ಅಥವಾ ಯಾರದ್ದಾದರೂ ಶವ ಸಂಸ್ಕಾರ ಇದ್ದಾಗಲೂ ಕುಡಿದು ಗಲಾಟೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಗ್ರಾಮದ ಒಳಗೇ ಕೆಲವು ಅಂಗಡಿಕಾರರು ಕದ್ದು– ಮುಚ್ಚಿ ಅಕ್ರಮವಾಗಿ ತಮ್ಮ ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡುತ್ತಿದ್ದಾರೆ. 15ರಿಂದ 18 ವರ್ಷದೊಳಗಿನ ಹುಡುಗರಿಗೂ ಸಾರಾಯಿ ಸುಲಭವಾಗಿ ಸಿಗುವಂತೆ ಆಗಿದೆ. ಇದೆಲ್ಲಕ್ಕೂ ತಡೆಯೊಡ್ಡಬೇಕು ಎಂದೂ ಕೋರಿದರು.

ಅಲ್ಲಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರ ಕಚೇರಿಗೂ ತೆರಳಿದ ಮಹಿಳೆಯರು ಸಮಸ್ಯೆ ನಿವೇದಿಸಿಕೊಂಡರು.

ನಂತರ, ಅಬಕಾರಿ ಎಸ್ಪಿ ಜಗದೀಶ ಕುಲಕರ್ಣಿ ಅವರು ಕೂಡ ತಮ್ಮ ಕಚೇರಿಯಲ್ಲಿ ಮಹಿಳೆಯರೊಂದಿಗೆ ಚರ್ಚೆ ನಡೆಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260328-21-1676170200

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.