ಬೆಳಗಾವಿ: ಇಲ್ಲಿನ ಕೋನವಾಳ ಗಲ್ಲಿಯ ಲೋಕಮಾನ್ಯ ರಂಗಮಂದಿರದಲ್ಲಿ ರಂಗಸಂಪದ ವತಿಯಿಂದ ಮಾ.27ರಿಂದ 29ರವರೆಗೆ ಚೈತ್ರ ನಾಟಕೋತ್ಸವ ಆಯೋಜಿಸಲಾಗಿದೆ’ ಎಂದು ರಂಗಸಂಪದ ಅಧ್ಯಕ್ಷ ಅರವಿಂದ ಕುಲಕರ್ಣಿ ಹೇಳಿದರು.

ಇಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಂಗಸಂಪದ ಹವ್ಯಾಸಿ ಕಲಾವಿದರ ತಂಡವಾಗಿದ್ದು, 47 ವರ್ಷಗಳ ಇತಿಹಾಸ ಹೊಂದಿದೆ. ಗಡಿಯಲ್ಲಿ ಭಾಷಾ ಸಮಸ್ಯೆ ಮಧ್ಯೆಯೂ ನಾವು ನಾಟಕ ಪರಂಪರೆ ಮುಂದುವರಿಸಿಕೊಂಡು ಬಂದಿದ್ದೇವೆ. ಪ್ರತಿವರ್ಷ 10ರಿಂದ 12 ನಾಟಕ ಪ್ರದರ್ಶಿಸುತ್ತೇವೆ’ ಎಂದರು.

‘27ರಂದು ಸಂಜೆ 5.30ಕ್ಕೆ ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮ ನಡೆಯಲಿದ್ದು, ಸಾಹಿತಿ ಸರಜೂ ಕಾಟ್ಕರ್ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಯಾಗಿ ಭಾರತೀಯ ಜೀವ ವಿಮೆ ನಿಗಮದ ಬೆಳಗಾವಿ ವಿಭಾಗದ ಹಿರಿಯ ಅಧಿಕಾರಿ ಬಿ.ಪಿ.ರವಿ ಆಗಮಿಸುವರು. ಇದೇವೇಳೆ, ರಂಗಭೂಮಿ ಕಲಾವಿದ ವಿನಯ ಕುಲಕರ್ಣಿ ಅವರಿಗೆ ರಂಗಸಖಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ನಂತರ ಬೆಂಗಳೂರಿನ ಕಾಜಾಣ ತಂಡದವರು ‘ಪಂಚಗವ್ಯ’ ಏಕವ್ಯಕ್ತಿ ಪ್ರದರ್ಶನ ನಡೆಸಿಕೊಡುವರು’ ಎಂದು ತಿಳಿಸಿದರು.

‘28ರಂದು ಸಂಜೆ 6.30ಕ್ಕೆ ರಂಗಸಂಪದ ತಂಡದವರು ‘ಭಾನುಮತಿ’ ನಾಟಕ ಪ್ರದರ್ಶಿಸುವರು. 29ರಂದು ಸಂಜೆ 6ಕ್ಕೆ ಹನಿಗವಿ ಎಚ್.ದುಂಡಿರಾಜ್ ಅವರೊಂದಿಗೆ ಸಂವಾದ ಕಾರ್ಯಕ್ರಮವಿದೆ. ನಂತರ ರಂಗಸಂಪದ ತಂಡದವರು ‘ಪುಕ್ಕಟೆ ಸಲಹೆ’ ನಾಟಕ ಪ್ರದರ್ಶಿಸುವರು’ ಎಂದರು.

ಚಿದಾನಂದ ವಾಳ್ಕೆ, ರಾಮಚಂದ್ರ ಕಟ್ಟಿ, ಗುರುನಾಥ ಕುಲಕರ್ಣಿ, ಪ್ರಸಾದ ಕಾರಜೋಳ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.