ಬೆಳಗಾವಿ: ಎಲ್ಪಿಜಿ ಸಿಲಿಂಡರ್ ಹಾಗೂ ಇಂಧನ ತೈಲಗಳ ದರ ಏರಿಕೆ ಮಾಡಿದ ಕೇಂದ್ರ ಸರ್ಕಾರದ ಕ್ರಮ ಖಂಡಿಸಿ, ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಮುಖಂಡರು ನಗರದಲ್ಲಿ ಶನಿವಾರ ತೀವ್ರ ಪ್ರತಿಭಟನೆ ನಡೆಸಿದರು. ನಡು ರಸ್ತೆಯಲ್ಲೇ ಕಟ್ಟಿಗೆ ಒಲೆ ಹೂಡಿ, ಚಹಾ ತಯಾರಿಸಿ, ಸಿಲಿಂಡರ್ಗಳನ್ನು ತಲೆ ಮೇಲೆ ಹೊತ್ತು ಆಕ್ರೋಶ ಹೊರಹಾಕಿದರು.

ಇಲ್ಲಿನ ರಾಣಿ ಚನ್ನಮ್ಮ ವೃತ್ತದಲ್ಲಿ ಸಮಾವೇಶಗೊಂಡ ಕಾರ್ಯಕರ್ತೆಯರು, ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆ ಮೊಳಗಿಸಿದರು.

ಚನ್ನಮ್ಮ ವೃತ್ತದಲ್ಲಿಯೇ ಕಲ್ಲುಗಳನ್ನು ಇಟ್ಟು ಒಲೆ ಹೂಡಿ, ಕಟ್ಟಿಗೆಗೆ ಬೆಂಕಿ ಹಚ್ಚಿ ಚಹಾ ಹಾಗೂ ನೀರು ಕಾಯಿಸಿದರು. ಕೇಂದ್ರ ಸರ್ಕಾರ ಅನಿಲ ದರ ಹೆಚ್ಚಳ ಮಾಡಿದ್ದರಿಂದ ಜನ ಮತ್ತೆ ಕಟ್ಟಿಗೆಯ ಒಲೆ ಹಚ್ಚಬೇಕಾಗಿದೆ ಎಂದು ಹರಿಹಾಯ್ದರು.

ಪ್ರತಿಭಟನೆ ನೇತೃತ್ವ ವಹಿಸಿದ್ದ ಮಹಿಳಾ ಕಾಂಗ್ರೆಸ್ ನಾಯಕ ಆಯೇಷ ಸನದಿ ಮಾತನಾಡಿ, ‘ದೇಶದಲ್ಲಿ ಸಿಲಿಂಡರ್ ಇಲ್ಲದೇ ಪರಿಸ್ಥಿತಿ ಬಿಗಡಾಯಿಸಿದೆ. ಆದರೆ, ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಗೆಲ್ಲುವ ಉದ್ದೇಶದಿಂದ ಪ್ರಧಾನಿ ಹಾಗೂ ಇಡೀ ಕೇಂದ್ರ ಸರ್ಕಾರ ಸುಳ್ಳು ಹೇಳಿತು. ಇಡೀ ದೇಶಕ್ಕೆ ಆರು ತಿಂಗಳು ಸಾಕಾಗುವಷ್ಟು ಸಿಲಿಂಡರ್ ಸಂಗ್ರಹವಿದೆ ಎಂದು ಪ್ರಧಾನಿ ದೇಶದ ಜನರ ದಾರಿ ತಪ್ಪಿಸಿದರು. ಚುನಾವಣೆ ಮುಗಿದ ಬಳಿಕ ಏಕಾಏಕಿ ದೊಡ್ಡ ಮೊತ್ತದ ದರ ಏರಿಸಿದ್ದಾರೆ. ಇವರಿಗೆ ನಾಚಿಗೆ ಆಗಬೇಕು’ ಎಂದು ಕಿಡಿ ಕಾರಿದರು.

‘ಪ್ರಧಾನಿ ಬೇರೆಬೇರೆ ದೇಶಗಳನ್ನು ಸುತ್ತಿ ಸಂಭ್ರಮ ಪಡುತ್ತಿದ್ದಾರೆ. ಚಾಕೊಲೇಟ್ಗಳನ್ನು ಕಾಣಿಕೆ ನೀಡಿ, ತಿಂದು ಸಂಭ್ರಮಿಸುತ್ತಿದ್ದಾರೆ. ಆದರೆ, ಭಾರತದಲ್ಲೇ ಆಹಾರ ಸಾಮಗ್ರಿಗಳ ದುಬಾರಿ, ಸಿಲಿಂಡರ್ ಕೊರತೆ ಕಾರಣ ಜನ ಉಪವಾಸ ಬೀಳುವಂತಾಗಿದೆ’ ಎಂದರು.

‘ಈ ಹಿಂದೆ ಯುಪಿಎ ಸರ್ಕಾರವಿದ್ದಾಗ ಸಿಲಿಂಡರ್ ದರ ಏರಿಸಿದ್ದಕ್ಕೆ ದಿವಂಗತ ಸುಷ್ಮಾ ಸ್ವರಾಜ್ ಅವರು ತಲೆ ಮೇಲೆ ಸಿಲಿಂಡರ್ ಹೊತ್ತು ಮೆರವಣಿಗೆ ಮಾಡಿದ್ದರು. ಈಗ ನಾವೂ ಸಿಲಿಂಡರ್ ಹೊತ್ತು ದೆಹಲಿಗೆ ಬಂದು ಪ್ರಧಾನಿ ಕಚೇರಿಗೆ ಮುತ್ತಿಗೆ ಹಾಕುತ್ತೇವೆ. ಇವರು ಉತ್ತರ ಕೊಡಬೇಕು’ ಎಂದರು.

‘ಮುಂದಿನ ಏಳು ದಿನಗಳ ಒಳಗಾಗಿ ಏರಿಕೆ ಮಾಡಿದ ದರ ಹಿಂತೆಗೆದುಕೊಳ್ಳಬೇಕು. ಎಲ್ಲರಿಗೂ ಸುಲಭವಾಗಿ ಸಿಲಿಂಡರ್ ಸಿಗುವಂತೆ ಕ್ರಮ ವಹಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಅನಿವಾರ್ಯವಾಗುತ್ತದೆ’ ಎಂದೂ ಎಚ್ಚರಿಸಿದರು.

ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಲತಾ ಮಾನೆ ಮಾತನಾಡಿ, ‘ಸಿಲಿಂಡರ್ ದರ ಏರಕೆ ಕಾರಣ ಅಡುಗೆ ಮನೆಯಲ್ಲಿ ಮಹಿಳೆಯರು ನೆಮ್ಮದಿ ಕಳೆದುಕೊಂಡಿದ್ದಾರೆ. ಪೆಟ್ರೋಲ್, ಡೀಸೆಲ್ ದರ ಏರಕೆ ಕಾರಣ ಪುರುಷರ ಹೊರಗೆ ನೆಮ್ಮದಿ ಕಳೆದುಕೊಂಡಿದ್ದಾರೆ. ಪ್ರಧಾನಿ ಮೋದಿ ಇಡೀ ದೇಶವನ್ನು ಆತಂಕಕ್ಕೆ ತಳ್ಳಿದ್ದಾರೆ. ತಕ್ಷಣ ದರ ಏರಿಕೆ ಹಿಂಪಡೆಯಬೇಕು’ ಎಂದರು.

ಜಿಲ್ಲಾ ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ವಿನಯ ನಾವಲಗಟ್ಟಿ ಹಾಗೂ ಹಲವರು ನೇತೃತ್ವ ವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260531-21-1982232819

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.