ಹಾರೂಗೇರಿ: ಪಟ್ಟಣದ ಜಾಗೃತಿ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರ ಸಂಘದ ಸಭಾಭವನದಲ್ಲಿ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ಬೆಳಗಾವಿ ಪ್ರಾಂತದ ವತಿಯಿಂದ ಅಥಣಿ, ರಾಯಬಾಗ ಹಾಗೂ ಮೂಡಲಗಿ ತಾಲ್ಲೂಕಿನ ವಿವಿಧ ಸಹಕಾರಿ ಸಂಘಗಳ ಪದಾಧಿಕಾರಿಗಳು ಮತ್ತು ಸಿಬ್ಬಂದಿಗೆ ಆಯೋಜಿಸಿದ್ದ ವಿಷಯಾಧಾರಿತ ತರಬೇತಿ ಶಿಬಿರ ಯಶಸ್ವಿಯಾಯಿತು.

ರಾಯಬಾಗ ಸಹಕಾರಿ ಅಭಿವೃದ್ಧಿ ಅಧಿಕಾರಿ ಶಂಕರ ಕರಬಸಣ್ಣವರ ಜ್ಯೋತಿ ಬೆಳಗಿಸಿ ಮಾತನಾಡಿ, ‘ಸಹಕಾರ ಸಂಸ್ಥೆಗಳು ಸದಸ್ಯರ ವಿಶ್ವಾಸ ಗಳಿಸಿಕೊಂಡು ಪಾರದರ್ಶಕ ಆಡಳಿತ, ಪರಿಣಾಮಕಾರಿ ನಿರ್ವಹಣೆ ಹಾಗೂ ಆರ್ಥಿಕ ಶಿಸ್ತು ಅಳವಡಿಸಿಕೊಂಡಾಗ ಮಾತ್ರ ದೀರ್ಘಕಾಲಿಕ ಅಭಿವೃದ್ಧಿ ಸಾಧಿಸಲು ಸಾಧ್ಯ’ ಎಂದು ಹೇಳಿದರು.

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಮಹಾಂತೇಶ ಹೊಸಪೇಟಿ ‘ಸಹಕಾರಿ ಸಂಘಗಳ ನಡೆ– ಸುಸ್ಥಿರ ಅಭಿವೃದ್ಧಿಯ ಕಡೆ’ ಕುರಿತು ಸಮಗ್ರ ಮಾಹಿತಿ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ಬೆಂಗಳೂರು ಸದಸ್ಯ ಜಗದೀಶ ಕವಟಗಿಮಠ ಮಾತನಾಡಿದರು.

ಸಹಕಾರಿಯ ಅಧ್ಯಕ್ಷ ನೇಮಣ್ಣ ನಾಗಾವಿ, ನಿರ್ದೇಶಕರಾದ ಸಿದ್ದಣ್ಣ ನಾಗನೂರ, ತವನಪ್ಪ ಬದನಿಕಾಯಿ, ಶ್ರೀಪಾಲ ಕರ್ಣವಾಡಿ, ದಯಾನಂದ ಸದಲಗಿ, ಪ್ರಧಾನ ವ್ಯವಸ್ಥಾಪಕ ಚಂದ್ರಕಾಂತ ಆಸಂಗಿ, ಲೆಕ್ಕಾಧಿಕಾರಿ ಧರೆಪ್ಪ ಸವದತ್ತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಅಭಿವೃದ್ಧಿ ಅಧಿಕಾರಿ ಜವಾಹರ ಮೊಗ್ಗಣ್ಣವರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260603-21-543648609

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.