ಬೆಳಗಾವಿ: ‘ಮೂರು ವರ್ಷಕ್ಕೊಮ್ಮೆ ಆಸ್ತಿ ತೆರಿಗೆ ಪರಿಷ್ಕರಿಸಬೇಕು. ಆದರೆ, ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಸತತ ಮೂರು ವರ್ಷಗಳಲ್ಲಿ ಮೂರು ಬಾರಿ ಆಸ್ತಿ ತೆರಿಗೆ ಹೆಚ್ಚಿಸಲಾಗಿದೆ. ಈಗ ಅಧಿಕಾರದಲ್ಲಿರುವ ಸದಸ್ಯರು ಜನರ ಹಿತಾಸಕ್ತಿ ಕಾಪಾಡುವಲ್ಲಿ ವಿಫಲವಾಗಿದ್ದಾರೆ’ ಎಂದು ಮಾಜಿ ಮೇಯರ್, ಮಾಜಿ ಉಪಮೇಯರ್ ಹಾಗೂ ಮಾಜಿ ಸದಸ್ಯರ ಸಂಘದ ಗೌರವಾಧ್ಯಕ್ಷ ರಮೇಶ ಕುಡಚಿ ದೂರಿದರು.

ಇಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪಾಲಿಕೆ ಸದಸ್ಯರು ಜನರ ಹಿತಾಸಕ್ತಿ ಕಡೆಗಣಿಸಿದ್ದಾರೆ. ಅಧಿಕಾರಿಗಳು ತಮ್ಮ ಅವಶ್ಯಕತೆಗೆ ಅನುಗುಣವಾಗಿ ಕೆಲಸಗಳನ್ನು ಮಾಡಿಸಿಕೊಳ್ಳುತ್ತಿದ್ದಾರೆ’ ಎಂದು ಆಪಾದಿಸಿದರು.

‘ಕೆಎಂಸಿ ಕಾಯ್ದೆಗೆ ತಿದ್ದುಪಡಿ ತರಲಾಗಿದ್ದು, ಮೂರು ವರ್ಷಕ್ಕೊಮ್ಮೆ ಆಸ್ತಿ ತೆರಿಗೆ ಪರಿಷ್ಕರಣೆಗೆ ಅವಕಾಶವಿದೆ. ಬೆಳಗಾವಿ ಮಹಾನಗರ ಪಾಲಿಕೆಯೂ ಸ್ಥಳೀಯಮಟ್ಟದ ಸ್ವಂತ ಸರ್ಕಾರವಾಗಿದ್ದು, ಜನರ ಹಿತಾಸಕ್ತಿಗೆ ಪೂರಕವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕೇ ಹೊರತು ಅಧಿಕಾರಿಗಳ ಇಚ್ಛೆಯಂತೆ ಅಲ್ಲ’ ಎಂದರು.

‘ಪಾಲಿಕೆಯಲ್ಲಿ ಸ್ಥಾಯಿ ಸಮಿತಿಗಳು ತೆಗೆದುಕೊಳ್ಳುವ ಯಾವುದೇ ನಿರ್ಧಾರಗಳು, ಕಾನೂನುಗಳು ಜನರ ಹಿತಾಸಕ್ತಿಗೆ ವಿರುದ್ಧವಾಗಿದ್ದರೆ, ಪರಿಷತ್ ಅವುಗಳನ್ನು ರದ್ದುಪಡಿಸಬೇಕು’ ಎಂದೂ ತಿಳಿಸಿದರು.

‘ಪಾಲಿಕೆಯಲ್ಲಿ ಈಚೆಗೆ ಮಂಡನೆಯಾದ ಬಜೆಟ್ ಅನೇಕ ನ್ಯೂನತೆಗಳಿಂದ ಕೂಡಿದೆ. ಈಗ ಲಭ್ಯವಿರುವ ಅನುದಾನ ಮತ್ತು ಬರಬೇಕಿರುವ ಬಾಕಿ ಮೊತ್ತವನ್ನೆಲ್ಲ ವಿಶ್ಲೇಷಿಸಿ ಬಜೆಟ್ ಮಂಡಿಸಬೇಕು. ಆದರೆ, ಹೆಚ್ಚಿನ ಬಾಕಿ ಉಳಿದಿದ್ದರೂ ಹೆಚ್ಚುವರಿ ಬಜೆಟ್ ಮಂಡಿಸಿದ್ದು ಸರಿಯಲ್ಲ. ಇದು ಕೊರತೆಗಳಿಂದ ಕೂಡಿದ ಬಜೆಟ್ ಆಗಿದೆಯೇ ಹೊರತು, ಹೆಚ್ಚುವರಿ ಅಲ್ಲ’ ಎಂದು ಆಪಾದಿಸಿದರು.

‘ಹೆಸ್ಕಾಂ ಹಾಗೂ ವಿವಿಧ ಪೈಪ್ಲೈನ್, ಕೇಬಲ್ ಹಾಕಿರುವ ನಾನಾ ಕಂಪನಿಗಳು ಉಳಿಸಿಕೊಂಡು ಬಾಕಿ ಮೊತ್ತ ಸಂಗ್ರಹಿಸಿಲ್ಲ. ರಾಜ್ಯ ಹಣಕಾಸು ಆಯೋಗವು ಪಾಲಿಕೆಗೆ ಹಣ ನೀಡಿ ಕಡಿತಗೊಳಿಸಿದ ವಿಚಾರ ಕಂದಾಯ ವಿಭಾಗದ ಅಧಿಕಾರಿಗಳಿಗೆ ಗೊತ್ತಿಲ್ಲ’ ಎಂದು ಆಪಾದಿಸಿದರು.

‘ನಗರಕ್ಕೆ ಕುಡಿಯುವ ನೀರು ಪಡೆಯಲು ಜಾರಿಗೆ ತಂದ ಹಿಡಕಲ್ ಯೋಜನೆ ಅನುಷ್ಠಾನಕ್ಕಾಗಿ ಪಾಲಿಕೆಯಿಂದ ಹೆಚ್ಚುವರಿ ಕೊಡುಗೆ ನೀಡಿದ್ದು, ವಿವಿಧ ಬಾಕಿ ಬಿಲ್ಗಳನ್ನು ನಿರ್ಲಕ್ಷಿಸಲಾಗಿದೆ’ ಎಂದು ದೂರಿದರು.

‘ಸ್ಮಾರ್ಟ್ಸಿಟಿ ಯೋಜನೆಯಡಿ ನಿರ್ಮಿಸಿದ ರಸ್ತೆಗಳನ್ನು ಈಗ 24x7 ಕುಡಿಯುವ ನೀರಿನ ಸರಬರಾಜು ಪೈಪ್ಲೈನ್ಗಾಗಿ ಈಗ ಅಗೆಯುತ್ತಿದ್ದಾರೆ. ಇದು ವಿವಿಧ ಇಲಾಖೆಗಳ ಮಧ್ಯೆ ಇರುವ ಸಮನ್ವಯದ ಕೊರತೆ ಎತ್ತಿ ತೋರಿಸುತ್ತದೆ’ ಎಂದು ಆಪಾದಿಸಿದರು.

ಸಂಘದ ಅಧ್ಯಕ್ಷ ಶಿವಾಜಿ ಸುಂಠಕರ, ಕಾರ್ಯದರ್ಶಿ ದೀಪಕ ವಾಘೇಲಾ, ನಾಗೇಶ ಸಾತೇರಿ, ಮಾಲೋಜಿರಾವ್ ಅಷ್ಟೇಕರ, ವಂದನಾ ಬೆಳಗುಂದಕರ, ಎನ್.ಬಿ.ನಿರ್ವಾಣಿ, ರೇಣು ಕಿಲ್ಲೇಕರ, ಸುನೀಲ ಬಾಳೇಕುಂದ್ರಿ, ನೇತಾಜಿ ಜಾಧವ, ಶಿವನಗೌಡ ಪಾಟೀಲ, ರಂಜಿತ್ ಚವ್ಹಾಣ ಪಾಟೀಲ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.