ಚನ್ನಮ್ಮನ ಕಿತ್ತೂರು: ಇಲ್ಲಿಯ ಶಿವಾ ಪೆಟ್ರೋಲ್ ಪಂಪ್ ನಲ್ಲಿ ರಾತ್ರಿ ವೇಳೆ ಮಲಗಿಕೊಂಡಿದ್ದ ಇಬ್ಬರು ಕೆಲಸಗಾರರನ್ನು ಕೊಡಲಿಯಿಂದ ಹೊಡೆದು ಭೀಕರವಾಗಿ ಕೊಲೆ ಮಾಡಿದವರಿಗೆ ಬೆಳಗಾವಿಯ 1 ನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ನ್ಯಾಯಾಧೀಶ ಸುಭಾಸ ಸಂಕದ ಜೀವಾವಧಿ ಶಿಕ್ಷೆ ಹಾಗೂ ₹5.50 ಲಕ್ಷ ದಂಡ ವಿಧಿಸಿ ಈಚೆಗೆ ತೀರ್ಪು ನೀಡಿದ್ದಾರೆ. ಧಾರವಾಡ ತಾಲ್ಲೂಕಿನ ಕಲ್ಲಾಪುರ ಗ್ರಾಮದ ಕರೆಮ್ಮ ಗುಡಿ ಓಣಿಯ ಭೀಮಪ್ಪ ಮಲ್ಲಪ್ಪ ಪೀರತಪ್ಪನವರ (27) ಶಿಕ್ಷೆಗೊಳಗಾದ ಅಪರಾಧಿ.

2019ರ ಮೇ 15ರ ರಾತ್ರಿ ಪಂಪ್ ಹೊರಗಡೆ ಮಲಗಿದ್ದ ಚನ್ನಮ್ಮನ ಕಿತ್ತೂರು ತಾಲ್ಲೂಕಿನ ದೇವಗಾಂವ-ಲಿಂಗದಳ್ಳಿ ಗ್ರಾಮದ ಮಂಜುನಾಥ ಈರಪ್ಪ ಪಟ್ಟಣಶೆಟ್ಟಿ (23) ಹಾಗೂ ಪಂಪ್ ಕಚೇರಿಯ ಒಳಗೆ ಮಲಗಿದ್ದ ತಿಗಡೊಳ್ಳಿ ಗ್ರಾಮದ ಮುಸ್ತಾಕ್ ಮಹಮ್ಮದಸಿರಾಜ್ ಬೀಡಿ (35) ಅವರನ್ನು ಭೀಮಪ್ಪ ಕೊಡಲಿಯಿಂದ ಹೊಡೆದು ಕೊಲೆ ಮಾಡಿ, ಒಳಗಿದ್ದ ದುಡ್ಡನ್ನೂ ದೋಚಿಕೊಂಡು ಹೋಗಿದ್ದ.

ಪ್ರಕರಣದ ಬೆನ್ನಟ್ಟಿದ್ದ ಕಿತ್ತೂರು ಪೊಲೀಸರು ಭೀಮಪ್ಪನನ್ನು ಬಂಧಿಸಿದ್ದರು. ಅಂದಿನ ಸಿಪಿಐ ರಾಘವೇಂದ್ರ ಹವಾಲ್ದಾರ್, ಎಸ್ಐ ಶ್ರೀಕಾಂತ ತೋಟಗಿ ಆರೋಪಪಟ್ಟಿ ಸಲ್ಲಿಸಿದ್ದರು. ಸರ್ಕಾರಿ ಅಭಿಯೋಜಕ ಆರ್. ಎ. ಗಡಕರಿ ವಾದ ಮಂಡಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260519-21-1511220061

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.