ಬೆಳಗಾವಿ: ‘ಡಿಸಿಸಿ ಬ್ಯಾಂಕ್ ರೈತರ ಬ್ಯಾಂಕ್ ಆಗಿದ್ದು, ನಷ್ಟದಲ್ಲಿರುವ ಸಕ್ಕರೆ ಕಾರ್ಖಾನೆಗಳಿಗೆ ಕೋಟ್ಯಂತರ ರೂಪಾಯಿ ಸಾಲ ನೀಡುತ್ತಿರುವುದು ಖಂಡನೀಯ’ ಎಂದು ರೈತ ಮುಖಂಡ ಶಶಿಕಾಂತ ಗುರೂಜಿ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಕ್ಕರೆ ಕಾರ್ಖಾನೆಗಳಿಗೆ ₹700 ಕೋಟಿ ಸಾಲ ನೀಡುವುದಾಗಿ ಡಿಸಿಸಿ ಬ್ಯಾಂಕ್ ಸಭೆಯಲ್ಲಿ ನಿರ್ಧರಿಸಲಾಗಿದೆ. ನಷ್ಟದಲ್ಲಿರುವ ಕಾರ್ಖಾನೆಗಳಿಗೆ ಸಾಲ ನೀಡುವುದು ಎಷ್ಟು ಸರಿ?’ ಎಂದರು.

‘ಈ ಹಿಂದೆ ಡಿಸಿಸಿ ಬ್ಯಾಂಕ್ ಅಧ್ಯಕ್ಷರು ರೈತರಿಗೆ ಸಾಲ ಕೊಟ್ಟರೆ ನಷ್ಟವಾಗುತ್ತದೆ ಎಂದು ಹೇಳಿದ್ದರು. ಆದರೆ, ಈಗ ದಿವಾಳಿ ಆಗಿರುವ ಸಕ್ಕರೆ ಕಾರ್ಖಾನೆಗಳಿಗೆ ಸಾಲ ಏಕೆ ಕೊಡುತ್ತಿದ್ದಾರೆ? ಸಂಗಮ ಸಕ್ಕರೆ ಕಾರ್ಖಾನೆಗೆ ₹297 ಕೋಟಿ ಸಾಲ ನೀಡುವ ಪ್ರಸ್ತಾವ ಸರಿಯಲ್ಲ. ಇದೇ ರೀತಿ ಮಾಜಿ ಶಾಸಕ ಸಂಜಯ ಪಾಟೀಲ ₹123 ಕೋಟಿ ಸಾಲ ಕೇಳಿರುವುದು, ಎಂ.ಕೆ.ಹುಬ್ಬಳ್ಳಿಯ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ₹175 ಕೋಟಿ ನಷ್ಟದಲ್ಲಿದೆ. ಆದರೂ ₹75 ಕೋಟಿ ಸಾಲಕ್ಕೆ ಮನವಿ ಮಾಡಿದೆ. ಹರ್ಷ ಶುಗರ್ಗೆ ₹50 ಕೋಟಿ, ಬೆಲಗಾಂ ಶುಗರ್ಸ್ಗೆ₹16 ಕೋಟಿ ಹಾಗೂ ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆಗೆ ₹245 ಕೋಟಿ ಸಾಲ ಬೇಡಿಕೆ ಇಡಲಾಗಿದೆ’ ಎಂದರು.

ಮುಖಂಡ ಚೂನಪ್ಪ ಪೂಜಾರಿ ಮಾತನಾಡಿ, ‘ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷರು ಸಕ್ಕರೆ ಕಾರ್ಖಾನೆಗಳಿಗೆ ಸುಮಾರು ₹700 ಕೋಟಿ ಸಾಲ ನೀಡಲು ಮುಂದಾಗಿದ್ದಾರೆ. ಈ ಹಣವನ್ನು ರೈತರಿಗೆ ಸಾಲ ಸೌಲಭ್ಯ ನೀಡಬೇಕು’ ಎಂದರು.

ಪ್ರೇಮ ಚೌಗಲಾ, ಪ್ರಕಾಶ ಉಮರಾಣಿ, ಶಿವಾನಂದ ಮೆಕ್ಕಳಕಿ, ಶಿವಾನಂದ ಮುಗಳಿಹಾಳ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260419-21-792089551

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.