ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ-ದೆಹಲಿ ವಿಮಾನ: ಮಾ.27ರಿಂದ ಪ್ರತಿದಿನ ಸಂಚಾರ, ಇಲ್ಲಿದೆ ಸಮಯ, ದರ ವಿವರ

Last Updated 11 ಮಾರ್ಚ್ 2022, 7:37 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿಂದ ದೆಹಲಿಗೆ ನಿತ್ಯವೂ ವಿಮಾನ ಕಾರ್ಯಾಚರಣೆ ನಡೆಸುವುದಾಗಿ ಸ್ಪೈಸ್ ಜೆಟ್ ಕಂಪನಿ ತಿಳಿಸಿದೆ.

ದೆಹಲಿ-ಬೆಳಗಾವಿ ನೇರ ವಿಮಾನ ಹಾರಾಟ ಹೋದ ವರ್ಷದ ಆಗಸ್ಟ್‌ನಲ್ಲಿ ಪ್ರಾರಂಭವಾಗಿತ್ತು. ವಾರದಲ್ಲಿ ಎರಡು ದಿನಗಳು ಕಾರ್ಯಾಚರಣೆ ಇತ್ತು. ಈಗ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದರಿಂದ ನಿತ್ಯವೂ ಹಾರಾಟಕ್ಕೆ ನಿರ್ಧರಿಸಿದೆ.

ಮಾರ್ಚ್ 27ರಿಂದ ವಾರದ ಎಲ್ಲ ದಿನವೂ ವಿಮಾನ ಹಾರಾಟ ನಡೆಸಲಿದೆ. ಪ್ರಯಾಣ ದರವು ₹ 5,686ರಿಂದ ಆರಂಭಗೊಳ್ಳಲಿದೆ. ಬುಕಿಂಗ್ ಕೂಡ ಆರಂಭವಾಗಿದೆ. ಬೆಳಿಗ್ಗೆ 6.05ಕ್ಕೆ ದೆಹಲಿಯಿಂದ ಹೊರಡುವ ವಿಮಾನವು ಬೆಳಿಗ್ಗೆ 8.45ಕ್ಕೆ ಬೆಳಗಾವಿಗೆ ತಲುಪಲಿದೆ.

ಇಲ್ಲಿಂದ 9.15ಕ್ಕೆ ಹೊರಟು 11.45ಕ್ಕೆ ದೆಹಲಿ ತಲುಪಲಿದೆ. ಉತ್ತರ ಕರ್ನಾಟಕದಲ್ಲಿ ಇದೇ ಮೊದಲಿಗೆ ದೆಹಲಿಗೆ ನಿತ್ಯವೂ ವಿಮಾನ ಕಾರ್ಯಾಚರಣೆ ನಡೆಯುತ್ತಿದೆ ಎಂದು ಕಂಪನಿಯು ತನ್ನ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT