ಹುಕ್ಕೇರಿ: ಜನರಿಗೆ ಅನುಕೂಲವಾಗುವ ಕಾಮಗಾರಿಯನ್ನು ನಿಗದಿತ ಸಮಯದಲ್ಲಿ ಮುಗಿಸಬೇಕು ಎಂದು ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಸೂಚಿಸಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಸಾರ್ವಜನಿಕ ಕುಂದು ಕೊರತೆ’ ಸಭೆಯಲ್ಲಿ ಮಾತನಾಡಿದರು.

ಸಮಾಜ ಕಲ್ಯಾಣ ಇಲಾಖೆಯು ಸಲ್ಲಿಸಿದ 17 ಕಟ್ಟಡ ಪ್ರಸ್ತಾವ ಮತ್ತು ಪ್ರಗತಿ, ಅಲ್ಪಸಂಖ್ಯಾತರ ಇಲಾಖೆಗೆ ಬೇಕಾದ ಕಟ್ಟಡ ಮತ್ತು ಅನುದಾನ ಕುರಿತು, ಹಿಂದುಳಿದ ವರ್ಗಗಳ ಇಲಾಖೆಗೆ ಮಂಜೂರಾದ ಸಮುದಾಯ ಭವನ ಕುರಿತು ಮಾಹಿತಿ ಪಡೆದರು. ಶಿರಗಾಂವ ಗ್ರಾಮಕ್ಕೆ ಮಂಜೂರಾದ ಸಮುದಾಯ ಭವನವನ್ನು ಮದಿಹಳ್ಳಿಗೆ ವರ್ಗಾಯಿಸುವಂತೆ ವಕೀಲ ಭೀಮಸೇನ ಬಾಗಿ ಮನವಿ ಮಾಡಿದರು. ಅದಕ್ಕೆ ಸಚಿವರು ಸಮ್ಮತಿಸಿ ಅಧಿಕಾರಿಗಳಿಗೆ ಸೂಚಿಸಿದರು.

ವಿಶೇಷ ಸಭೆ: ಪಡಿತರ ಚೀಟಿಯ ಮೂಲಕ ವಿತರಿಸುವ ರೇಷನ್ ಅಂಗಡಿಯವರಿಗೆ ವಿಶೇಷ ಸಭೆಯನ್ನು ಕರೆಯುವಂತೆ ಉಪಸ್ಥಿತರಿದ್ದ ತಹಶೀಲ್ದಾರ್ ಬಲರಾಮ ಕಟ್ಟಿಮನಿಗೆ ಸಚಿವರು ಸೂಚಿಸಿದರು.

ಶಾಲೆಗಳಿಗೆ ಬೇಕಾದ ಹೆಚ್ಚುವರಿ ಕೊಠಡಿ ಕುರಿತು ಬಿಇಒ ಪ್ರಭಾವತಿ ಪಾಟೀಲ ಮಾಹಿತಿ ನೀಡಿ ಹೋದ ವರ್ಷದ ಬೇಡಿಕೆ ಜತೆ ಈ ವರ್ಷ ಮತ್ತೆ 129 ಹೆಚ್ಚುವರಿ ಕೊಠಡಿ ಬೇಕಾಗಿವೆ ಎಂದು ಸಭೆಗೆ ಮಾಹಿತಿ ನೀಡಿದರು. ಪ್ರತಿ ಗ್ರಾಮದಲ್ಲಿ ಕನಿಷ್ಟ 10 ಎಕರೆ ಹೆಚ್ಚುವರಿ ಭೂಮಿ ಕಾಯ್ದಿರಿಸಿಕೊಳ್ಳುವಂತೆ ಸಚಿವರು ಬಿಇಒಗೆ ಸೂಚಿಸಿ ಅದಕ್ಕೆ ಸಹಕರಿಸುವಂತೆ ಆರ್.ಎಫ್.ಒ.ಬಿ.ಎಲ್.ಸನದಿಗೆ ಸೂಚಿಸಿದರು.

ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಜನರು ರಸ್ತೆ, ಕುಡಿಯುವ ನೀರು ಸೇರಿದಂತೆ ತಮ್ಮ ಭಾಗದ ಸಮಸ್ಯೆ ಅರುಹಿದರು. ಸಮಸ್ಯೆ ಆಲಿಸಿದ ಸಚಿವರು ಸಂಬಂಧಿತ ಅಧಿಕಾರಿಗಳಿಗೆ ಬಗೆಹರಿಸುವಂತೆ ಹೇಳಿದರು.

ತಾಲ್ಲೂಕು ಪಂಚಾಯಿತಿ ಇಒ ಟಿ.ಆರ್. ಮಲ್ಲಾಡದ, ಪಿಡಬ್ಲೂಡಿ ಎಇಇ ಪ್ರಶಾಂತ ಮಾಡ್ಯಾಳ, ಮುಖಂಡರಾದ ಮಹಾಂತೇಶ ಮಗದುಮ್ಮ, ರವೀಂದ್ರ ಜಿಂಡ್ರಾಳಿ, ರಾಜು ರೇವಣ್ಣವರ, ಚಂದು ಗಂಗನ್ನವರ, ಸಲಿಂ ಕಳಾವಂತ, ಅಪ್ಪಾಸಾಬ ಸಾರಾಪುರೆ,ಭೀಮಪ್ಪ ಚೌಗಲಾ, ಪುರಸಭೆ ಮಾಜಿ ಅಧ್ಯಕ್ಷ ಇಮ್ರಾನ ಮೊಮೀನ್, ಅಧಿಕಾರಿಗಳಾದ ಪಿಐ ಶಿವಶರಣ ಅವಜಿ, ಮಹೇಶ್ ಭಜಂತ್ರಿ, ಹೊಳೆಪ್ಪ, ದೇವಪ್ಪಗೋಳ, ಡಾ.ಉದಯ ಕುಡಚಿ, ಮಠದ, ಪ್ರಶಾಂತ ಮುನ್ನೋಳಿ, ಎಂ.ಆರ್.ಕಳ್ಳಿಮನಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260412-21-2072084448

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.