ಬೆಳಗಾವಿ: ಜಿಲ್ಲೆಯ ಖಾನಾಪುರ ತಾಲ್ಲೂಕಿನ ಹತ್ತರವಾಡ ಗ್ರಾಮದಲ್ಲಿ ಈಚೆಗೆ, ತನಗೆ ಇಷ್ಟವಿಲ್ಲದ ಬಟ್ಟೆ ಹಾಕಿದ್ದಾಳೆ ಎಂದು ಕೋಪಗೊಂಡ ವ್ಯಕ್ತಿಯೊಬ್ಬ ತನ್ನ ಪತ್ನಿಗೆ ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿದ್ದಾನೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಹತ್ತರವಾಡ ಗ್ರಾಮದ ನಿವಾಸಿ ಕೃಷ್ಣಾಜಿ ಪರಶುರಾಮ ಪಾಟೀಲ (29) ಬಂಧಿತ. ಗಂಭೀರವಾಗಿ ಗಾಯಗೊಂಡ ಮಂಜುಳಾ (27) ಅವರನ್ನು ಚಿಕಿತ್ಸೆಗಾಗಿ ಗೋವಾ ರಾಜ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಎಂಟು ವರ್ಷಗಳ ಹಿಂದೆ ಕೃಷ್ಣಾಜಿ ಹಾಗೂ ಮಂಜುಳಾ ವಿವಾಹವಾಗಿತ್ತು. ಕುಟುಂಬದ ಸಮೇತ ಖಾನಾಪುರ ತಾಲ್ಲೂಕಿನ ನಂದಗಡದ ದುರ್ಗಾ ನಗರದಲ್ಲಿನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.

ಎರಡು ದಿನಗಳ ಹಿಂದೆ ಪತ್ನಿ ಗೌನ್ ಹಾಕಿಕೊಂಡಿದ್ದನ್ನು ಪ್ರಶ್ನಿಸಿದ ಕೃಷ್ಣಾಜಿ ‘ಕೂಡಲೇ ತೆಗೆ, ಇಲ್ಲವಾದರೆ ಸುಮ್ಮನೇ ಬಿಡುವುದಿಲ್ಲ’ ಎಂದು ಬೆದರಿಕೆ ಹಾಕಿದ. ಇದರಿಂದ ಪತಿ– ಪತ್ನಿ ಮಧ್ಯೆ ತಂಟೆ ಶುರುವಾಯಿತು. ನಂತರ ಕಡ್ಡಿಪೊಟ್ಟಣದಿಂದ ಬೆಂಕಿ ಹಚ್ಚಿ ಹೆಂಡತಿಯನ್ನು ಸುಟ್ಟು ಕೊಲೆ ಮಾಡಲು ಯತ್ನಿಸಿದ ಎಂದು ದೂರಲಾಗಿದೆ.

ಗಂಭೀರ ಗಾಯಗೊಂಡ ಮಂಜುಳಾ ಅವರನ್ನು ಮೊದಲಿಗೆ ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ದಾಖಲಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗೆ ಗೋವಾದ ಬಾಂಬೋಲಿಮ್ ಮೆಡಿಕಲ್ ಕಾಲೇಜ್ ಆಸ್ಪತ್ರೆಗೆ ರವಾನಿಸಲಾಗಿದೆ. ‘ಕರಜಗಿ ಗ್ರಾಮದ ಸಂತೋಷಿ ನಾರಾಯಣ ಭಾತಖಾಂಡೆ ಅವರು ನಂದಗಡ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಮಗಳ ಮದುವೆಯಾದ ಬಳಿಕದಿಂದಲೇ ಗಂಡ ಸೇರಿದಂತೆ ಮಾವ, ಅತ್ತೆ ಹಾಗೂ ಮೈದುನರಿಂದ ನಿರಂತರ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡಲಾಗುತ್ತಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಇನ್ಸ್ಪೆಕ್ಟರ್ ರವಿಕುಮಾರ ಧರ್ಮಟ್ಟಿ ಹಾಗೂ ಪಿಎಸ್ಐ ಎಸ್.ಎಸ್. ಬದಾಮಿ ನೇತೃತ್ವದ ತಂಡ ಏ. 20ರಂದು ನಂದಗಡ ಬಸ್ ನಿಲ್ದಾಣದ ಬಳಿ ಆರೋಪಿಯನ್ನು ಬಂಧಿಸಿದೆ. ವಿಚಾರಣೆ ವೇಳೆ ಆತ ಎಸಗಿರುವ ಕೃತ್ಯ ಒಪ್ಪಿಕೊಂಡಿದ್ದಾನೆ. ಆತನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ’ ಎಂದು ಎಸ್ಪಿ ಕೆ.ರಾಮರಾಜನ್ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260423-21-1178546875

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.