ಬೆಳಗಾವಿ: ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಆಡಳಿತ ಮಂಡಳಿಯ ಬೆಳಗಾವಿ ತಾಲ್ಲೂಕು ಘಟಕದ ಚುನಾವಣೆಗೆ ಏ.11 ಮತ್ತು 12ರಂದು ನಾಮಪತ್ರ ಸಲ್ಲಿಕೆ ಅವಧಿಯಾಗಿದೆ. ಆದರೆ, ಈವರೆಗೂ ಮತದಾರರ ಪಟ್ಟಿ ಪ್ರಕಟಿಸಿಲ್ಲ. ಚುನಾವಣೆ ಕಾರ್ಯಾಲಯಕ್ಕೆ ಶನಿವಾರವೂ ಬೀಗ ಜಡಿದು ಚುನಾವಣೆ ಪ್ರಕ್ರಿಯೆ ನಿಯಮಾನುಸಾರ ನಡೆಯುತ್ತಿಲ್ಲ ಎಂದು ಆರೋಪಿಸಿ ಹಲವು ಶಿಕ್ಷಕರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ಇಲ್ಲಿನ ಚವಾಟ ಗಲ್ಲಿಯಲ್ಲಿನ ಸಂಘದ ಕಚೇರಿ ಭೇಟಿ ನೀಡಿದ ಶಿಕ್ಷಕರು, ಕಚೇರಿ ಬೀಗ ಜಡಿದಿರುವುದನ್ನು ಖಂಡಿಸಿದರು. ಅಲ್ಲದೇ, ಚುನಾವಣೆ ಶಾಖೆಯಲ್ಲಿ ಅಧಿಕೃತ ಅಂತಿಮ ಮತದಾರರ ಪಟ್ಟಿ ಪ್ರಕಟಿಸದೇ, ತಾಲ್ಲೂಕು ಘಟಕದ ಚುನಾವಣೆಯ ವೇಳಾಪಟ್ಟಿ ಅಂಟಿಸದೇ ಚುನಾವಣೆ ಸಿಬ್ಬಂದಿ ಕಳ್ಳ ದಾರಿಯಲ್ಲಿ ಚುನಾವಣೆ ನಡೆಸುತ್ತಿದ್ದಾರೆ ಎಂದು ಪ್ರತಿಭಟನಕಾರರು ದೂರಿದರು.

ಬಳಿಕ ಮಾರ್ಕೆಟ್ ಪೊಲೀಸ್ ಠಾಣೆಗೆ ತೆರಳಿದ ಶಿಕ್ಷಕರು, ನಾಮಪತ್ರ ಸಲ್ಲಿಸುವ ದಿನ ಅರ್ಧ ಕಳೆದರೂ ಕಾರ್ಯಾಲಯದಲ್ಲಿ ಚುನಾವಣಾಧಿಕಾರಿ ಇಲ್ಲ. ಒಟ್ಟಾರೆ ಚುನಾವಣೆ ಪ್ರಕ್ರಿಯೆ ನಿಯಮಾನುಸಾರ ನಡೆಯುತ್ತಿಲ್ಲ. ಹೀಗಾಗಿ, ಕೂಡಲೇ ಇದಕ್ಕೆ ತಡೆಯೊಡ್ಡಬೇಕು ಬೇಕು ಎಂದು ದೂರು ಅರ್ಜಿ ಸಲ್ಲಿಸಿದರು.

‘ಚುನಾವಣೆ ಕಚೇರಿ ಸಮಯ ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆವರೆಗೂ ಎಂದು ನಮೂದಿಸಲಾಗಿದೆ. ಆದರೆ ಇಲ್ಲಿ ಕಚೇರಿ ಸಮಯದಲ್ಲಿ ಯಾರೊಬ್ಬರೂ ಇಲ್ಲದಿರುವುದು ಚುನಾವಣೆ ಪ್ರಕ್ರಿಯೆ ಹೇಗೆ ನಡೆಯುತ್ತಿದೆ ಎನ್ನುವುದನ್ನು ತೋರಿ ಸುತ್ತದೆ’ ಎಂದು ಶಿಕ್ಷಕರಾದ ಆನಂದಗೌಡ ಕಾದ್ರೊಳ್ಳಿ ಹಾಗೂ ಅನ್ವರ್ ಲಂಗೋಟಿ ಅಸಮಾಧಾನ ವ್ಯಕ್ತಪಡಿಸಿದರು.

ಶೇಖರ್ ಕರಂಬಳ್ಕರ, ಈರಣ್ಣ ಗೂಳಪ್ಪನವರ, ರಾಜು ಲಂಬುಗೋಳ, ಆಸಿಫ್ ಅತ್ತಾರ, ಐಶ್ವರ್ಯ ಮೆನಸೆ ಹಾಗೂ ಅನುರಾಧ ತಾರೀಹಾಳ್ಕರ ಇತರರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260412-21-1678128231

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.