ಬೆಳಗಾವಿ: ಪತ್ರಿಕೆ, ಯುಟ್ಯೂಬ್ ಮತ್ತು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಪ್ರಚಾರ ಮಾಡುವುದಾಗಿ ಬೆದರಿಕೆಯೊಡ್ಡಿ ₹20 ಲಕ್ಷ ಬೇಡಿಕೆ ಇಟ್ಟ ಬಗ್ಗೆ ಮೂವರ ವಿರುದ್ಧ ಆಯುರ್ವೇದ ಔಷಧಿ ಅಂಗಡಿ ಮಾಲೀಕರೊಬ್ಬರು ಖಡೇಬಜಾರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಶನಿವಾರ ಖೂಟ್ನಲ್ಲಿ ಆಯುರ್ವೇದ ಔಷಧಗಳ ಅಂಗಡಿ ನಡೆಸುತ್ತಿರುವ ಸಾಂಗ್ಲಿ ಮೂಲಕದ ದುರ್ಗರಜ ವೈದ್ಯ (51) ಎಂಬುವವರು, ಏಕನಾಥ ಕೋಲಕಾರ, ವೀರೇಶ ಮಠಪತಿ ಮತ್ತು ಸಿದ್ದು ಸಿದ್ದಪ್ಪನವರ ಎಂಬುವವರ ವಿರುದ್ಧ ದೂರು ದಾಖಲಿಸಿದ್ದಾರೆ.

ಮೇ 19ರಂದು ಜಗಳವಾಡಿ, ಪರವಾನಗಿ ಇಲ್ಲದೇ ಜನರಿಗೆ ಕಳಪೆ ಆಯುರ್ವೇದ ವಷಧಿ ಕೊಡುತ್ತಿದ್ದೀಯಾ, ನಮ್ಮೊಂದಿಗೆ ಡೀಲ್ ಮಾಡಿಕೊಂಡರೆ ಈ ವಿಷಯ ಯಾರ ಮುಂದೆಯೂ ಹೇಳುವುದಿಲ್ಲ. ಇಲ್ಲದಿದ್ದಲ್ಲಿ ಸುಳ್ಳು ಪ್ರಚಾರ ಮಾಡುತ್ತೇವೆ ಎಂದು ಹೆದರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260528-21-1034034841

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.