ಬೆಳಗಾವಿ: ಶಸ್ತ್ರಚಿಕಿತ್ಸೆಗಾಗಿ ಹಣ ಬೇಕೆಂದು ಇಲ್ಲಿನ ಸಮಾದೇವಿ ಮಂದಿರದ ಬಳಿ ಮಹಿಳೆಯೊಬ್ಬರಿಗೆ ನಕಲಿ ಚಿನ್ನ ನೀಡಿ ವಂಚಿಸಿದ ಮಹಿಳೆ ವಿರುದ್ಧ ಖಡೇಬಜಾರ್ ಠಾಣೆಯಲ್ಲಿ ದೂರು ದಾಖಲಾಗಿದೆ.

ವೈಭವ ನಗರದ ನಿವಾಸಿ ಸುನೀತಾ ವೆಂಕಟೇಶ ದಾರಾ ವಂಚನೆಗೆ ಒಳಗಾದವರು.

‘ನಾನು ಶುಕ್ರವಾರ ಸಮಾದೇವಿ ಮಂದಿರಕ್ಕೆ ಹೋಗಿ ವಾಪಸ್ ಬರುತ್ತಿದ್ದೆ. ಆಗ ಸುಮಾರು 55 ವರ್ಷದ ಅಪರಿಚಿತ ಮಹಿಳೆಯೊಬ್ಬರು ಸಿಕ್ಕರು. ಗರ್ಭಾಶಯದ ತುರ್ತು ಚಿಕಿತ್ಸೆಗೆ ನನಗೆ ತುರ್ತಾಗಿ ಹಣ ಬೇಕಿದೆ. ನನಗೆ ಇಲ್ಲಿ ಯಾರೂ ಪರಿಚಿತರಿಲ್ಲ. ನನ್ನ ಬಳಿಯ ಚಿನ್ನಾಭರಣ ಪಡೆದು ಹಣ ಕೊಡಿ ಎಂದು ಮನವಿ ಮಾಡಿದರು. ಅದನ್ನು ನಂಬಿ ₹56 ಸಾವಿರ ಕೊಟ್ಟೆ. ಆದರೆ, ಚಿನ್ನಾಭರಣ ತಪಾಸಿಸಿದಾಗ ನಕಲಿ ಇರುವುದು ಗೊತ್ತಾಗಿದೆ’ ಎಂದು ಸುನೀತಾ ದೂರಿನಲ್ಲಿ ತಿಳಿಸಿದ್ದಾರೆ.

ಬೆಳಗಾವಿ: ಇಲ್ಲಿನ ಆಝಮ್ ನಗರದ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದ ಕೊಠಡಿಯಲ್ಲಿ ಸೋಮವಾರ ಕಾವೇರಿ ನಾಯಕ (21) ಎಂಬ ವಿದ್ಯಾರ್ಥಿನಿ ತಮ್ಮ ಜನ್ಮದಿನದಂದೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

‘ಬಿ.ಎಸ್ಸಿ ಅಂತಿಮ ವರ್ಷದ ವಿದ್ಯಾರ್ಥಿನಿಯಾಗಿದ್ದ ಕಾವೇರಿ ಅವರ ವಿವಾಹ ಈಚೆಗೆ ನಿಶ್ಚಯವಾಗಿತ್ತು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ’ ಎಂದು ಎಪಿಎಂಸಿ ಠಾಣೆ ಪೊಲೀಸರು ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260512-21-973946953

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.