ಬೆಳಗಾವಿ: ‘ತನ್ನನ್ನು ಮದುವೆ ಆಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿ ಮೋಸ ಮಾಡಿದ್ದಾರೆ ಎಂದು ಸುಳ್ಳು ಆರೋಪ ಮಾಡಿ, ಪೊಲೀಸ್ ಅಧಿಕಾರಿಗಳು ಹಾಗೂ ಪ್ರಭಾವಿ ವ್ಯಕ್ತಿಗಳಿಂದ ಹಣ ವಸೂಲಿಗೆ ಸಂಚು ರೂಪಿಸಿದ್ದ ಮಹಿಳೆಯೊಬ್ಬರನ್ನು ಬಂಧಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ತಿಳಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘ರೇಷ್ಮಾ ಶಂಕರ ಮುತಗಾ ಬಂಧಿತ ಆರೋಪಿ. ಇವರ ಮೇಲೆ ರೌಡಿಶೀಟರ್ ತೆರೆಯ ಲಾಗಿದೆ. ಮದುವೆಗೆ ಸಂಬಂಧಿಸಿದ ವಿವಿಧ ಆ್ಯಪ್ಗಳಲ್ಲಿ ಸುಂದರವಾದ ನಕಲಿ ಫೋಟೊಗಳನ್ನು ಹಾಕುವ ಈ ಮಹಿಳೆ ದೊಡ್ಡ ವ್ಯಕ್ತಿ, ಹಣವಂತರನ್ನು ಸೆಳೆಯಲು ಯತ್ನಿಸುತ್ತಿದ್ದರು. ನಿಗದಿತ ಸ್ಥಳಕ್ಕೆ ಅವರನ್ನು ಕರೆಸಿದ ಬಳಿಕ ಅತ್ಯಾಚಾರ ಎಸಗಿದ ಆರೋಪ ಮಾಡಿ ಹಣ ಕೀಳುವ ಸಂಚು ರೂಪಿಸುತ್ತಿದ್ದರು. ತನಗೆ ನ್ಯಾಯ ಕೊಡಿಸುವಂತೆ ಪೊಲೀಸರ ಬಳಿ ಹೋದಾಗ, ಅಲ್ಲಿಯೂ ಪೊಲೀಸ್ ಅಧಿಕಾರಿಯೇ ಅತ್ಯಾಚಾರ ಎಸಗಿದ್ದಾರೆ ಎಂದು ‘ಬ್ಲ್ಯಾಕ್ಮೇಲ್’ ಮಾಡುತ್ತಿದ್ದರು’ ಎಂದು ವಿವರಿಸಿದರು.

‘ಈ ಮಹಳೆ ಎಂಟು ತಿಂಗಳ ಹಿಂದೆ ಘಟಪ್ರಭಾ ಠಾಣೆಯಲ್ಲಿ ‘ತನಗೆ ಮೋಸ ಮಾಡಿ ಓಡಿ ಹೋಗಿದ್ದಾರೆ’ ಎಂದು ಒಬ್ಬ ವ್ಯಕ್ತಿ ವಿರುದ್ಧ ದೂರು ದಾಖಲಿಸಿದ್ದರು. ತುಮಕೂರಿನಲ್ಲಿ ಖಾಸಗಿ ಶಾಲೆಯಲ್ಲಿ ಕೆಲಸ ಮಾಡುವ ವ್ಯಕ್ತಿ ಮ್ಯಾಟ್ರಮೊನಿಯಲ್ಲಿ ಪರಿಚಯವಾಗಿ ಮದುವೆಯಾಗಿ ಮೋಸ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದರು. ಇಷ್ಟರ ಮೇಲೆ ಪ್ರಕರಣ ದಾಖಲಿಸಲು ಹಿಂದೇಟು ಹಾಕಿದ ಪೊಲೀಸ್ ಇನ್ಸ್ಪೆಕ್ಟರ್ ಮೇಲೂ ₹1 ಲಕ್ಷ ಲಂಚ ಪಡೆದ ಬೆದರಿಕೆ ಹಾಕಿದ್ದರು’ ಎಂದರು.

‘ಈ ಬಗ್ಗೆ ಬೈಲಹೊಂಗಲ ಡಿವೈಎಸ್ಪಿ ವೀರಯ್ಯ ಹಿರೇಮಠ ನೇತೃತ್ವದಲ್ಲಿ ತನಿಖೆ ಮಾಡಿಸಿದಾಗ ಮಹಿಳೆ ಸಿಕ್ಕಿಬಿದ್ದಿದ್ದಾರೆ. ಇದೇ ರೀತಿ ಪ್ರಕರಣಗಳನ್ನು ಇನ್ನೂ ಐದು ಠಾಣೆಗಳಲ್ಲಿ ಹೂಡಿದ್ದಾರೆ ಎಂಬುದು ಗೊತ್ತಾಗಿದೆ.

‘2012ರಲ್ಲಿ ಕುಡಚಿ ಠಾಣೆಯಲ್ಲಿ ಪಕ್ಕದ ಮನೆಯವರು ಪರಿಚಯವಾಗಿ ಮದವೆಯಾಗುವುದಾಗಿ ಮೋಸ ಮಾಡಿದ್ದಾರೆ ಎಂದು, 2022ರಲ್ಲಿ ಘಟಪ್ರಭಾದಲ್ಲಿ ನಾಗರಾಜ ಗದಗ ಎಂಬ ಕಾನ್ಸ್ಟೆಬಲ್ ಮೇಲೆ ಪ್ರಕರಣ ದಾಖಲಿಸಿದ್ದರು. 2023ರಲ್ಲಿ ಗಜೇಂದ್ರಗಡದ ಆಕಾಶ ಎಂಬುವವರ ಮೇಲೆ ಅತ್ಯಾಚಾರದ ದೂರು ದಾಖಲಿಸಿದ್ದಾರೆ. 2025ರಲ್ಲಿ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಸುರೇಶ ಎಂಬುವವರು ಮೋಸ ಮಾಡಿದ್ದಾರೆ ಎಂದು ಧಾರವಾಡ ಸಬರ್ಬ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇವೆಲ್ಲವೂ ಸುಳ್ಳು ಕೇಸು ಎಂಬುದು ಗೊತ್ತಾಗಿದೆ’ ಎಂದು ಎಸ್ಪಿ ತಿಳಿಸಿದರು.

‘ಇಷ್ಟೆಲ್ಲ ಕುತಂತ್ರವನ್ನು ಒಬ್ಬ ಮಹಿಳೆ ಮಾಡಿದ್ದು ಅನುಮಾನಾಸ್ಪದವಾಗಿದೆ. ಇವರ ಬೆನ್ನಿನ ಹಿಂದೆ ಒಂದು ತಂಡವೇ ಇರುವ ಶಂಕೆ ಇದೆ. ತನಿಖೆ ನಡೆಸಲಾಗುತ್ತಿದೆ’ ಎಂದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260517-21-299657726

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.