ಸತ್ತಿಗೇರಿ: ವಿದ್ಯುತ್ ತಂತಿ ಸ್ಪರ್ಶದಿಂದ ಕೊಡ್ಲಿವಾಡ ಗ್ರಾಮದ ರೈತ ಸ್ಥಳದಲ್ಲೇ ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ.

ಶ್ರೀಕಾಂತ ದಾನನ್ನವರ(63) ಮೃತರು. ಜಮೀನನಲ್ಲಿ ಟಿ.ಸಿ ಡಿವಾಲ್ ಹಾಕಲು ಹೋಗಿ ಆಕಸ್ಮಿಕವಾಗಿ ವಿದ್ಯುತ್ ತಂತಿ ಸ್ಪರ್ಶಿಸಿತು. ಮುರಗೋಡ ಪಿಎಸ್ಐ ಎಲ್.ಬಿ. ಮಾಳಿ, ಎಎಸ್ಐ ಜಿ.ಎಸ್. ಆಲದಕಟ್ಟಿ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಪಡಿದ್ದಾರೆ.

ಗಾಂಜಾ ಬೆಳೆ; ಬಂಧನ: ಸತ್ತಿಗೇರಿ ಸಮೀಪದ ಮುಗಳಿಹಾಳ ಗ್ರಾಮದ ಹೊಲದಲ್ಲಿ ಗಾಂಜಾ ಗಿಡ ಬೆಳೆದ ವ್ಯಕ್ತಿಯನ್ನು ಮುರಗೋಡ ಪೊಲೀಸರು ಮಂಗಳವಾರ ಬಂಧಿಸಿದರು.

ಮುಗಳಿಹಾಳ ಗ್ರಾಮದ ಸಾಬಣ್ಣ ಬಸಪ್ಪ ದಳವಾಯಿ ಬಂಧಿತರು. ಅವರಿಂದ ಸುಮಾರು 19 ಗಾಂಜಾ ಗಿಡಗಳನ್ನು ವಶಡಿಸಿಕೊಂಡಿದ್ದಾರೆ.

ತಾವು ಲಾವಣಿ ಮಾಡಿದ ಹೊಲದಲ್ಲಿ ಗಾಂಜಾ ಗಿಡ ಬೆಳೆದಿದ್ದರು. ಖಚಿತ ಮಾಹಿತಿ ಮೇರೆಗೆ ಮುರಗೋಡ ಸಿಪಿಐ ಐ.ಎಂ. ಮಠಪತಿ, ಪಿಎಸ್ಐ ಎಲ್.ಬಿ. ಮಾಳಿ, ಎಎಸ್ಐ ಬಿ.ಕೆ. ರಂಗಣ್ಣವರ, ಸಿಬ್ಬಂದಿ ವಿಠ್ಠಲ ಭಾಂಗಿ, ಎಂ.ಬಿ. ಸಣ್ಣನಾಯ್ಕ, ರಮೇಶ ತೇಲಿ, ಈರಣ್ಣ ವಕ್ಕುಂದ, ಪಶುವೈದ್ಯಾಧಿಕಾರಿ ಎಂ.ವಿ. ಪಾಟೀಲ ಅವರು ದಾಳಿ ನಡೆಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260401-21-1049541246

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.