ಬೆಳಗಾವಿ: ಬೆಳಗಾವಿ, ಖಾನಾಪುರ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಬೆಳೆದಿರುವ ಎಲೆಕೋಸು (ಕ್ಯಾಬೇಜ್) ಖರೀದಿಸುವವರೇ ಇಲ್ಲ. ಬೇಸತ್ತ ರೈತರು ಫಲಭರಿತ ಹೊಲದಲ್ಲೇ ರೂಟರ್ ಹೊಡೆದು, ಬೆಳೆ ನಾಶ ಮಾಡತೊಡಗಿದ್ದಾರೆ.

ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ಸ್ಥಳೀಯವಾಗಿ ತರಕಾರಿ ಬೆಳೆಗಾರರ ಮೇಲೂ ಬೀರಿದೆ. ತಾಲ್ಲೂಕಿನ ಕಡೋಲಿ, ಕಾಕತಿ, ಹೊನಗಾ, ಚಂದನ ಹೊಸೂರ, ಜಾಫರ ವಾಡಿ, ಗೌಂಡವಾಡ, ಬೆಳಗುಂದಿ, ಹಂದಿಗುಂದ, ಯಳ್ಳೂರ, ಉಚಗಾಂವ, ಮುಚ್ಚಂಡಿ, ವಾಘಮರಿ, ತುರಮರಿ ಮತ್ತಿತರ ಹಳ್ಳಿಗಳಲ್ಲಿ ಎಲೆಕೋಸು ಗೊಬ್ಬರವಾಗಿ ಮಾರ್ಪಡುತ್ತಿದೆ.

‘ಹೋಟೆಲ್, ರೆಸ್ಟೊರೆಂಟ್ನವರಷ್ಟೇ ಅಲ್ಲದೆ, ತಳ್ಳುವ ಗಾಡಿಗಳಲ್ಲಿ ಅಡುಗೆ ತಯಾರಿಸುವವರು ತರಕಾರಿ ಖರೀದಿಸುತ್ತಿದ್ದರು. ಸಿಲಿಂಡರ್ ಕೊರತೆ ಯಿಂದ ತಿಂಡಿ, ಅಡುಗೆ, ಕುರುಕಲು ತಯಾರಿಕೆ ನಿಲ್ಲಿಸಿದ್ದಾರೆ. ತರಕಾರಿಗೆ ಬೇಡಿಕೆ ಇಲ್ಲದ ಕಾರಣ ದರವೂ ಕುಸಿದಿದೆ’ ಎನ್ನುತ್ತಾರೆ ರೈತರು.

ಅಲ್ಲದೆ, ಇಲ್ಲಿನ ತರಕಾರಿಗಳಿಗೆ ಜಿಲ್ಲೆಯಲ್ಲಿ ಅಲ್ಲದೇ, ನೆರೆ ಮಹಾರಾಷ್ಟ್ರ ಗೋವಾದಲ್ಲೂ ಹೆಚ್ಚು ಬೇಡಿಕೆ ಇತ್ತು. ಈಗ ಅಲ್ಲಿಯೂ ಬೇಡಿಕೆ ಕುಸಿದಿದೆ’ ಎಂದು ರೈತರು ಹೇಳಿದರು.

ಸಗಟು ಮಾರುಕಟ್ಟೆಯಲ್ಲಿ 70 ಕೆಜಿಯ ಒಂದು ಚೀಲ ಎಲೆಕೋಸಿನ ದರ ಕೇವಲ ₹100 ಇದೆ. ಚಿಲ್ಲರೆ ಮಾರುಕಟ್ಟೆ ಯಲ್ಲಿ ಪ್ರತಿ ಕೋಸಿಗೆ ₹1 ಅಥವಾ ₹2 ಇದೆ. ಮೂರು ತಿಂಗಳ ಹಿಂದೆ ಕೆ.ಜಿಗೆ ₹40ರಿಂದ ₹50 ಇತ್ತು. ಯುದ್ಧ ಆರಂಭವಾದ 15 ದಿನಗಳಲ್ಲಿ ಚಿತ್ರಣವೇ ಬದಲಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260409-51-156542197

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.