ಬೈಲಹೊಂಗಲ: ರೈತರ ಟ್ರ್ಯಾಕ್ಟರ್ ಗಳ ಉಪಯೋಗಕ್ಕಾಗಿ ಕ್ಯಾನ್ನಲ್ಲಿ ಡೀಸೆಲ್ ಪೂರೈಸುವಂತೆ ಪೆಟ್ರೋಲ್ ಬಂಕ್ ಮಾಲೀಕರಿಗೆ ನಿರ್ದೇಶನ ನೀಡುವಂತೆ ಒತ್ತಾಯಿಸಿ ಕರುನಾಡ ರಕ್ಷಣಾ ವೇದಿಕೆ ಹಾಗೂ ಕನ್ನಡ ಪರ ಸಂಘಟನೆಗಳ ಒಕ್ಕೂಟ ಬೆಳಗಾವಿ, ಜಿಲ್ಲಾ ರೈತ ಘಟಕದಿಂದ ತಹಶೀಲ್ದಾರ್ ಹನುಮಂತ ಶಿರಹಟ್ಟಿ ಅವರಿಗೆ ಗುರುವಾರ ಮನವಿ ಅರ್ಪಿಸಿದರು.

ಕರುನಾಡ ರಕ್ಷಣಾ ವೇದಿಕೆ ರೈತ ಘಟಕ ರಾಜ್ಯ ಘಟಕದ ಅಧ್ಯಕ್ಷ ಅಪ್ಪಾಸಾಹೇಬ ಲಕ್ಕುಂಡಿ ಮಾತನಾಡಿ, 'ರೈತರು ತಮ್ಮ ಜಮೀನುಗಳಲ್ಲಿ ಟ್ರ್ಯಾಕ್ಟರ್ ಮೂಲಕ ಸಾಗುವಳಿ ಕಾರ್ಯ ಮಾಡುತ್ತಿರುವಾಗ ವಾಹನಗಳಲ್ಲಿ ಡೀಸೆಲ್ ಖಾಲಿಯಾದರೆ ಟ್ರ್ಯಾಕ್ಟರ್ಗಳನ್ನು ಹೊಲದಲ್ಲಿಯೇ ನಿಲ್ಲಿಸಿ ಖಾಲಿ ಕ್ಯಾನ್ ತೆಗೆದುಕೊಂಡು ಪೆಟ್ರೋಲ್ ಬಂಕ್ಗೆ ತೆರಳಬೇಕಾಗುತ್ತದೆ. ಆದರೆ ಹಲವೆಡೆ ಕ್ಯಾನಿನಲ್ಲಿ ಡೀಸೆಲ್ ನೀಡುವುದನ್ನು ನಿಲ್ಲಿಸಿರುವ ಕಾರಣ ರೈತರು ಬೇರೆ ವಾಹನಗಳ ಸಹಾಯದಿಂದ ಟ್ರ್ಯಾಕ್ಟರ್ಗಳನ್ನು ಎಳೆದುಕೊಂಡು ಬಂಕ್ಗಳಿಗೆ ತರಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ ಎಂದರು.

ತುರ್ತು ಪರಿಸ್ಥಿತಿಯಲ್ಲಿ ಬೈಕ್ ಸವಾರರಿಗೆ ಕನಿಷ್ಠ ಒಂದು ಲೀಟರ್ ಪೆಟ್ರೋಲ್ ಅನ್ನು ಖಾಲಿ ಬಾಟಲಿಯಲ್ಲಿ ನೀಡಲು ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು.

ಬೇಡಿಕೆ ಈಡೇರದಿದ್ದರೆ ಜಿಲ್ಲೆಯ ಪೆಟ್ರೋಲ್ ಬಂಕ್ಗಳ ಎದುರು ಪ್ರತಿಭಟನೆ ಹಾಗೂ ಸತ್ಯಾಗ್ರಹ ನಡೆಸುವುದಾಗಿ ಕರುನಾಡ ರಕ್ಷಣಾ ವೇದಿಕೆ ಹಾಗೂ ಕನ್ನಡ ಪರ ಸಂಘಟನೆಗಳ ಒಕ್ಕೂಟದಿಂದ ಮನವಿ ಪತ್ರದಲ್ಲಿ ತಿಳಿಸಿದರು.

ರೈತ ಘಟಕದ ಜಿಲ್ಲಾ ಸಂಚಾಲಕ ಆನಂದಗೌಡ ಪಾಟೀಲ, ಪುಂಡಲೀಕ ಹೋಟಿ, ಹರ್ಷ ಪೂಜಾರ, ರಿಯಾಜ ಡೊಂಕೆವಾಲಿ, ಶಂಭು ಹಗಗುಡಿಮಠ, ಬಸವರಾಜ ಮುಳಕೂರ, ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260522-21-809724583

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.