ಭಾನುವಾರ, ಆಗಸ್ಟ್ 25, 2019
20 °C
ಮದುವೆ ಸಂಭ್ರಮ ಕಿತ್ತುಕೊಂಡ ಮಳೆ

ಮೌಲಾಸಾಬ್‌ ಕುಟುಂಬಕ್ಕೆ ಹರಿದು ಬಂದ ನೆರವು;ಪ್ರಜಾವಾಣಿ ವರದಿಗೆ ಓದುಗರಿಂದ ಸ್ಪಂದನೆ

Published:
Updated:

ಬೆಳಗಾವಿ: ಮಗಳ ಮದುವೆಗೆಂದು ತಂದಿಟ್ಟಿದ್ದ ಚಿನ್ನಾಭರಣ, ಬಟ್ಟೆ–ಬರೆ ಮೊದಲಾದವು ಧಾರಾಕಾರ ಮಳೆಯಿಂದಾಗಿ ನೀರು ಪಾಲಾಗಿದ್ದರಿಂದ ಮತ್ತು ಮನೆ ಕುಸಿದುಬಿದ್ದಿದ್ದರಿಂದ ಸಂಕಷ್ಟದಲ್ಲಿರುವ ಇಲ್ಲಿನ ಪಾಟೀಲ ಮಾಳದ ಮೌಲಾಸಾಬ್ ನದಾಫ್ ಅವರಿಗೆ ಸಹೃದಯಿ ಓದುಗರು ನೆರವಿನ ಹಸ್ತ ಚಾಚಿದ್ದಾರೆ.

ಮಂಗಳವಾರ ‘ಪ್ರಜಾವಾಣಿ’ಯಲ್ಲಿ ಪ್ರಕಟವಾಗಿದ್ದ ‘ಮದುವೆ ಸಂಭ್ರಮ ಕಿತ್ತುಕೊಂಡ ಮಳೆ’ ವರದಿ ಗಮನಿಸಿದ ಹಲವರು ಆರ್ಥಿಕ ನೆರವು ನೀಡಿದ್ದಾರೆ.

‘ಶಿವಮೊಗ್ಗದ ಸೋಮಶೇಖರ ₹25 ಸಾವಿರ, ಪ್ರಕಾಶ್ ಹೊಸಪೇಟೆ ₹5,000, ಬೆಂಗಳೂರಿನ ವಿಜಯಶಂಕರ್ ₹5,000, ಹುಬ್ಬಳ್ಳಿಯ ಮೌಲಾಸಾಬ್ ಕೋಟೆ ₹10 ಸಾವಿರ, ನ್ಯೂಜಿಲೆಂಡ್‌ನಲ್ಲಿರುವ ಒಬ್ಬರು ₹ 25 ಸಾವಿರ ಹಣವನ್ನು ಖಾತೆಗೆ ಹಾಕಿದ್ದಾರೆ. ಹಲವರು ಖಾತೆ ಸಂಖ್ಯೆ ಪಡೆದಿದ್ದು ಹಣ ಹಾಕುವ ಭರವಸೆ ಕೊಟ್ಟಿದ್ದಾರೆ; ಆತ್ಮಸ್ಥೈರ್ಯ ತುಂಬಿದ್ದಾರೆ. ಕೆಲವರು ಖುದ್ದಾಗಿ ಬಂದು ಸಹಾಯ ಮಾಡುವುದಾಗಿ ತಿಳಿಸಿದ್ದಾರೆ. ‘ಪ್ರಜಾವಾಣಿ’ಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು’ ಎಂದು ಮೌಲಾಸಾಬ್‌ ತಿಳಿಸಿದರು.

Post Comments (+)