ಬೆಳಗಾವಿ: ಕೆನಡಾದಲ್ಲಿ ಹೆಚ್ಚಿನ ಸಂಬಳದ ಉದ್ಯೋಗ ನೀಡುವುದಾಗಿ ನಂಬಿಸಿ ಮೂವರಿಂದ ₹5.55 ಲಕ್ಷ ವಂಚಿಸಿದ ಬಗ್ಗೆ ಇಲ್ಲಿನ ಜಿಲ್ಲಾ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹುಕ್ಕೇರಿ ತಾಲ್ಲೂಕಿನ ಕುರಣಿ ಗ್ರಾಮದ ನಿವಾಸಿಗಳಾದ ಬಸಪ್ಪ ಹಿಟ್ಟಣಗಿ, ಶಿವರುದ್ರಯ್ಯ ಮಲ್ಲಯ್ಯ ಹಿರೇಮಠ ಹಾಗೂ ಅಡಿವೆಪ್ಪ ಸಿದ್ದಪ್ಪ ಮಾರ್ಯಾ ಗೋಳ ವಂಚನೆಗೆ ಒಳಗಾದವರು.

ರಷ್ಯಾದಲ್ಲಿ ಕೆಲಸ ಮಾಡಿಕೊಂಡು ಊರಿಗೆ ಮರಳಿದ್ದ ಬಸಪ್ಪ ಹಿಟ್ಟಣಗಿ ಅವರು, ತಮ್ಮ ಸ್ನೇಹಿತರಾದ ಶಿವರುದ್ರಯ್ಯ ಮಲಯ್ಯ ಹಿರೇಮಠ ಹಾಗೂ ಅಡಿವೆಪ್ಪ ಸಿದ್ದಪ್ಪ ಮಾರ್ಯಾಗೋಳರೊಂದಿಗೆ ವಿದೇಶ ಉದ್ಯೋಗದ ಬಗ್ಗೆ ಚರ್ಚಿಸಿದ್ದರು. ಈ ವೇಳೆ ಫೇಸ್ಬುಕ್ನಲ್ಲಿ ‘ಕೆಮಡಾ ಮೆಸ್ಸಿ’ ಎಂಬ ಖಾತೆ ಮೂಲಕ ಪರಿಚಿತರಾದ ಆರೋಪಿತರು; ‘ಈಡಾನ್’ ಕಂಪನಿಯ ಹೆಸರಿನಲ್ಲಿ ಕೆನಡಾದಲ್ಲಿ ಹಣ್ಣು ಲೋಡಿಂಗ್ ಕೆಲಸ ನೀಡುವುದಾಗಿ ಹೇಳಿ ತಿಂಗಳಿಗೆ ₹4,433 ಕೆನಡಿಯನ್ ಡಾಲರ್ (₹2.79 ಲಕ್ಷ) ಸಂಬಳದ ಆಮಿಷವೊಡ್ಡಿದ್ದರು.

ವೀಸಾ, ಎನ್ಆರ್ಐ ಖಾತೆ, ವಿಮಾನ ಟಿಕೆಟ್ ಸೇರಿದಂತೆ ವಿವಿಧ ಶುಲ್ಕಗಳ ಹೆಸರಿ ನಲ್ಲಿ ಹಣ ಪಡೆದುಕೊಂಡರು. ವಾಟ್ಸ್ಆ್ಯಪ್ ಮೂಲಕ ವೀಸಾ ಕಳುಹಿಸಿ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರಲು ಸೂಚಿಸಿದ್ದರು. ಅಲ್ಲಿಗೆ ತೆರಳಿದಾಗ ಮತ್ತೆ ₹50 ಸಾವಿರ ನೀಡಬೇಕು. ಇಲ್ಲವಾದರೆ ಕರೆದುಕೊಂಡು ಹೋಗುವುದಿಲ್ಲವೆಂದು ಹೇಳಿ ತಪ್ಪಿಸಿಕೊಂಡರು’ ಎಂದು ಆರೋಪಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260428-23-12031116

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.