ಹುಕ್ಕೇರಿ: ಇಲ್ಲಿನ ಹಿರೇಮಠದಲ್ಲಿ ಶುಕ್ರವಾರ ಜರುಗಿದ ಗುರುಪೂರ್ಣಿಮೆ ಮಹಾಪೂಜೆಯಲ್ಲಿ ರಾಯಬಾಗ ಶಾಸಕ ದುರ್ಯೋಧನ ಐಹೊಳೆ ಭಾಗಿಯಾಗಿ ಚಂದ್ರಶೇಖರ ಸ್ವಾಮೀಜಿ ಪಾದಪೂಜೆ ಮಾಡಿದರು.
ನಂತರ ಮಹಾಮಸ್ತಕಾಭಿಷೇಕ ನೇರವೆರಿಸಿ ಮಾತನಾಡಿದ ಅವರು, ನಾನು ಪ್ರತಿವರ್ಷ ಯಾವ ಕೆಲಸದಲ್ಲಿದ್ದರೂ ಗುರು ಪೂರ್ಣಿಮೆ ದಿನ ನನ್ನ ಗುರುವಿನ ಆಶಿರ್ವಾದ ಪಡೆಯಲು ಬರುತ್ತೆನೆ. ಅವರ ಆಶೀರ್ವಾದಿಂದ ಶಾಸಕನಾಗಿ ಜನಸೇವೆ ಮಾಡುತ್ತಿದ್ದೆನೆ ಎಂದರು.
ಶ್ರೀಗಳ ಸೇವೆ ಅನನ್ಯ: ಉದ್ಯಮಿ ಪ್ರಥ್ವಿ ಕತ್ತಿ ಮಠಕ್ಕೆ ಭೇಟಿ ನೀಡಿ ಸ್ವಾಮೀಜಿ ಆಶೀರ್ವಾದ ಪಡೆದ ಬಳಿಕ ಮಾತನಾಡಿ, ಈ ಭಾಗದಲ್ಲಿ ಚಂದ್ರಶೇಖರ್ ಸ್ವಾಮೀಜಿ ಸಲ್ಲಿಸುವ ಸೇವೆಯು ಅನನ್ಯವಾದುದು ಎಂದರು. ಸಂಪತ್ ಕುಮಾರ, ಮಹಾಂತೇಶ ಮತ್ತು ಚಂದ್ರಶೇಖರ್ ಶಾಸ್ತ್ರಿಗಳು ಉಪಸ್ಥಿತರಿದ್ದರು.
ಎಸ್.ಕೆ.ಪಬ್ಲಿಕ್ ಶಾಲೆ ಚೇರಮನ್ ಪಿಂಟು ಶೆಟ್ಟಿ, ಉಪಾಧ್ಯಕ್ಷ ಆನಂದ ಪಟ್ಟಣಶೆಟ್ಟಿ, ಪ್ರಾಚಾರ್ಯ ಅನಿಲ ಪಾಟೀಲ್, ಚನ್ನಪ್ಪ ಗಜಬರ್, ಗುರುಶಾಂತೇಶ್ವರ ಕಲಾ ಪೋಷಕ ಸಂಘದ ಅದ್ಯಕ್ಷ ಶಿವಾನಂದ ಜಿರ್ಲಿ, ವ್ಯಾಪಾರಸ್ಥ ಸುಭಾಷ್ ಜೋಂಡ, ಚನ್ನಪ್ಪ ಗಜಬರ್, ಬಡಕುಂದ್ರಿ ಹೊಳೆಮ್ಮ ದೇವಸ್ಥಾನದ ಪ್ರಧಾನ ಅರ್ಚಕ ಎಚ್ ಎಲ್ ಪೂಜಾರಿ ಸೇರಿದಂತೆ ಇನ್ನೂ ಅನೇಕ ಭಕ್ತರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.