ಬೆಳಗಾವಿ: ಮಾರ್ಚ್ ಕೊನೆಯ ವಾರದಿಂದಲೇ ಏರುಗತಿಯಲ್ಲಿ ಸಾಗಿದ ಜಿಲ್ಲೆಯ ತಾಪಮಾನ ಮೇ 3ರಂದು ಗರಿಷ್ಠ 38 ಡಿಗ್ರಿ ಸೆಲ್ಸಿಯಸ್ ತಲುಪಿದೆ. ಕನಿಷ್ಠ ತಾಪಮಾನ ಕೂಡ 18 ಡಿಗ್ರಿಯಿಂದ ಏರುತ್ತ ಬಂದಿದ್ದು ಈಗ 23 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಹಗಲು, ರಾತ್ರಿ ನಿರಂತರವಾಗಿ ಬಿಸಿಗಾಳಿ ಬೀಸುತ್ತಿರುವ ಕಾರಣ ಜನ ಹೈರಾಣಾಗಿದ್ದಾರೆ. ಕಾಲಚಕ್ರದ ಈ ಹೊರಳುವಿಕೆಯ ಸಂದರ್ಭದಲ್ಲಿ ಹಲವು ಸಾಂಕ್ರಾಮಿಕ ರೋಗಗಳೂ ಬರುವ ಸಾಧ್ಯತ ಹೆಚ್ಚು. ಅದಕ್ಕಾಗಿ ವೈದ್ಯರು, ನಿಸರ್ಗ ಚಿಕಿತ್ಸಕರು ಸಲಹೆಗಳನ್ನು ನೀಡಿದ್ದಾರೆ.

ಬೆಸಿಗೆಯಲ್ಲಿ ಸೊಳ್ಳೆಗಳ ಕಾಟ ಹೆಚ್ಚು. ಚಿಕೂನ್ ಗುನ್ಯ, ಡೆಂಗಿ, ಮಲೇರಿಯಾ, ಜ್ವರ, ಆಮಶಂಕೆ, ನಿರ್ಜಲೀಕರಣದಿಂದ ಆಗುವ ರೋಗಗಳು ಈ ಸಂದರ್ಭದಲ್ಲಿ ಸಾಮಾನ್ಯ. ಬೇಸಿಗೆಯಲ್ಲಿ ಜಾತ್ರೆಗಳು, ಮದುವೆಗಳು ಹೆಚ್ಚಾಗಿ ನಡೆಯುತ್ತವೆ. ಅಂಥ ಸಂದರ್ಭದಲ್ಲಿ ಎಚ್ಚರಿಕೆಯಿಂದ ಇರಬೇಕು ಎಂಬ ಅರಿವನ್ನು ಆರೋಗ್ಯ ಇಲಾಖೆ ಮೂಡಿಸುತ್ತಿದೆ.

ಬಿಸಿಗಾಳಿಯಿಂದ ಹೇಗೆ ರಕ್ಷಣೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಲಾಗುತ್ತಿದೆ. ಮಧ್ಯಾಹ್ನ 12ರಿಂದ ಸಂಜೆ 4ರವರೆಗೆ ರೈತರಿಗೆ, ಕೃಷಿ ಕಾರ್ಮಿಕರಿಗೆ, ನರೇಗಾ ಕಾರ್ಮಿಕರಿಗೆ ಹಾಗೂ ಕಾರ್ಖಾನೆಗಳ ಕಾರ್ಮಿಕರಿಗೆ ತುಸು ಬಿಡುವು ನೀಡಲು ಆಯಾ ವಿಭಾಗದವರಿಗೆ ಸೂಚನೆ ನೀಡಲಾಗಿದೆ. ಹೀಟ್ ಸ್ಟ್ರೋಕ್ (ಸನ್ಸ್ಟ್ರೋಕ್) ಆಗುವ ಸಾಧ್ಯತೆ ಇದ್ದಲ್ಲಿ ಮುಂಜಾಗ್ರತಾ ಕ್ರಮವಾಗಿ ಆರೋಗ್ಯ ಕಿಟ್ ಇಟ್ಟುಕೊಳ್ಳಬೇಕು ಎಂದೂ ಕಾರ್ಖಾನೆಗಳಿಗೆ ಸೂಚಿಸಲಾಗಿದೆ. ಗ್ರಾಮ ಮಟ್ಟದಲ್ಲಿ ಆರೋಗ್ಯ ಸಲಹೆಗಾರರು, ಆಶಾ ಕಾರ್ಯಕರ್ತೆಯರನ್ನು ನಿಯೋಜನೆ ಮಾಡಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಐ.ಪಿ ಗಾಡಾದ ಪ್ರತಿಕ್ರಿಯೆ ನೀಡಿದರು.

ಕಳೆದ ವರ್ಷ ಅಂದರೆ; 2025ರ ಮೇ 3ರಂದು ಗರಿಷ್ಠ ತಾಪಮಾನ 37 ಕನಿಷ್ಠ ಹಾಗೂ ಕನಿಷ್ಠ 21 ಡಿಗ್ರಿ ದಾಖಲಾಗಿತ್ತು. ಈ ವರ್ಷ ಮಳೆಗಾಲವೂ ಹೆಚ್ಚಾಗಿದ್ದರಿಂದ ಬೇಸಿಗೆಯೂ ಹೆಚ್ಚು ಪ್ರಖರವಾಗಲಿದೆ. ಯಾವ ವರ್ಷ ಮಳೆ– ಚಳಿ ಹೆಚ್ಚಾಗಿರುತ್ತದೆಯೋ ಆ ವರ್ಷ ಬಿಸಿಲೂ ಹೆಚ್ಚು; ಇದು ಕಾಲಚಕ್ರದ ಲಿಖಿತ ಎಂದು ಕೃಷಿ ವಿಜ್ಞಾನ ಕೇಂದ್ರದ ಹವಾಮಾನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಒಂದು ದಶಕದ ಸರಾಸರಿ ಲೆಕ್ಕಾಚಾರ ಹಾಕಿದರೆ ತಾಪಮಾನದಲ್ಲಿ ಹೆಚ್ಚೇನೂ ವ್ಯತ್ಯಾಸ ಕಂಡಿಲ್ಲ. ಈ ಬಾರಿ ಬೇಸಿಗೆ ಮಳೆ ಪದೇಪದೇ ಸುರಿದಿದ್ದರಿಂದ ಬಿಸಿಗಾಳಿಯೂ ಅಷ್ಟಾಗಿ ಪೀಡಿಸಿಲ್ಲ. ಅಲ್ಲದೇ ಈ ಬಾರಿಯ ಮುಂಗಾರು ತುಸು ಮುಂಚಿತವಾಗಿಯೇ ಪ್ರವೇಶ ಮಾಡುತ್ತಿದೆ ಎಂದೂ ಭಾರತೀಯ ಹವಾಮಾನ ತಜ್ಞರು ಖಚಿತಪಡಿಸಿದ್ದಾರೆ. ಅಂದಾಜಿನ ಪ್ರಕಾರ ಮೇ ಕೊನೆಯ ವಾರದಲ್ಲೇ ಮೊದಲ ಮಳೆ ಆರಂಭವಾಗಬಹುದು.

ಎ.ಸಿ, ಕೂಲರ್, ಬಟ್ಟೆಗೆ ಬೇಡಿಕೆ: ನಗರವೂ ಸೇರಿದಂತೆ ಜಿಲ್ಲೆಯ ಎಲ್ಲ ಪಟ್ಟಣ ಪ್ರದೇಶಗಳಲ್ಲೂ ಎ.ಸಿ, ಏರ್ಕೂಲರ್ಗಳಿಗೆ ಬೇಡಿಕೆ ಹೆಚ್ಚಿದೆ. ಮಧ್ಯರಾತ್ರಿ ಕೂಡ ಬಿಸಿಗಾಳಿ ಸುಳಿಯುವುದರಿಂದ ನೆಮ್ಮದಿಯ ನಿದ್ರೆಗೆ ಏರ್ಕೂಲರ್ಗಳು ಅನಿವಾರ್ಯ. ಇಷ್ಟು ದಿನ ಮನೆಯ ಮೂಲೆಯಲ್ಲಿದ್ದ ಏರ್ಕೂಲರ್ಗಳನ್ನು ದುರಸ್ತಿ ಮಾಡಿಸುವವರೇ ಹೆಚ್ಚು. ಕೂಲರ್ಗಳು ಹೆಚ್ಚು ಬಿಕರಿಯಾಗುತ್ತಿವೆ. ತಂಪಾದ ವಾತಾವರಣ ಹೊಂದಲು ಜನರು ಖರೀದಿಸುತ್ತಿದ್ದಾರೆ.

ಬೇಸಿಗೆಯಲ್ಲಿ ಹಾಕುವ ಬಟ್ಟೆಯೂ ಆರೋಗ್ಯ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಮೈಮೇಲೆ ಸಡಿಲವಾದ, ತೆಳು ಬಣ್ಣದ ಹತ್ತಿಯ ಬಟ್ಟೆಗಳನ್ನು ಧರಿಸಬೇಕು. ಬಿಗಿಯಾದ ಅಥವಾ ಗಾಢ ಬಣ್ಣದ ಸಿಂಥೆಟಿಕ್ ಬಟ್ಟೆ ಧರಿಸಬಾರದು. ಗಾಳಿಯಾಡದ ಪಾದರಕ್ಷೆ ಅಥವಾ ಬೂಟು ಧರಿಸಬಾರದು.

ರೋಗಳಿಂದಲೂ ಹುಷಾರು: ಬಿಗಿ ಉಡುಪ ಅಥವಾ ಬೆಚ್ಚಗಿನ ಆಹಾರ ಈ ಅವಧಿಯಲ್ಲಿ ಅನಾರೋಗ್ಯ ತರಬಹುದು. ಬೇಸಿಗೆಯಲ್ಲಿ ದೇಹದ ಹೊರಪದರದಲ್ಲಿನ ರಕ್ತನಾಳಗಳು ಸಂಕುಚಿತಗೊಳ್ಳುತ್ತವೆ ಮತ್ತು ದೇಹದ ಒಳಗಿನ ಉಷ್ಣತೆ ದೇಹದೊಳಗೆ ಬಂಧಿತವಾಗಿ ಆತನ ಅಂಗಾಂಗಗಳು ನಿಷ್ಕ್ರಿಯಗೊಂಡು ಹೆಚ್ಚಿನ ಹಾನಿಯಾಗಬಹುದು. ಹೀಗಾಗಿ, ಬೇಸಿಗೆಯಲ್ಲಿ ಚರ್ಮರೋಗಗಳು ಹೆಚ್ಚಾಗಿ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು’ ಎನ್ನುತ್ತಾರೆ ಚರ್ಮರೋಗ ತಜ್ಞರು.

ಸಸ್ಯಾಹಾರಕ್ಕೆ ಹೆಚ್ಚು ಆದ್ಯತೆ ಕೊಡಬೇಕು. ಮಸಾಲೆ ಪದಾರ್ಥಗಳನ್ನು ಸೇವಿಸುವವರು ಕಡಿಮೆ ಮಾಡಬೇಕು. ಕಾಫಿ, ಚಹಾ, ಸಕ್ಕರೆ ಅಂಶವುಳ್ಳ ಪಾನೀಯಗಳನ್ನು ಅತಿಯಾಗಿ ಸೇವಿಸಬಾರದು. ಲಿಂಬೆರಸ, ಹಣ್ಣುಗಳ ಜೂಸ್, ಮಜ್ಜಿಗೆ, ಸೋಲ್ಖಡಿ ಮುಂತಾದವುಗಳ ಆರೋಗ್ಯಕ್ಕೆ ಪೂರಕ. ಸವತೆಕಾಯಿಯಂಥ ಹಸಿ ತರಕಾರಿಗಳನ್ನು ತಿನ್ನಬೇಕು ಎಂದು ಜಿಲ್ಲಾಸ್ಪತ್ರೆಯ ವೈದ್ಯಾಧಿಕಾರಿ ಡಾ.ಸರೋಜಾ ತಿಗಡಿ ಸಲಹೆ ನೀಡಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260504-21-1837720810

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.