ಬೆಳಗಾವಿ: ಹುಕ್ಕೇರಿ ತಾಲ್ಲೂಕಿನ ನದಿಗುಡಿಕೇತ್ರ ಗ್ರಾಮದ ಹೆಳವರ ಜಾತಿಯ ಮಹಿಳೆಯನ್ನು ಮರ್ಯಾದೆಗೇಡು ಹತ್ಯೆ ಮಾಡಿದ ಪ್ರಕರಣವನ್ನು ಹೆಚ್ಚಿನ ತನಿಖೆಗಾಗಿ ಮಹಾರಾಷ್ಟ್ರದ ಸಾಂಗ್ಲಿ ಪೊಲೀಸರಿಗೆ ಹಸ್ತಾಂತರಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಹೇಳಿದರು.

‘ಸತ್ಯವ್ಯ ಹೆಳವರ (24) ಅವರು ಕ್ಷತ್ರಿಯ ಜಾತಿಯ ಪ್ರಿಯಕರನ ಜತೆ ಸಾಂಗತ್ಯ ಬೆಳೆಸಿದ್ದಕ್ಕೆ ಅವರ ಕುಟುಂಬ ಸದಸ್ಯರೇ ಸತ್ಯವ್ಯ ಅವರಿಗೆ ಬಲವಂತದಿಂದ ವಿಷ ಕುಡಿಸಿ ಕೊಲೆ ಮಾಡಿದ್ದರು. ಪ್ರಕರಣ ಸಂಬಂಧ ಈಗಾಗಲೇ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಬುಧವಾರ ಸುದ್ದಿಗಾರರಿಗೆ ತಿಳಿಸಿದರು.

‘ಕೊಲೆಗೆ ಮುನ್ನ, ಆರೋಪಿಗಳು ಸತ್ಯವ್ವ ಅವರನ್ನು ಮನವೊಲಿಸಲು ಸಾಂಗ್ಲಿ ಜಿಲ್ಲೆಯ ಶಿರೋಳ ಮತ್ತು ಅರಗದಲ್ಲಿ ಎಂಟು ದಿನ ಇದ್ದರು. ನಂತರ ಅವರನ್ನು ಕೊಲೆ ಮಾಡಿ, ಸಾಕ್ಷ್ಯ ನಾಶ ಮಾಡಲು ಯತ್ನಿಸಿದ್ದರು. ಸಾಂಗ್ಲಿ ಜಿಲ್ಲೆಯಲ್ಲಿ ಈ ಪ್ರಕರಣದ ಎಲ್ಲ ಬೆಳವಣಿಗೆಗಳು ನಡೆದಿರುವುದರಿಂದ, ಪ್ರಕರಣದ ತನಿಖೆಯನ್ನು ಸಾಂಗ್ಲಿ ಪೊಲೀಸರಿಗೆ ಹಸ್ತಾಂತರಿಸಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.