ಹುಕ್ಕೇರಿ: ಸಣ್ಣ ನೀರಾವರಿ ಯೋಜನೆ ಅಡಿಯಲ್ಲಿ ಮಂಜೂರಾದ ₹10 ಕೋಟಿ ವೆಚ್ಚದ ನಾಗನೂರು ಕೆ.ಎಂ (ಮಲ್ಲಟ್ಟಿ) ಹಾಗೂ ಸುತಗಟ್ಟಿ ಗ್ರಾಮಗಳ ನಡುವೆ ಘಟಪ್ರಭಾ ನದಿಗೆ ಅಡ್ಡಲಾಗಿ ಬ್ರಿಜ್ ಕಂ ಬಾಂದಾರ ನಿರ್ಮಾಣ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಹಾಗೂ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಸೋಮವಾರ ಚಾಲನೆ ನೀಡಿದರು.

ಸಚಿವ ಸತೀಶ ಜಾರಕಿಹೊಳಿ ಮಾತನಾಡಿ, ಈ ಭಾಗದ ರೈತರು ಬೇಡಿಕೆಗಳ ಅನುಸಾರವಾಗಿ ಬ್ರಿಜ್ ಕಂ ಬಾಂದಾರ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಈ ಬ್ರಿಜ್ ಕಂ ಬಾಂದಾರ 135 ಮೀಟರ್ ಉದ್ದವಾಗಿದ್ದು, 4 ಮೀಟರ್ ನೀರು ನಿಲ್ಲುತ್ತದೆ. 27 ಎಂ.ಸಿ.ಎಫ್.ಟಿ ನೀರು ಸಂಗ್ರಹವಾಗಲಿದ್ದು 180 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಸಿಗಲಿದ ಎಂದರು.

ಈ ಭಾಗದ ಜನರು ಹತ್ತರಗಿ ದಾದಬಾನಹಟ್ಟಿ ಮಾರ್ಗವಾಗಿ ಬೆಳಗಾವಿಗೆ ಹೋಗಬೇಕಾಗಿತ್ತು. ಈಗ ಅವರು ಬೆಳಗಾವಿಗೆ ಹೋಗಲು 15 ಕಿ.ಮೀ ಅಂತರ ಕಡಿಮೆಯಾಗುತ್ತದೆ. ಎರಡು ತಿಂಗಳಲ್ಲಿ ಈ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದರು.

ಜಿಲ್ಲಾಧಿಕಾರಿ ಮಹಮ್ಮದ ರೋಷನ್, ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್ ಶಿಂಧೆ, ಹುಕ್ಕೇರಿ ತಾಲ್ಲೂಕು ಪಂಚಾಯಿತಿ ಇಒ ಟಿ.ಆರ್ ಮಲ್ಲಾಡದ, ಸಣ್ಣ ನೀರಾವರಿ ಇಲಾಖೆ ಎಇಇ ಸಂಜು ಮಾಳಗಿ, ಶಾಖಾಧಿಕಾರಿ ಶಿವಲೀಲಾ ಮುಕ್ಕಣ್ಣವರ, ಸಚಿವರ ಆಪ್ತ ಸಹಾಯಕರಾದ ರಾಜು ದರಗಶೆಟ್ಟಿ, ದಯಾನಂದ ಪಾಟೀಲ, ಕಿರಣಸಿಂಗ ರಜಪೂತ, ನಾಗನೂರ ಕೆ.ಎಂ ಗ್ರಾಮ ಪಂಚಾಯಿತಿ ಪಿಡಿಒ ಆನಂದ ಹೊಳೆನ್ನವರ, ಮುಖಂಡರಾದ ಬಸವರಾಜ ದೇಸಾಯಿ, ಈರಣ್ಣ ದೇಸಾಯಿ, ಮನ್ಸೂರ ಲೋಕಾಪುರಿ, ಮಾರುತಿ ಶಿವಪ್ಪ ತಹಸೀಲ್ದಾರ, ಅಶೋಕ ತಳವಾರ, ವಿಲಾಸ ಬಾಳಾಸಾಹೇಬ ಪಾಟೀಲ, ಈರಪ್ಪ ನಾಯಕ, ಈರಣ್ಣ ಚೌಗಲಾ, ಶಂಕರ ಬಾನಿ, ರಾಮಾ ಸನದಿ, ಅರುಣ ಜಗಜಂಪಿ, ಮಹಾನಿಂಗ ಶಿರಗುಪ್ಪಿ, ಗೋದವ್ವ ಅಗಸರ, ಅವಕ್ಕ ಬಾನಿ ಹಾಗೂ ಈ ಭಾಗದ ಎಲ್ಲ ರೈತರು, ಗ್ರಾಮಸ್ಥರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260519-21-537506399

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.