ಭಾನುವಾರ, ಡಿಸೆಂಬರ್ 8, 2019
24 °C

‘ಸಂವಿಧಾನದ ಆಶಯ ಅರಿಯಬೇಕು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಸಂವಿಧಾನವೇ ಪರಮ ಸತ್ಯ. ಹೀಗಾಗಿ, ಇಂದಿನ ಯುವಜನರಿಗೆ ಭಾರತೀಯ ಸಂವಿಧಾನದ ಆಶಯಗಳನ್ನು ಮನಗಾಣಿಸಬೇಕಾದ ಅಗತ್ಯವಿದೆ’ ಎಂದು ಬಂಡಾಯ ಸಾಹಿತಿ ಡಾ.ಯಲ್ಲಪ್ಪ ಹಿಮ್ಮಡಿ ಹೇಳಿದರು.

ಇಲ್ಲಿನ ಕನ್ನಡ ಸಾಹಿತ್ಯ ಭವನದಲ್ಲಿ ಭಾನುವಾರ ಬಂಡಾಯ ಸಾಹಿತ್ಯ ಸಂಘಟನೆಯಿಂದ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.

‘ರಾಜ್ಯದ ಬೇರೆ ಬೇರೆ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳನ್ನು ಕೇಂದ್ರೀಕರಿಸಿ ಜನವರಿ 25 ಹಾಗೂ 26ರಂದು ಕಾರ್ಯಾಗಾರ ನಡೆಸಲು ತೀರ್ಮಾನಿಸಲಾಗಿದೆ. ಜನಪರ ಚಳವಳಿಗಳ ಜೊತೆ ಸಂವಿಧಾನ ಹಾಗೂ ಮೀಸಲಾತಿ ಕುರಿತು ಸಂವಾದ, ಚರ್ಚೆ ನಡೆಸುವ ಆಶಯ ಹೊಂದಲಾಗಿದೆ’ ಎಂದು ತಿಳಿಸಿದರು.

ಪ್ರಾಧ್ಯಾಪಕ ಎಚ್.ಬಿ. ಕೋಲಕಾರ, ಶಂಕರ ಬಾಗೇವಾಡಿ, ದೇಮಣ್ಣ ಸೊಗಲದ, ಅಡಿವೆಪ್ಪ ಇಟಗಿ, ಗಜಾನನ ಸಂಗೋಟೆ, ನೀಲಕಂಠ ಭೂಮನ್ನವರ, ಸುಮಿತ್ರಾ ಪೂಜೇರಿ,  ಸುನಿಲ್ ಮುಚ್ಚಂಡಿ, ಸಚಿನ್ ಮಾಳಗೆ, ಮಚ್ಚೀಂದ್ರ ಪಾಶ್ಚಾಪೂರೆ, ದೇವಪ್ಪ ರಾಯಚೂರು, ವಿಠ್ಠಲ ಹರಿಜನ ಇದ್ದರು.

ಬಾಲಕೃಷ್ಣ ನಾಯಕ ಸ್ವಾಗತಿಸಿದರು. ಮಂಜುನಾಥ ಪಾಟೀಲ ವಂದಿಸಿದರು.

ಪ್ರತಿಕ್ರಿಯಿಸಿ (+)