ಬೆಳಗಾವಿ: ಮಹಾನಗರ ಪಾಲಿಕೆಯ ಸರ್ವ ಸಾಧಾರಣ ಸಭೆಯಲ್ಲಿ ಕರ್ನಾಟಕ ಪರವಾದ ನಿರ್ಣಯಗಳನ್ನು ಅಂಗೀಕರಿಸುವಂತೆ ಆಗ್ರಹಿಸಿ ಬೆಳಗಾವಿಯ ಸಮಾನ ಮನಸ್ಕ ಕನ್ನಡ ಸಂಘಟನೆಗಳು ಆರಂಭಿಸಿರುವ ಆಂದೋಲನದ ಭಾಗವಾಗಿ, ಕಿತ್ತೂರು ಕರ್ನಾಟಕ ಸೇನೆಯ ಯುವ ಘಟಕದಿಂದ ಮಂಗಳವಾರ ಪಾಲಿಕೆಯ ಎದುರು ಧರಣಿ ನಡೆಸಲಾಯಿತು.

ಯುವ ಘಟಕದ ಅಧ್ಯಕ್ಷ ಮಹೇಶ ಶಿಗೀಹಳ್ಳಿ ಅವರ ನೇತೃತ್ವದಲ್ಲಿ ಮೇಯರ್ ಪ್ರೀತಿ ಕಾಮಕರ ಹಾಗೂ ಉಪಮೇಯರ್ ಹಣಮಂತ ಕೊಂಗಾಲಿ ಅವರಿಗೆ ಮನವಿ ಸಲ್ಲಿಸಿದರು.

2005ರ ಅಕ್ಟೋಬರ್ 27ರಂದು ಪಾಲಿಕೆಯ ಸಭೆಯಲ್ಲಿ ಮಹಾರಾಷ್ಟ್ರದ ಪರವಾಗಿ ಅಂಗೀಕರಿಸಿದ ಗೊತ್ತುವಳಿಯನ್ನು ಮಹಾರಾಷ್ಟ್ರ ಸರ್ಕಾರ ಸುಪ್ರೀಂ ಕೋರ್ಟಿನ ಗಡಿ ವಿವಾದ ದಾವೆಯಲ್ಲಿ ಪೂರಕ ದಾಖಲೆಯನ್ನಾಗಿ ಬಳಸುತ್ತಿದೆ. ಇದು ಕರ್ನಾಟಕದ ಹಿತಾಸಕ್ತಿಗೆ ಧಕ್ಕೆ ತರಬಹುದಾಗಿದೆ. ಈಗ ಪಾಲಿಕೆಯಲ್ಲಿ ಕರ್ನಾಟಕ ಪರವಾಗಿರುವ ಸದಸ್ಯರ ಸಂಖ್ಯೆ 55 ಆಗಿರುವುದರಿಂದ ಕರ್ನಾಟಕದ ಪರವಾಗಿ ನಿರ್ಣಯಗಳನ್ನು ಅಂಗೀಕರಿಸಲು ಯಾವುದೇ ಅಡಚಣೆಗಳಿಲ್ಲ. ಆದ್ದರಿಂದ ಆದಷ್ಟು ಬೇಗ ಇಂತಹ ನಿರ್ಣಯವನ್ನು ಅಂಗೀಕರಿಸಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಯುವ ಘಟಕವು ಪಾಲಿಕೆಯ ಆಯುಕ್ತ ಎಂ. ಕಾರ್ತಿಕ ಅವರಿಗೆ ಮತ್ತೊಂದು ಮನವಿ ಸಲ್ಲಿಸಿದ್ದು, ಬೆಳಗಾವಿ ಮಹಾನಗರದ ನಾಮಫಲಕಗಳಲ್ಲಿ ಪ್ರತಿಶತ 60 ರಷ್ಟು ಕನ್ನಡ ಬಳಕೆಯನ್ನು ಕಡ್ಡಾಯಗೊಳಿಸಬೇಕೆಂದು ಆಗ್ರಹಿಸಿತು.

ಮುಖಂಡರಾದ ಮಂಗೇಶ್ ಚನ್ನಿಕುಪ್ಪಿ, ಈರೇಶ್ ನಾಯಕ, ಲಕ್ಷ್ಮಣ್ ಬಾಗಡಿ, ಕಾರ್ತಿಕ ಪಾಟೀಲ, ಶಿವು ಕರಡಿಗುಡ್ಡಿ, ಸಿಂಧೂರ ನಾಗಣ್ಣವರ, ಸಚಿನ್ ಕೊಲ್ಕಾರ, ಗಿರೀಶ್ ದೊಡಮನಿ, ಶುಭಮ ತಳವಾರ, ಆನಂದ್ ಊದಿ, ಶರತ್ ಮುನವಳ್ಳಿ ನೇತೃತ್ವ ವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260401-21-1563768498

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.