ಬೆಳಗಾವಿ: ‘ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ’ ಎಂಬ ನಿರ್ಣಯವನ್ನು ಮಹಾನಗರ ಪಾಲಿಕೆ ಪರಿಷತ್ ಸಭೆಯಲ್ಲಿ ಕೈಗೊಳ್ಳಬೇಕು ಎಂದು ಆಗ್ರಹಿಸಿ 20ಕ್ಕೂ ಹೆಚ್ಚು ಕನ್ನಡ ಸಂಘಟನೆಗಳು ಎರಡು ತಿಂಗಳಿಂದ ಹೋರಾಟ ನಡೆಸಿವೆ. ಆದರೆ, ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಬಹುಪಾಲು ಸಾಹಿತಿಗಳು ಮೌನವಾಗಿರುವುದು ಕನ್ನಡ ಮನಸ್ಸುಗಳನ್ನು ಘಾಸಿಗೊಳಿಸಿದೆ ಎಂಬ ಆರೋಪ ಯುವಜನರಿಂದ ಕೇಳಿಬರುತ್ತಿದೆ.

ಇದಕ್ಕೆ ‘ತಕ್ಕ ಪಾಠ’ ಎಂಬಂತೆ ಬೆಂಗಳೂರಿನ ಎಂಟು ಹಿರಿಯ ಸಾಹಿತಿಗಳು ಬೆಂಬಲ ನೀಡಿದ್ದಾರೆ. ಕನ್ನಡ ನಾಡು ನುಡಿ ಜಾಗೃತಿ ಸಮಿತಿ (ಬೆಂಗಳೂರು) ಮೂಲಕ ಕೆ. ಮರುಳಸಿದ್ಧಪ್ಪ, ಜಿ.ರಾಮಕೃಷ್ಣ, ಪ್ರೊ.ಎಸ್.ಜಿ. ಸಿದ್ಧರಾಮಯ್ಯ, ವಿಜಯಾ, ಜಾಣಗೆರೆ ವೆಂಕಟರಾಮಯ್ಯ, ಬಂಜಗೆರೆ ಜಯಪ್ರಕಾಶ್, ಆರ್.ಜಿ. ಹಳ್ಳಿ ನಾಗರಾಜ್, ವಸುಂಧರಾ ಭೂಪತಿ ಅವರು ಅಧಿಕೃತವಾಗಿ ಪತ್ರ ಬರೆದಿದ್ದು ‘ನೆಪ ಹೇಳಬೇಡಿ ಕನ್ನಡ ಪರ ಠರಾವು ಪಾಸ್ ಮಾಡಿ’ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

ಆದರೆ, ಬೆಳಗಾವಿ ಜಿಲ್ಲೆಯ ಸಾಹಿತಿಗಳು ಮಾತ್ರ ಇದು ತಮಗೆ ಸಂಬಂಧವೇ ಇಲ್ಲ ಎಂಬಂತಿರುವುದು ಹೋರಾಟಗಾರರನ್ನು ಬೇಸರಗೊಳಿಸಿದೆ.

‘ಪ್ರಶಸ್ತಿ, ಪುರಸ್ಕಾರಗಳಿಗೆ, ಬಹುಮಾನಗಳಿಗೆ, ತಮ್ಮದೇ ಪುಸ್ತಕ ಪ್ರಕಟಣೆಗಳಿಗೆ, ಹಾರ–ಮಾಲೆಗಳಿಗೆ ಸಾಹಿತಿಗಳು ಧ್ವನಿ ಎತ್ತಿದಾಗ ನಾವು ಅವರ ಬೆಂಬಲಕ್ಕೆ ನಿಂತಿದ್ದೇವೆ. ರಾಜ್ಯೋತ್ಸವ ಪ್ರಶಸ್ತಿಗಳು ಸಿಗದಿದ್ದಾಗ ಬೆನ್ನಿಗೆ ನಿಂತಿದ್ದೇವೆ. ಗಡಿಯಲ್ಲಿ ಕನ್ನಡ ಉಳಿವಿಗೆ, ಬೆಳವಣಿಗೆಗೆ ಹಲವು ಸಾಹಿತಿಗಳ ದೊಡ್ಡ ಪ್ರಮಾಣದ ಕಾಣಿಕೆ ನೀಡಿದ್ದಾರೆ. ಅವರೆಲ್ಲರೂ ಇತಿಹಾಸ ನಿರ್ಮಾಣ ಮಾಡಿದ್ದು ನಿಜ. ಆ ಬಗ್ಗೆ ಬಹಳ ಗೌರವವಿದೆ. ಆದರೆ, ಗಡಿಯಲ್ಲಿ ಕನ್ನಡದ ವಿಷಯ ಬಂದಾಗ ಯಾರೂ ಹೋರಾಟಕ್ಕೆ ಬರುವುದಿಲ್ಲ. ಕನಿಷ್ಠ ಪಕ್ಷ ನಮ್ಮ ಬೆನ್ನಿಗೆ ನಿಲ್ಲುವುದಿಲ್ಲ, ಮಾಧ್ಯಮಗಳ ಮೂಲಕ ಅಭಿಪ್ರಾಯ ತಿಳಿಸುವುದಿಲ್ಲ. ಇದು ಬೇಸರ ತರಿಸಿದೆ’ ಎಂದು ಹೊರಾಟಗಾರರಾದ ಶ್ರೀನಿವಾಸ, ಉಮೇಶ, ಅರುಣ, ಗಜಾನನ, ಪತ್ರೆಪ್ಪ ಝಳಕಿ ಹಲವರು ಪ್ರತಿಕ್ರಿಯೆ ನೀಡಿದ್ದಾರೆ.

ರಾಜ್ಯೋತ್ಸವ ಪ್ರಶಸ್ತಿ ಪಡೆದ ಯಾವೊಬ್ಬ ಸಾಧಕ ಕೂಡ ಈ ಹೋರಾಟಕ್ಕೆ ಪ್ರತಿಸ್ಪಂದನೆ ತೋರಿಲ್ಲ. ಆದರೆ, ಇದೇ ಮೊದಲ ಬಾರಿಗೆ 20ಕ್ಕೂ ಹೆಚ್ಚು ವಿವಿಧ ಕನ್ನಡ ಪರ ಯುವ ಸಂಘಟನೆಗಳು ಒಂದಾಗಿ ನಿಂತಿದ್ದು, ಗಮನಾರ್ಹ.

ಹೋರಾಟಗಾರರಾದ ವಾಟಾಳ್ ನಾಗರಾಜ, ಸಾ.ರಾ. ಗೋವಿಂದ ಸೇರಿದಂತೆ ಬೆಳಗಾವಿ, ಗೋಕಾಕ ಹಾಗೂ ವಿವಿಧ ಭಾಗಗಳಿಂದ ಹಲವರು ಈಗಾಗಲೇ ತೀವ್ರ ಸ್ವರೂಪದ ಹೋರಾಟ ಮಾಡಿದ್ದೂ ಆಗಿದೆ. ಜೂನ್ 2ರವರೆಗೆ ಠರಾವಿಗಾಗಿ ಗಡುವು ಕೂಡ ನೀಡಲಾಗಿದೆ.

‘ಕನ್ನಡ ಮನಸ್ಸುಗಳೆಲ್ಲ ಒಂದಾಗುವ ಕಾಲ ಬಂದಿದೆ’ ಎಂದು ದಶಕಗಳ ಹಿಂದೆಯೇ ದಿವಂಗತ ಪಾಟೀಲ ಪುಟ್ಟಪ್ಪ ಅವರು ಹೇಳಿದ ಮಾತು ಈ ಹೋರಾಟದ ರೂಪದಲ್ಲಿ ಪ್ರತಿಧ್ವನಿಸುತ್ತಿದೆ ಎನ್ನುತ್ತಾರೆ ಮುಂದಾಳುಗಳು.

ಮೇಯರ್, ಉಪಮೇಯರ್ ಕುಂಟು ನೆಪ

'ಗಡಿ ಸಮಸ್ಯೆ ಸುಪ್ರೀಂ ಕೋರ್ಟಿನಲ್ಲಿದೆ. ಆದ್ದರಿಂದ ಪಾಲಿಕೆಯಲ್ಲಿ ಠರಾವು ಪಾಸ್ ಮಾಡಲು ಅವಕಾಶವಿಲ್ಲ' ಎಂದು ಮೇಯರ್ ಪ್ರೀತಿ ಕಾಮಕರ ಹಾಗೂ ಉಪ ಮೇಯರ್ ಹಣಮಂತ ಕೊಂಗಾಲಿ ಹೇಳಿದ್ದಾರೆ.

ಗಡಿ ಸಮಸ್ಯೆ ಸುಪ್ರೀಂನಲ್ಲಿ ಚರ್ಚೆಗೆ ಬರಬೇಕೇ, ಬೇಡವೇ ಎಂಬ ಅರ್ಜಿಯೇ ಇನ್ನೂ ನಿರ್ಧಾರವಾಗಿಲ್ಲ. ಅದರ ಅರಿವೂ ಇಲ್ಲದಂತೆ ಜನಪ್ರತಿನಿಧಿಗಳು ಹೇಳಿಕೆ ನೀಡಿದ್ದು ಹೋರಾಟಗಾರರನ್ನು ಕೆರಳಿಸಿದೆ.

ಮಾತ್ರವಲ್ಲ; 2005ರಲ್ಲಿ ವಿಜಯ ಮೋರೆ ಮೇಯರ್ ಇದ್ದಾಗಲೂ ಗಡಿ ತಂಟೆ ಸುಪ್ರೀಂನಲ್ಲಿತ್ತು. ಆದರೂ ಅವರು 'ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕು' ಎಂಬ ನಿರ್ಣಯ ಮಂಡಿಸಿ ಠರಾವ್ ಪಾಸ್ ಮಾಡಿದರು. 21 ವರ್ಷಗಳ ಹಿಂದೆ ನಡೆದ ಈ ಘಟನೆಗೆ ಈಗಿನ ಪಾಲಿಕೆ ಸದಸ್ಯರೂ ಸಾಕ್ಷಿಯಾಗಿದ್ದಾರೆ. ಅದರೂ ತಮ್ಮ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ ಎಂಬುದು ಹೋರಾಟಗಾರರ ತಕರಾರು.

ಅಡ್ಡ ನಿಂತಿದ್ದಾರಾ ಶಾಸಕರು?

ಬೆಳಗಾವಿ ಮಹಾನಗರ ಪಾಲಿಕೆ ಮೂರು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಮೂವರೂ ಶಾಸಕರು ಮರಾಠ ಮತಬ್ಯಾಂಕ್ ಸಲುವಾಗಿ ಈ ರೀತಿಯ ನಿರ್ಣಯಕ್ಕೆ ಅಡ್ಡಗಾಲು ಹಾಕಿದ್ದಾರೆ ಎಂಬ ಆರೋಪಗಳೂ ಕೇಳಿಬಂದಿವೆ.

ಇಷ್ಟೆಲ್ಲ ಹೋರಾಟದ ಬಳಿಕವೂ ಸಚಿವರು, ಶಾಸಕರು ಪ್ರತಿಕ್ರಿಯೆ ನೀಡದಿರುವುದು ಸಂದೇಹಕ್ಕೆ ಎಡೆಮಾಡಿಕೊಟ್ಟಿದೆ. ಪಾಲಿಕೆ ಆಡಳಿತ ಶಾಸಕರ ಮುಷ್ಟಿಯಲ್ಲಿದೆ. ಹೀಗಾಗಿ, ಪಾಲಿಕೆಯ ಬದಲು ಶಾಸಕರು, ಸಚಿವರ ಮನೆಗೆ ಮುತ್ತಿಗೆ ಹಾಕುತ್ತೇವೆ ಎಂಬ ಮಾತೂ ಹೋರಾಟಗಾರರಿಂದ ಕೇಳಿಬಂದಿದೆ.

'ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ಇರುವ ಕಾರಣ, ಬಿಜೆಪಿ ಶಾಸಕರು ಯಾರೂ ಹೋರಾಟದ ಪರವಿಲ್ಲ' ಎಂದೂ ಅವರು ಆರೋಪಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260528-21-1246549176

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.