ಗೋಕಾಕ: ‘ಮಹಾನಗರ ಪಾಲಿಕೆಯಲ್ಲಿ ಕರ್ನಾಟಕ ಪರವಾದ ಗೊತ್ತುವಳಿ ಅಂಗೀಕರಿಸಲು ಯಾರದೇ ಅಪ್ಪಣೆಯ ಅವಶ್ಯಕತೆಯಿಲ್ಲ. ನಮ್ಮ ನಾಡಿನಲ್ಲಿ ‘ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ’ ಎಂಬ ಗೊತ್ತುವಳಿ ಪಾಸು ಮಾಡಬೇಕೆಂಬ ಕನ್ನಡ ಸಂಘಟನೆಗಳ ಒತ್ತಾಯಕ್ಕೆ ಸಹಮತವಿದೆ. ಈ ಕುರಿತು ಚರ್ಚಿಸಲು ಶೀಘ್ರವೇ ಮೇಯರ್, ಉಪಮೇಯರ್ ಮತ್ತು ಕನ್ನಡ ಸಂಘಟನೆಗಳ ಸಭೆ ಕರೆಯುವುದಾಗಿ’ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಭರವಸೆ ನೀಡಿದ್ದಾರೆ.

ಮಂಗಳವಾರ ಗೋಕಾಕ ನಗರದಲ್ಲಿ ಜಯಕರ್ನಾಟಕ ಜನಪರ ವೇದಿಕೆಯ ಬೆಳಗಾವಿ ಜಿಲ್ಲಾ ಘಟಕದ ಅಧ್ಯಕ್ಷ ಶಿವಾರೆಡ್ಡಿ ಹುಚ್ಚರೆಡ್ಡಿ ಅವರ ನೇತೃತ್ವದಲ್ಲಿ ಕಾರ್ಯಕರ್ತರು ಬೆಳಗಾವಿ ಪಾಲಿಕೆಯ ಸಂಬಂಧ ಮನವಿ ಸಲ್ಲಿಸಿದ ಸಂದರ್ಭದಲ್ಲಿ ಈ ಭರವಸೆ ನೀಡಿದರು.

‘ಬೆಳಗಾವಿ ಪಾಲಿಕೆಯಲ್ಲಿ ಕರ್ನಾಟಕ ಪರವಾದ ಗೊತ್ತುವಳಿ ಅಂಗೀಕಾರಕ್ಕೆ ಆಗ್ರಹಿಸಿ ಕಳೆದ ಮಾರ್ಚ್ 26ರಿಂದ ಕನ್ನಡ ಪರ ಸಂಘಟನೆಗಳು ನಡೆಸಿರುವ ಹೋರಾಟ ಹಾಗೂ ಮೇಯರ್ ಮತ್ತು ಉಪ ಮೇಯರ್ ತಾವು ನೀಡುತ್ತ ಬಂದ ಭರವಸೆಯಂತೆ ನಡೆದುಕೊಳ್ಳದೆ ಕನ್ನಡಿಗರಿಗೆ ಬಗೆದ ದ್ರೋಹದ ಬಗ್ಗೆ ಶಿವಾರೆಡ್ಡಿ ಅವರು ಜಾರಕಿಹೊಳಿ ಅವರಿಗೆ ವಿವರಿಸಿದರು.

ಉಪಾಧ್ಯಕ್ಷ ಸಿಡ್ಲಿಂಗಪ್ಪ ಸಂಕುಪ್ಪಿ, ಲಕ್ಷ್ಮಣ ಮಳ್ಳಿಗಿರಿ, ಅಜೀಜ್ ಮೊಕಾಶಿ, ಭಾಗ್ಯಶ್ರೀ ಪಾಟೀಲ, ಮಹಾದೇವಿ ಹುಡೇದ, ಶಬಾನಾ ಬೋಗುರ, ತಬಸಂ ಮಾವಿನಕಟ್ಟಿ, ಉತ್ತಮ ಸಹನವಲೆ, ಕೃಷ್ಣ ಮಾವರಕರ, ಗಜಾನನ ಹಾಗೂ ದಯಾನಂದ ಘೆವಡೆ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260520-21-1628171564

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.