ಬೆಳಗಾವಿ: ಮದ್ಯ ಅಕ್ರಮ ಮಾರಾಟ ಹಾಗೂ ಗಾಂಜಾ ಸೇವನೆ ನಾಲ್ಕು ಪ್ರತ್ಯೇಕ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಿದ ಪೊಲೀಸರು ₹36 ಸಾವಿರ ಮೌಲ್ಯದ ಮದ್ಯ ವಶಪಡಿಸಿಕೊಂಡಿದ್ದಾರೆ. ಐವರನ್ನು ಬಂಧಿಸಿದ್ದಾರೆ.

ಹಿರೇಬಾಗೇವಾಡಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮದ್ಯ ಮಾರಾಟ ಮಾಡುತ್ತಿದ್ದ ಕೆ.ಕೆ.ಕೊಪ್ಪದ ರಾಜು ಬಸನ್ನವರ (33) ವಿರುದ್ಧ ಪ್ರಕರಣ ದಾಖಲಿಸಿಕೊಂಡು ಬಂಧಿಸಲಾಗಿದೆ.

ಗಾಂಜಾ ಹಾಗೂ ವಿವಿಧ ಮಾದಕ ಪದಾರ್ಥ ಸೇವನೆ ಮಾಡುತ್ತಿದ್ದ ಗಣಾಚಾರಿ ಗಲ್ಲಿಯ ಕೃತಿಕ್ ಸಂಜಯ ಬಡಿಗೆ (26) ಅವರನ್ನು ಖಡೇಬಜಾರ್ ಠಾಣೆ ಪೊಲೀಸರು, ಅಂಬೇವಾಡಿ ಗ್ರಾಮದಲ್ಲಿ ಶ್ರೀನಾಥ ರಾಮಚಂದ್ರ ಅಂಬೇಕರ ಹಾಗೂ ಸಾಗರ ದೇವರಾಜ ಅಂಬೇಕರ ಎಂಬವರನ್ನು ಕಾಕತಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ನ್ಯೂ ಗಾಂಧಿ ನಗರದಲ್ಲಿ ಪ್ರಣೀತ ಪೂಜಾರಿ (21)ಯನ್ನು ಬಂಧಿಸಿರುವ ಮಾಳಮಾರುತಿ ಠಾಣೆ ಪೊಲೀಸರು, ಪ್ರಕರಣ ದಾಖಲಿಕೊಂಡು ಕ್ರಮಜರುಗಿಸಿದ್ದಾರೆ.

ಸೌಂಡ್ ಸಾಮಗ್ರಿ ವಶ: ಅನುಮತಿ ಪಡೆಯದೇ ಮದುವೆ ಕಾರ್ಯಕ್ರಮದ ವೇಳೆ ರಾತ್ರಿ ಡಾಲ್ಬಿ ಸೌಂಡ್ ಸಿಸ್ಟಮ್ ಬಳಸಿ ಸಾರ್ವಜನಿಕರಿಗೆ ಹಾಗೂ ವಾಹನ ಸಂಚಾರಕ್ಕೆ ತೊಂದರೆ ಉಂಟು ಮಾಡಿದವರ ವಿರುದ್ಧ ಪ್ರಕರಣ ದಾಖಲಿಸಿಕೊಂಡ, ಮಾರಿಹಾಳ ಠಾಣೆ ಪೊಲೀಸರು ಡಾಲ್ಬಿ ಸೌಂಡ್ ಸಿಸ್ಟಮ್ ವಶಪಡಿಸಿಕೊಂಡಿದ್ದಾರೆ.

ಸುಳೇಭಾವಿ ಗ್ರಾಮದ ಹೊಸಕೇರಿ ಓಣಿಯ ಸುರೇಶ ಬಳಗನ್ನವರ ಮತ್ತು ವೀರಭದ್ರ ಯರಗುದ್ದಿ ವಿರುದ್ಧ ಪ್ರಕರಣ ದಾಖಲಿಸಿ, ಸೌಂಡ್ ಸಿಸ್ಟಮ್ ಸೇರಿದಂತೆ ಸುಮಾರು ₹52 ಸಾವಿರ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260407-21-1109502523

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.