ಬೆಳಗಾವಿ: ನಗರದ ವಿವಿಧೆಡೆ ಸೋಮವಾರ ಮಟ್ಕಾ ಆಟದಲ್ಲಿ ತೊಡಗಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಇಲ್ಲಿನ ರೈಲ್ವೆ ನಿಲ್ದಾಣ ರಸ್ತೆಯಲ್ಲಿ ಬಾಂಧುರ ಗಲ್ಲಿಯ ವಿನಾಯಕ ಜಾಧವ ಎಂಬಾತನನ್ನು ಖಡೇಬಜಾರ್ ಠಾಣೆಪೊಲೀಸರು ಹಾಗೂಕೇಂದ್ರೀಯ ಬಸ್ ನಿಲ್ದಾಣದ ಬಳಿ ಶಹಾಪುರದ ಹೊಸೂರಿನ ನಿಖಿಲ್ ಘಂಟಾನೆ ಎಂಬಾತನನ್ನು ಮಾರ್ಕೆಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೆಳಗಾವಿ: ಇಲ್ಲಿನ ಭಾಗ್ಯ ನಗರದಲ್ಲಿ ಸೋಮವಾರ ಗಾಂಜಾ ಸೇವಿಸುತ್ತಿದ್ದ ಅದೇ ಪ್ರದೇಶದ ಸೂರಜ್ ಶಾನಭಾಗ ಎಂಬಾತನನ್ನು ಟಿಳಕವಾಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೆಳಗಾವಿ: ಇಲ್ಲಿನ ಬಳ್ಳಾರಿ ನಾಲೆ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಭಾನುವಾರ ಜೂಜಾಟದಲ್ಲಿ ತೊಡಗಿದ್ದ ಎಂಟು ಮಂದಿಯನ್ನು ಶಹಾಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ನಗರದ ಮಹಾದ್ವಾರ ರಸ್ತೆಯ ಧನರಾಜ ಸುತಾರ, ಶಿವಾಜಿ ನಗರದ ನಜೀರ್ ಪಠಾಣ, ಖಾಸಬಾಗದ ಉಪ್ಪಾರ ಗಲ್ಲಿಯ ಶ್ರೀಧರ ಲೋಹಾರ, ಪಾಟೀಲ ಗಲ್ಲಿಯ ರಾಹುಲ ಹಲಗೇಕರ, ಖಾಸಬಾಗದ ಕುಂತಿ ನಗರದ ವಿನಾಯಕ ದರಮುಡೆ, ಬಾಂಧುರ ಗಲ್ಲಿಯ ವಿಶ್ವನಾಥ ಗೋಟಡಕಿ, ಕಪಿಲೇಶ್ವರ ಕಾಲೊನಿಯ ಶಶಿ ಜಾಲಗಾರ, ತಾಲ್ಲೂಕಿನ ಕಾಕತಿಯ ಲಕ್ಷ್ಮಿ ನಗರದ ನಾಗಪ್ಪ ನಾಯಿಕ ಬಂಧಿತರು. ಅವರಿಂದ ₹47,200 ನಗದು ವಶಕ್ಕೆ ಪಡೆಯಲಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260603-21-342438921

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.