ರಾಮದುರ್ಗ: ಅಧಿಕಾರ ಶಾಶ್ವತವಾಗಿ ಉಳಿಯುವುದಿಲ್ಲ. ಸದ್ಯ ಲಭ್ಯವಾಗಿರುವ ಅಧಿಕಾರ ಬಳಸಿಕೊಂಡು ಸಮಾಜ ಸಂಘಟನೆ ಜೊತೆಗೆ ಸಾಮಾಜಿಕ ಯೋಜನೆಗಳನ್ನು ಜಾರಿಗೆ ತಂದು ಸಮಾಜದ ಋಣ ತೀರಿಸುವೆ ಎಂದು ಬೆಳಗಾವಿ ಮಹಾನಗರ ಪಾಲಿಕೆಯ ನೂತನ ಮೇಯರ್ ಪ್ರೀತಿ ವಿನಾಯಕ ಕಾಮಕರ ಹೇಳಿದರು.

ಪಟ್ಟಣದ ರಾಧಾಪೂರ ಪೇಟೆಯಲ್ಲಿ ತಾಲ್ಲೂಕು ಆಡಳಿತ, ದೇವಾಂಗ ಸಮಾಜ ಹಾಗೂ ನೇಕಾರ ಸಮುದಾಯಗಳ ನೇತೃತ್ವದಲ್ಲಿ ಏರ್ಪಡಿಸಿದ್ದ ಆದ್ಯ ವಚನಕಾರ ದೇವರ ದಾಸಿಮಯ್ಯ ಅವರ 1047ನೇ ಜಯಂತ್ಯುತ್ಸವ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ತಾಲ್ಲೂಕಿನ ನಾಗನೂರ ಬಸವಾಶ್ರಮದ ಕಾರ್ಯದರ್ಶಿ ನಿವೇದಿತಾ ಉಪನ್ಯಾಸ ನೀಡಿ, ಕನ್ನಡದ ಮೊಟ್ಟ ಮೊದಲ ವಚನಕಾರ ದೇವರ ದಾಸಿಮಯ್ಯ ಅವರು ಹೆಣ್ಣು, ಗಂಡು, ಮೇಲುಕೀಳು, ಜಾತಿ-ಪಂಥ ಆಚರಣೆಗಳ ಬೇಧಗಳನ್ನು ಗುರುತಿಸಿ ಸಾಮಾಜಿಕ ವ್ಯವಸ್ಥೆಯ ಅನ್ಯಾಯಗಳನ್ನು ಧಿಕ್ಕರಿಸಿ ವಚನಗಳ ಮೂಲಕ ಎಳೆ ಎಳೆಯಾಗಿ ತೋರಿಸಿದ್ದಾರೆ ಎಂದರು.

ತಹಶೀಲ್ದಾರ್ ಸಂಜಯ್ ಖಾತೇದಾರ, ರಾಜ್ಯ ದೇವಾಂಗ ಸಂಘದ ಉಪಾಧ್ಯಕ್ಷ ಶಂಕ್ರಪ್ಪ ಮುರುಡಿ, ನೇಕಾರ ಸಮುದಾಯಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಗಜಾನನ ಗುಂಜೇರಿ ಮಾತನಾಡಿದರು.

ಸಾನಿಧ್ಯ ವಹಿಸಿದ್ದ ವೇದಮೂರ್ತಿ ಶಂಕ್ರಯ್ಯಸ್ವಾಮಿ ದೇವಾಂಗಮಠ, ವೇದಮೂರ್ತಿ ನಿರಂಜನಸ್ವಾಮಿ ದೇವಾಂಗಮಠ ಮಾತನಾಡಿದರು.

ಬೆಳಗಾವಿ ಮಹಾನಗರ ಪಾಲಿಕೆ ಸದಸ್ಯೆ ರೇಶ್ಮಾ ಕಾಮಕರ, ರಾಜ್ಯ ದೇವಾಂಗ ಸಂಘದ ನಿರ್ದೇಶಕ ಶಿವಾನಂದ ಬಳ್ಳಾರಿ, ದೇವಾಂಜ ಸಮಾಜದ ತಾಲೂಕು ಅಧ್ಯಕ್ಷ ಅಶೋಕ ಸೂಳಿಭಾಂವಿ, ನೇಕಾರ ಸಮುದಾಯಗಳ ಒಕ್ಕೂಟದ ತಾಲ್ಲೂಕು ಅಧ್ಯಕ್ಷ ನಾರಾಯಣ ಹೂಲಿ, ಬನಶಂಕರಿ ದೇವಾಂಗ ಸಮಾಜದ ಅಧ್ಯಕ್ಷ ಕುಬೇರ ಗರಡಿಮನಿ, ಮುಖಂಡರಾದ ಏಕನಾಥ ಕೊಣ್ಣೂರ, ನೇಮಣ್ಣ ಆರಿ, ಮನೋಹರ ಹೊನ್ನುಂಗರ, ದಾಮೋದರ ರಾಮದುರ್ಗ, ಶ್ರೀಕಾಂತ ಮುಗಳಿ ಇದ್ದರು.

ಪ್ರಥಮೇಶ ಯಾದವಾಡ ಪ್ರಾರ್ಥಿಸಿದರು. ಪತ್ರಕರ್ತ ರಾಮಚಂದ್ರ ಯಾದವಾಡ ಸ್ವಾಗತಿಸಿದರು. ಶಿಕ್ಷಕ ಎಸ್.ಎಂ. ಕಲ್ಲೂರ ಕಾರ್ಯಕ್ರಮ ನಿರೂಪಿಸಿದರು. ವಿನೋದ ಕರದಿನ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260325-21-1481645014

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.