ಭಾನುವಾರ, ಸೆಪ್ಟೆಂಬರ್ 15, 2019
26 °C

ಬೆಳಗಾವಿ– ಮುಂಬೈಗೆ ಸ್ಟಾರ್‌ ಏರ್‌ ವಿಮಾನ ಹಾರಾಟ ಆರಂಭ

Published:
Updated:
Prajavani

ಬೆಳಗಾವಿ: ಉಡಾನ್‌–3 ಯೋಜನೆಯಡಿ ಬೆಳಗಾವಿ– ಮುಂಬೈ ವಿಮಾನಯಾನವನ್ನು ಸ್ಟಾರ್‌ ಏರ್‌ ಕಂಪನಿಯು ಶುಕ್ರವಾರದಿಂದ ಪ್ರಾರಂಭಿಸಿದೆ. 50 ಆಸನಗಳ ವಿಮಾನದಲ್ಲಿ ಮೊದಲ ದಿನ 30 ಜನ ಪ್ರಯಾಣಿಕರು ಪ್ರಯಾಣಿಸಿದರು.

ವಿಮಾನ ಹಾರಾಟಕ್ಕೆ ಚಾಲನೆ ನೀಡಿದ ಸಂದರ್ಭದಲ್ಲಿ ರೈಲ್ವೆ ರಾಜ್ಯ ಸಚಿವ ಸುರೇಶ ಅಂಗಡಿ, ವಿಮಾನಯಾನ ಕಂಪನಿ ಘೋಡಾವತ್‌ ಗ್ರುಪ್‌ನ ನಿರ್ದೇಶಕ ನಿಲೇಶ ಭಾಗಿ, ವಿಮಾನ ನಿಲ್ದಾಣದ ನಿರ್ದೇಶಕ ರಾಜೇಶಕುಮಾರ ಮೌರ್ಯ, ಇತರರು ಭಾಗಿಯಾಗಿದ್ದರು.

4 ದಿನ ಹಾರಾಟ: ವಾರದಲ್ಲಿ ನಾಲ್ಕು ದಿನ ಈ ವಿಮಾನವು ಹಾರಾಟ ನಡೆಸಲಿದೆ. ಗುರುವಾರ, ಶುಕ್ರವಾರ, ಶನಿವಾರ ಹಾಗೂ ಭಾನುವಾರ. ಬೆಳಗಾವಿಯಿಂದ ಬೆಳಿಗ್ಗೆ 11.50ಕ್ಕೆ ಹಾರುವ ವಿಮಾನವು, ಮಧ್ಯಾಹ್ನ 1 ಗಂಟೆಗೆ ಮುಂಬೈಗೆ ತಲುಪಲಿದೆ. ಮುಂಬೈನಿಂದ ಮಧ್ಯಾಹ್ನ 1.30ಕ್ಕೆ ಹೊರಡುವ ವಿಮಾನವು ಬೆಳಗಾವಿಗೆ 2.30ಕ್ಕೆ ಬಂದಿಳಿಯಲಿದೆ.

ಪ್ರಯಾಣ ದರ: ಅಂದಾಜು ₹ 2,399.

Post Comments (+)