ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ತಾಲ್ಲೂಕು ಪಂಚಾಯ್ತಿಗಳ ‘ವ್ಯಾಪ್ತಿ’ ನಿಗದಿ

ನಿಧಿ ಹಾಗೂ ಸ್ವತ್ತುಗಳ ವಿಭಜನೆಗೂ ಕ್ರಮ
Last Updated 14 ನವೆಂಬರ್ 2019, 19:30 IST
ಅಕ್ಷರ ಗಾತ್ರ

ಬೆಳಗಾವಿ: ಜಿಲ್ಲೆಯಲ್ಲಿ ಹೊಸದಾಗಿ ರಚಿಸಲಾಗಿರುವ ಮೂಡಲಗಿ, ನಿಪ್ಪಾಣಿ ಹಾಗೂ ಕಾಗವಾಡ ತಾಲ್ಲೂಕುಗಳ ವ್ಯಾಪ್ತಿಯನ್ನು ನಿಗದಿಪಡಿಸಿ, ಹಳ್ಳಿಗಳನ್ನು ಹಂಚಿಕೆ ಮಾಡಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯಿಂದ ಈಚೆಗೆ ಅಧಿಸೂಚನೆ ಹೊರಡಿಸಲಾಗಿದೆ. ರಾಜ್ಯಪತ್ರದಲ್ಲೂ ಪ್ರಕಟಿಸಲಾಗಿದೆ.

ಗೋಕಾಕದಿಂದ ಬೇರ್ಪಡಿಸಿ ಮೂಡಲಗಿ, ಚಿಕ್ಕೋಡಿಯಿಂದ ವಿಭಜಿಸಿ ನಿಪ್ಪಾಣಿ ಹಾಗೂ ಅಥಣಿಯಿಂದ ಬೇರ್ಪಡಿಸಿ ಕಾಗವಾಡ ತಾಲ್ಲೂಕು ರಚಿಸಲಾಗಿದೆ.

ಮೂಡಲಗಿ, ನಿಪ್ಪಾಣಿ ಹಾಗೂ ಕಾಗವಾಡ ಕೇಂದ್ರ ಸ್ಥಾನಗಳಾಗಿ ಕಾರ್ಯನಿರ್ವಹಿಸಲಿವೆ. ಕರ್ನಾಟಕ ಗ್ರಾಮ ಸ್ವರಾಜ್‌ ಹಾಗೂ‌ ಪಂಚಾಯತ್‌ರಾಜ್‌ ಅಧಿನಿಯಮ 1993ರ ಪ್ರಕರಣ 119 ಮತ್ತು 302 (ಎ) ಅಡಿಯಲ್ಲಿ ಪ್ರದತ್ತವಾದ ಅಧಿಕಾರ ಚಲಾಯಿಸಿ ಹೊಸ ತಾಲ್ಲೂಕು ಪಂಚಾಯ್ತಿಗಳನ್ನು 14.10.2019ರಿಂದ ಜಾರಿಗೆ ಬರುವಂತೆ ರಚಿಸಿ ಆದೇಶಿಸಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್‌ ಇಲಾಖೆ ಅಧೀನ ಕಾರ್ಯದರ್ಶಿ ಕೆ.ಎಸ್. ಮಹಾಲಕ್ಷ್ಮಿ ಆದೇಶದಲ್ಲಿ ತಿಳಿಸಿದ್ದಾರೆ.

ಗ್ರಾಮಗಳ ಸೇರ್ಪಡೆ:ಮೂಡಲಗಿಗೆ 48, ನಿಪ್ಪಾಣಿಗೆ 55 ಹಾಗೂ 27 ಗ್ರಾಮಗಳನ್ನು ಸೇರಿಸಲಾಗಿದೆ. ಅಲ್ಲದೇ, ಇವುಗಳನ್ನು ಹಿಂದಿನ ತಾಲ್ಲೂಕು ಪಂಚಾಯ್ತಿ ವ್ಯಾಪ್ತಿಯಿಂದ ಕೈಬಿಡಲಾಗಿದೆ. ಈ ಮೂಲಕ ಹೊಸ ತಾಲ್ಲೂಕು ಪಂಚಾಯ್ತಿಗಳು ಅಧಿಕೃತವಾಗಿ ಉದಯವಾದಂತಾಗಿವೆ. ಆ ಭಾಗದ ಜನರ ಹಲವು ವರ್ಷಗಳ ಬೇಡಿಕೆ ಈಡೇರಿದೆ. ಅಲ್ಲಿ ಕಚೇರಿಗಳು ಮೊದಲಾದ ಸೌಲಭ್ಯಗಳನ್ನು ಒದಗಿಸುವ ಕೆಲಸ ಇನ್ನೂ ನಡೆದಿಲ್ಲ!

ಪ್ರಾದೇಶಿಕ ಆಯುಕ್ತರು, ಹೊಸ ತಾಲ್ಲೂಕು ಪಂಚಾಯ್ತಿಗೆ ಹಾಗೂ ಅಸ್ತಿತ್ವದಲ್ಲಿರುವುದಕ್ಕೆ ಸದಸ್ಯರನ್ನು ಅಧಿಸೂಚನೆ ಹೊರಡಿಸಬೇಕು. ಅಸ್ತಿತ್ವದಲ್ಲಿರುವ ತಾಲ್ಲೂಕು ಪಂಚಾಯ್ತಿಯಲ್ಲಿರುವ ‘ಖರ್ಚಾಗದೇ ಉಳಿದ ನಿಧಿ’ ಹಾಗೂ ಇತರ ಸ್ವತ್ತುಗಳನ್ನು ಸಂಬಂಧಪಟ್ಟ ಸಿಇಒ ಶೇ 50ರಷ್ಟು ಹಣವನ್ನು ಪ್ರದೇಶದ ವಿಸ್ತೀರ್ಣದ ಆಧಾರದ ಮೇಲೆ ಮತ್ತು ಶೇ 50ರಷ್ಟು ನಿಧಿಯನ್ನು ಜನಸಂಖ್ಯೆ ಆಧಾರದ ಮೇಲೆ ವಿಭಜಿಸಿ ಸಂಬಂಧಿಸಿದ ಹೊಸ ತಾಲ್ಲೂಕು ಪಂಚಾಯ್ತಿಗಳಿಗೆ ವರ್ಗಾಯಿಸಬೇಕು ಎಂದು ಆದೇಶಿಸಲಾಗಿದೆ.‌

ಆದರೆ, ಹೊಸ ತಾಲ್ಲೂಕು ಪಂಚಾಯ್ತಿಗಳಿಗೆ ಇಒಗಳನ್ನು ಈವರೆಗೂ ನೇಮಿಸಲಾಗಿಲ್ಲ. ಹೀಗಾಗಿ, ಜಿಲ್ಲಾ ಪಂಚಾಯ್ತಿಯಿಂದ ಶೇ 50ರಷ್ಟು ಹಣವನ್ನು ಪ್ರದೇಶದ ವಿಸ್ತೀರ್ಣ ಮತ್ತು ಶೇ 50ರಷ್ಟು ನಿಧಿಯನ್ನು ಜನಸಂಖ್ಯೆ ಆಧಾರದ ಮೇಲೆ ವಿಭಜಿಸಿ ಯಾರಿಗೆ ಕೊಡಬೇಕು ಎನ್ನುವ ಗೊಂದಲದಲ್ಲಿ ಜಿಲ್ಲಾ ಪಂಚಾಯ್ತಿ ಅಧಿಕಾರಿಗಳಿದ್ದಾರೆ!

ಆದೇಶದಲ್ಲಿ ಹಲವು ಹಳ್ಳಿಗಳ ಹೆಸರುಗಳನ್ನು ಕೂಡ ತಪ್ಪಾಗಿ ನಮೂದಿಸಲಾಗಿದೆ!

***

ಮೂಡಲಗಿ ವ್ಯಾಪ್ತಿಗೆ ಒಳಪಡುವ ಗ್ರಾಮಗಳು
ಯಾದವಾಡ, ಮನೋಮಿ (ಎಚ್), ಕಮನಕಟ್ಟಿ, ಕೋಪದಟ್ಟಿ, ಗುಲಗಂಜಿಕೊಪ್ಪ, ಅವರಾದಿ, ವೆಂಕಟಪುರ, ತಿಮ್ಮಾಪುರ, ಯರಗುದ್ರಿ, ಹೊಸ ಯರಗುದ್ರಿ (ಎಚ್), ಕುಲಗೋಡ, ಢವಳೇಶ್ವರ, ಹೊನ್ನಾಪುರ ಎಚ್‌., ಅರಳೀಮಟ್ಟಿ, ಹುಣಶ್ಯಾಳ ಪಿ.ವೈ., ಹೊಸಟ್ಟಿ, ಬೈರನಟ್ಟಿ, ಬೀಸನಕೊಪ್ಪ, ಸುಂದೊಳ್ಳಿ, ಹೂಂಕುಪ್ಪಿ (ಎಚ್‌), ಲಕ್ಷ್ಮೇಶ್ವರ, ತಿಗಡಿ, ತೊಕರಟ್ಟಿ (ಎಚ್), ಸಿದ್ದಾಪುರ ಹಟ್ಟಿ, ಅರಭಾವಿ, ಸಂಗನಕೇರಿ (ಎಚ್‌), ರಾಜಾಪುರ, ತುಕ್ಕಾನಟ್ಟಿ, ಕಲ್ಲೋಳಿ, ಹನಮಪುರ (ಎಚ್), ನಾಗನೂರು, ಹಲೂರು, ಶಿವಪುರ, ಖಾನಟ್ಟಿ, ಮೂಡಲಗಿ, ಗುರ್ಲಾಪುರ (ಎಚ್), ಮನಲ್ಯ, ರಂಗಪುರ, ಕಮಲದಿನ್ನಿ, ಧರ್ಮಟ್ಟಿ, ಪಟಗುಂದಿ, ಮುಸಗುಪ್ಪಿ, ಬದಲ್‌ ಖಾನವರ ಟಿಒಟಿ (ಎಚ್‌), ಗುಜನಟ್ಟಿ, ಚೊಕನಟ್ಟಿ (ಎಚ್), ವಡೇರಗಟ್ಟಿ, ಪುಲ್ಗಡಿ, ಹುಣಶ್ಯಾಳ ಪಿ.ಜಿ.

ಕಾಗವಾಡ ವ್ಯಾಪ್ತಿಗೆ ಒಳಪಡುವ ಗ್ರಾಮಗಳು
ಕೃಷ್ಣಾ ಕಿತ್ತೂರ, ಬಣಜವಾಡ, ಕಾಗವಾಡ, ಮಂಗಸೂಳಿ, ಲೋಕೂರ, ಮೋಳೆ, ಬಸವನಗರ ದೇವರೆಡ್ಡಿ ಟಿಒಟಿ (ಮಜರೆ), ಉಗಾರ ಬದ್ರುಕ, ಪರಮೇಶ್ವರವಾಡಿ (ಮಜರೆ), ಶಿರಗುಪ್ಪಿ, ಜುಗುಳ, ಶಹಾಪುರ, ಮಂಗಾವತಿ, ಕೆಂಪವಾಡ, ನವಲಿಹಾಳ, ಕೌಲಗುಡ್ಡ, ಕಿಡಗೇಡಿ (ಮಜರೆ), ಕುಸನಾಳ, ಮೂಲವಾಡ, ಐನಾಪುರ (ಪಟ್ಟಣ ಪಂಚಾಯ್ತಿ), ಶೇಡಬಾಳ (ಪಟ್ಟಣ ಪಂಚಾಯ್ತಿ), ಶೀತನಲಾಥ ನಗರ (ಮಜರೆ), ಸಿದ್ದಾರ್ಥನಗರ (ಮಜರೆ), ವಿದ್ಯಾನಂದನಗರ (ಮಜರೆ), ಉಗಾರ ಖುರ್ದ್‌ (ಪುರಸಭೆ), ಫರೀದಾಖಾವಡಿ, ಕಟ್ರಾಳ.

ನಿಪ್ಪಾಣಿ ವ್ಯಾಪ್ತಿಗೆ ಒಳಪಡುವ ಗ್ರಾಮಗಳು
ನಿಪ್ಪಾಣಿ, ಕೊಗನೊಳ್ಳಿ, ಹಣಬರವಾಡಿ (ಹ್ಯಾಮ್ಲೆಟ್), ಜತ್ರಾಟ್, ಶಿರಪೆವಾಡಿ (ಹ್ಯಾಮ್ಲೆಟ್), ಲಖನಾಪುರ, ಪಡಲಿಹಾಳ, ಶಿರಗುಪ್ಪಿ, ಕೊಡ್ನಿ, ಗಾಯಕನವಾಡಿ (ಹ್ಲಾಮ್ಲೆಟ್‌), ಶೆಂಡೂರು, ಗೊಂದಿಕುಪ್ಪಿ, ಸೌಂದಲಗಾ, ಹಂಚಿನಾಳ, ಕೆ.ಎಸ್. ಕುರ್ಲಿ, ಯರ್‍ನಾಳ, ಅಮಲಜರಿ (ಹ್ಯಾಮ್ಲೆಟ್), ಗವನ್‌, ತವಂದಿ, ಅಪ್ಪಾಚಿವಾಡಿ, ಅಕ್ಕೋಳ, ಪಂಗೇರಿ–ಬಿ, ಬುಡಲಮುಖ್, ಯಮಗರ್ಣಿ, ನಾಗನೂರ, ಬೂದಿಹಾಳ, ಬೇನಾಡಿ, ಬೊಲೇವಾಡಿ (ಹ್ಯಾಮ್ಲೆಟ್), ಮತ್ತಿವಾಡ, ಅಡಿ, ಹದನಾಳ, ಭಟನಾಗನೂರ, ಭಿವಾಶಿ, ಸುಳಗಾಂವ, ಬೋರಗಾಂವ (ಟಿಎಂಸಿ), ಬೇಡಕಿಹಾಳ, ಸಿದ್ನಾಳ, ಕುನ್ನೂರ, ಶಿವಪುರವಾಡಿ (ಹ್ಯಾಮ್ಲೆಟ್), ಗಜಬರವಾಡಿ (ಹ್ಯಾಮ್ಲೆಟ್), ಮಣಕಾಪುರ, ಹುನ್ನರಗಿ, ಬೋಜ್, ಶಿರಡಾವಾಡ್, ಗಲತಗಾ, ಭೀಮಪುರವಾಡಿ (ಹ್ಯಾಮ್ಲೆಟ್), ದಿಲಾಲಪುರವಾಡಿ (ಹ್ಯಾಮ್ಲೆಟ್), ಹಲದಟ್ಟಿ (ಹ್ಯಾಮ್ಲೆಟ್), ಮಮದಾಪುರ ಕೆ.ಎಲ್. ಕರಡಗಾ, ಬೋರಗಾಂವವಾಡಿ(ಹ್ಯಾಮ್ಲೆಟ್), ಧೋಣೇವಾಡಿ(ಹ್ಯಾಮ್ಲೆಟ್), ಕಸನಾಳ, ಬರವಾಡ್, ಮಂಗೂರ್.

ಸ್ಪಷ್ಟನೆ ಪಡೆದು ಮುಂದಿನ ಕ್ರಮ
‘ಹೊಸ ತಾಲ್ಲೂಕು ಪಂಚಾಯ್ತಿಗಳಿಗೆ ಅಧಿಸೂಚನೆ ಹೊರಡಿಸಲಾಗಿದೆ. ಆದರೆ, ಅಲ್ಲಿ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ನೇಮಿಸಲಾಗಿಲ್ಲ. ನೇಮಕವಾದ ನಂತರ ಅವರಿಗೆ ಆರ್ಥಿಕ ಇಲಾಖೆಯಿಂದ ‘ಎಫ್‌ಡಿ ಕೋಡ್’ ಕೊಡಲಾಗುತ್ತಿದೆ. ಈ ಪ್ರಕ್ರಿಯೆ ಆಗಿಲ್ಲದಿರುವುದರಿಂದ ನಾವು ಶೇ 50ರಷ್ಟು ಹಣವನ್ನು ಯಾರಿಗೆ ವರ್ಗಾಯಿಸಬೇಕು ಎನ್ನುವ ವಿಷಯದಲ್ಲಿ ಗೊಂದಲಿವೆ. ಹೀಗಾಗಿ, ಸರ್ಕಾರಕ್ಕೆ ವರದಿ ಸಲ್ಲಿಸಿ, ಸ್ಪಷ್ಟನೆ ಪಡೆದು ಮುಂದುವರಿಯಲಾಗುವುದು’ ಎಂದು ಜಿಲ್ಲಾ ಪಂಚಾಯ್ತಿ ಸಿಇಒ ಡಾ.ಕೆ.ವಿ. ರಾಜೇಂದ್ರ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT