ನಿಪ್ಪಾಣಿ: ‘ವಿಧಾನಸಭಾ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ 4 ಸೇತುವೆಗಳ ನಿರ್ಮಾಣಕ್ಕೆ ಲೋಕೊಪಯೋಗಿ ಇಲಾಖೆಯಿಂದ ₹5 ಕೋಟಿ ಅನುದಾನ ಅನುಮೋದಿಸಲಾಗಿದೆ. ಇದರಲ್ಲಿ ಕೋಡಣಿ, ಬೆನಾಡಿ, ಮಾನಕಾಪುರ, ಹಂಚಿನಾಳ ಗ್ರಾಮಗಳು ಸೇರಿವೆ’ ಎಂದು ಶಾಸಕಿ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ‘ಕೊಡಣಿ ಮತ್ತು ಗಾಯಕವಾಡಿ ಮಾರ್ಗದ ಮಧ್ಯೆಯ ಹಳ್ಳದ ಮೇಲೆ ಸೇತುವೆ ನಿರ್ಮಿಸುವ ತುರ್ತು ಅಗತ್ಯವಿತ್ತು. ಸದರಿ ಕಾಮಗಾರಿಗೆ ₹3 ಕೋಟಿ ಅನುದಾನ ಅನುಮೋದಿಸಲಾಗಿದೆ. ಬೆನಾಡಿ-ಹುನ್ನರಗಿ ರಸ್ತೆಯ ಹಳ್ಳದ ಸೇತುವೆ ನಿರ್ಮಾಣಕ್ಕೆ ₹70 ಲಕ್ಷ ಮತ್ತು ಮಾನಕಾಪುರದಿಂದ ಐಕೊ ಕಾರ್ಖಾನೆಗೆ ಹೋಗುವ ಕುರುಬರ ತೋಟದ ಹತ್ತಿರದ ಹಳ್ಳದ ಸೇತುವೆ ನಿರ್ಮಾಣಕ್ಕೆ ₹40 ಲಕ್ಷ ಅನುಮೋದಿಸಲಾಗಿದೆ. ಹಂಚಿನಾಳ ಗ್ರಾಮದ ಕನಕಾಲಿ ಸೇತುವೆ ನಿರ್ಮಾಣಕ್ಕೆ ₹90 ಲಕ್ಷಗಳ ಅನುದಾ ಅನುಮೋದಿಸಲಾಗಿದೆ’ ಎಂದು ತಿಳಿಸಿದ್ದಾರೆ.

‘ಸೇತುವೆ ಇಲ್ಲದ ಕಾರಣ ಈ ಹಳ್ಳಗಳ ಮೇಲೆ ಸಾರಿಗೆಯ ಅನೇಕ ಸಮಸ್ಯೆಗಳು ಉಂಟಾಗಿದ್ದವು. ರೈತರು ಮತ್ತು ನಾಗರಿಕರು, ಮುಖ್ಯವಾಗಿ ಭಾರೀ ಮಳೆಯ ಸಮಯದಲ್ಲಿ ನೀರು ಹರಿದು ಹೋಗದಿರುವುದು, ಹತ್ತಿರದ ಕೃಷಿ ಹೊಲಗಳಲ್ಲಿ ನೀರು ನಿಲ್ಲುವುದು, ಸಂಚಾರ ಮತ್ತು ಸಾರಿಗೆಗೆ ಅಡಚಣೆ ಮುಂತಾದ ವಿವಿಧ ಅಡೆತಡೆಗಳನ್ನು ಎದುರಿಸುತ್ತಿದ್ದರು. ಸೇತುವೆ ನಿರ್ಮಿಸಿದರೆ, ರೈತರು ಮತ್ತು ನಾಗರಿಕರು ಸುರಕ್ಷತೆಯಿಂದ ಪ್ರಯೋಜನ ಪಡೆಯುತ್ತಾರೆ. ಅನುಮೋದಿತ ಕಾಮಗಾರಿಗಳನ್ನು ಶೀಘ್ರದಲ್ಲೇ ಪ್ರಾರಂಭ ಮಾಡಲಾಗುವುದು. ಕ್ಷೇತ್ರದಲ್ಲಿ ರಸ್ತೆ, ಸೇತುವೆ, ಚರಂಡಿ, ಸೇತುವೆ, ದೇವಸ್ಥಾನ ಅಭಿವೃದ್ಧಿ ಹೀಗೆ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿ ಕ್ಷೇತ್ರ ಅಭಿವೃದ್ಧಿ ಮಾಡಲಾಗುತ್ತಿದೆ’ ಎಂದು ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260502-21-1972514201

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.