ಬೆಳಗಾವಿ: ‘ಸರ್ಕಾರಿ ಸೇವೆಗಳು ತ್ವರಿತವಾಗಿ ಸಿಗಲೆಂದು ಆರಂಭಿಸಿದ ಬೆಳಗಾವಿ ಒನ್ ಕೇಂದ್ರಗಳು ಈಗ ಅಸಹನೀಯ ಕೇಂದ್ರಗಳಾಗಿವೆ. ಸರ್ವರ್ ಸಮಸ್ಯೆಯಿಂದ ಜನರು ಹೈರಾಣಾಗುತ್ತಿದ್ದಾರೆ’ ಎಂದು ಸಾರ್ವಜನಿಕರು ದೂರಿದ್ದಾರೆ.

‘ವಿದ್ಯುತ್, ನೀರಿನ ಬಿಲ್, ಆಸ್ತಿ ತೆರಿಗೆ ಭರಿಸಲು, ವಿವಿಧ ಪ್ರಮಾಣಪತ್ರ ಪಡೆಯಲು ಮತ್ತು ವಿವಿಧ ಸೇವೆಗಳಿಗೆ ಅರ್ಜಿ ಸಲ್ಲಿಸಲು ನಾವು ಬೆಳಗಾವಿ ಒನ್ ಕೇಂದ್ರಕ್ಕೆ ಬರುತ್ತಿದ್ದೇವೆ. ಇಲ್ಲಿ ಕೌಂಟರ್ಗಳ ಮುಂದೆ ಗಂಟೆಗಟ್ಟಲೇ ನಿಂತರೂ; ಸರ್ವರ್ ಇಲ್ಲ. ನಾಳೆ ಬನ್ನಿ ಎಂಬ ಉತ್ತರ ಸಿಬ್ಬಂದಿಯಿಂದ ಬರುತ್ತಿದೆ. ಇದು ಕೇವಲ ತಾಂತ್ರಿಕ ಸಮಸ್ಯೆಯಲ್ಲ. ಆಡಳಿತದ ಮೇಲಿನ ನಿರ್ಲಕ್ಷ್ಯ’ ಎಂದು ಆರೋಪಿಸಿದ್ದಾರೆ.

ಕಳೆದ ಎರಡು ವಾರಗಳಿಂದ ಇದೇ ಸಮಸ್ಯೆಯಾಗುತ್ತಿದೆ. ದಿನವೂ ಒನ್ಕೇಂದ್ರಗಳಿಗೆ ಬರುವ ಜನರು ಯಾವುದೇ ಬಿಲ್ ಸೇರಿದಂತೆ ಕೆಲಸವಾಗದೇ ಬಿಸಿಲಿನಲ್ಲಿ ಮನೆಗೆ ಮರಳುವಂತಾಗಿದೆ ಎಂದು ಜನರು ದೂರಿದ್ದಾರೆ.

‘ಬೆಳಗಾವಿ ಒನ್ ಕೇಂದ್ರದಲ್ಲಿ ಸರ್ವರ್ ಸಾಮರ್ಥ್ಯ ಹೆಚ್ಚಿಸಬೇಕು. ತಾಂತ್ರಿಕ ಸಿಬ್ಬಂದಿ ಸದಾ ಸಿದ್ಧವಾಗಿ ಇರಿಸಬೇಕು. ಸೇವೆ ಸ್ಥಗಿತವಾದರೆ ಕೇಂದ್ರದ ಹೊರಗೆ ಮಾಹಿತಿ ಫಲಕ ಹಾಕಬೇಕು’ ಎಂದು ಒತ್ತಾಯಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260513-21-1037972085

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.