ಬೆಳಗಾವಿ: ಪೆಟ್ರೋಲ್, ಡಿಸೇಲ್ ಕೊರತೆ ಆಗಲಿದೆ ಎಂಬ ಸುದ್ದಿ ಹರಡಿದ್ದರಿಂದ ನಗರವೂ ಸೇರಿದಂತೆ ಜಿಲ್ಲೆಯ ಬಹುಪಾಲು ಕಡೆಗಳಲ್ಲಿ ಜನರು ವಾಹನಗಳ ಸಮೇತ ಬಂಕುಗಳತ್ತ ಧಾವಿಸಿದ್ದಾರೆ.

ಪ್ರತಿಯೊಂದು ಬಂಕ್ ಮುಂದೆ ಕೂಡ ನೂರಕ್ಕೂ ಹೆಚ್ಚು ಜನ ಕಾದು ನಿಂತಿದ್ದು ಮಂಗಳವಾರ ಬೆಳಿಗ್ಗೆಯೂ ಗೋಚರಿಸಿತು.

ಸೋಮವಾರ ಸಂಜೆಯಿಂದಲೇ ತೈಲ ಕೊರತೆಯ ಸುದ್ದಿ ಹರಡಿದ್ದರಿಂದ ಅಪಾರ ಸಂಖ್ಯೆಯ ಜನ ಬಂಕುಗಳಿಗೆ ಮುಗಿಬಿದ್ದರು. ನಗರದ ಕಾಲೇಜು ರಸ್ತೆ, ಕೆಎಲ್ಇ ರಸ್ತೆ, ಕೃಷ್ಣದೇವರಾಯ ವೃತ್ತ, ಕ್ಲಬ್ ರಸ್ತೆ, ಬಸ್ ನಿಲ್ದಾಣ ಬಳಿ, ಬಾಕ್ಸೈಟ್ ರೋಡ್ ಮುಂತಾದೆಡೆ ಇರುವ ಬಂಕುಗಳಲ್ಲಿ ರಾತ್ರಿಯೇ ಪೆಟ್ರೋಲ್ ಖಾಲಿ ಎಂಬ ಫಲಕ ಹಾಕಲಾಯಿತು. ಅಭಾವ ಸೃಷ್ಟಿಯಾಗುವ ಭಯದಲ್ಲಿ ಜನ ಹೆಚ್ಚು ಪೆಟ್ರೋಲ್ ಹಾಕಿಸಿಕೊಂಡಿದ್ದೇ ಇದಕ್ಕೆ ಕಾರಣ ಎಂದು ಬಂಕ್ ಸಿಬ್ಬಂದಿ ತಿಳಿಸಿದರು.

ಯಥಾ ಪ್ರಕಾರ ಮಂಗಳವಾರ ಬೆಳಿಗ್ಗೆಯಿಂದ ಪೆಟ್ರೋಲ್, ಡಿಸೇಲ್ ಸಿಗುತ್ತಿದ್ದು ಬಂಕುಗಳ ಮುಂದೆ ಸವಾರರು ಸಾಲುಗಟ್ಟಿ ನಿಂತಿದ್ದಾರೆ.
.ಪೆಟ್ರೋಲ್ ಸಿಗಲ್ಲ ಎಂಬ ವದಂತಿ: ಇಂಧನ ತುಂಬಿಸಲು ಮುಗಿಬಿದ್ದ ಜನ.ಬೆಂಗಳೂರು | ಗೋದಾಮಿಗೆ ಬೆಂಕಿ: ಲಕ್ಷಾಂತರ ಮೌಲ್ಯದ ವಸ್ತುಗಳು ಭಸ್ಮ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.