ಬೆಳಗಾವಿ: ನಗರದಲ್ಲಿ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಪೊಲೀಸ್ ಕಮಿಷನರ್ ಭೂಷಣ ಬೋರಸೆ ಅವರು, ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ತಂದೆ–ಮಗ ಸೇರಿದಂತೆ ಐವರು ರೂಢಿಗತ ಅಪರಾಧಿಗಳನ್ನು ಗಡಿಪಾರು ಮಾಡಿ ಆದೇಶಿಸಿದ್ದಾರೆ.

ತಾಲ್ಲೂಕಿನ ಹಲಗಾ ಗಣಪತಿಗಲ್ಲಿಯ ಪಿರಾಜಿ ಯಲ್ಲಪ್ಪ ಯಸೂಚೆ, ಟಿಳಕವಾಡಿ ಗವಳಿಯಲ್ಲಿಯ ಯಶ್ ಗಣೇಶ ದಾವಲೆ, ಇವರ ಪುತ್ರ ಆದಿತ್ಯ ಗಣೇಶ ದಾವಲೆ, ಪಾರ್ವತಿ ನಗರದ ಸಂತೋಷ ಗೋವಿಂದ ದಿವಟಗಿ, ಮಚ್ಛೆ ಪಟ್ಟಣದ ರಫೀಕ್ ಇಸ್ತಿಯಾಕ್ ಶೇಖ್ ಅವರನ್ನು ಕನಾಟಕ ಪೊಲೀಸ್ ಕಾಯ್ದೆ 55 ಹಾಗೂ ಕಲಂ 56ರ ಅಡಿಯಲ್ಲಿ ಗಡಿಪಾರು ಮಾಡಲಾಗಿದೆ.

ಆದೇಶದನ್ವಯ ಐವರನ್ನೂ 3ರಿಂದ 6 ತಿಂಗಳ ಅವಧಿಗೆ ಬೆಳಗಾವಿ ಜಿಲ್ಲೆಯಿಂದ ಹೊರಗುಳಿಸಲಾಗಿದ್ದು, ಈ ಅವಧಿಯಲ್ಲಿ ಜಿಲ್ಲೆ ಪ್ರವೇಶಿಸುವುದಕ್ಕೆ ನಿರ್ಬಂಧ ವಿಧಿಸಲಾಗಿದೆ. ಸಾರ್ವಜನಿಕರ ಸುರಕ್ಷತೆ ಮತ್ತು ನೆಮ್ಮದಿಯನ್ನು ಕಾಪಾಡುವ ನಿಟ್ಟಿನಲ್ಲಿ ಮುಂದೆಯೂ ಇಂತಹ ರೂಢಿಗತ ಅಪರಾಧಿಗಳ ವಿರುದ್ಧ ಕಠಿಣ ಕ್ರಮಗಳನ್ನು ನಿರಂತರವಾಗಿ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260412-21-717804030

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.