ಬೆಳಗಾವಿ: ನಗರದ ವಿವಿಧ ವೃತ್ತಗಳಲ್ಲಿ ಕರ್ತವ್ಯ ನಿರತ ಕಾನ್ಸ್ಟೆಬಲ್ ಶೈಲೇಶ್ ಸದಲಗಿ ಅವರು ಈಗ ಆಕರ್ಷಣೆಯ ಕೇಂದ್ರವಾಗಿದ್ದಾರೆ. ಕರ್ತವ್ಯದ ವೇಳೆ ಬಿಸಿಲಿನ ತಾಪದಿಂದ ರಕ್ಷಿಸಿಕೊಳ್ಳಲು ಅವರು ‘ಸೌರ ಪ್ಯಾನಲ್ ಕ್ಯಾಪ್’ ಧರಿಸಿದ್ದಾರೆ. ಚಿಕ್ಕದೊಂದು ಟೊಪ್ಪಿಗೆಯಲ್ಲೂ ಸೂಕ್ಷ್ಮ ತಂತ್ರಜ್ಞಾನ ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ತೋರಿಸಿದ್ದಾರೆ.

ಶೈಲೇಶ್ ಅವರು ಯಾವುದೇ ವೃತ್ತದಲ್ಲಿ ಕರ್ತವ್ಯ ನಿರತರಾದರೂ ಅವರ ಪಕ್ಕ ಹಾದು ಹೋಗುವ ಪ್ರತಿಯೊಬ್ಬರ ಗಮನ ಸೆಳೆಯುತ್ತಾರೆ. ಚಿಕ್ಕ ಕ್ಯಾಪಿನ ಮೇಲೆ ತಿರುಗುವ ಹಳದಿ ಬಣ್ಣದ ಪುಟಾಣಿ ಪಂಖ ಹಾಗೂ ಅದಕ್ಕೆ ಚಲನೆ ನೀಡುವ ಪುಟಾಣಿ ಸೋಲಾರ್ ಪ್ಯಾನಲ್ ಕಣ್ಣಿಗೆ ಬೀಳುತ್ತದೆ.

ನಗರದಲ್ಲಿ ಈಗ ಗರಿಷ್ಠ 38 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುತ್ತಿದೆ. ಬಿಸಿಲಿನಿಂದ ಹಾಗೂ ಬಿಸಿಗಾಳಿಯಿಂದ ಕಣ್ಣುಗಳ ತೇವಾಂಶ ಆರುತ್ತದೆ. ಒಣಗಿದ ಕಣ್ಣುಗಳಿಂದ ಕಿರಿಕಿರಿ ಆಗುತ್ತದೆ, ದೃಷ್ಟಿ ಸಮಸ್ಯೆಯೂ ತಲೆದೋರುತ್ತದೆ. ಜತೆಗೆ, ಟ್ರಾಫಿಕ್ ಪೊಲೀಸರು ಯಾವಾಗಲೂ ಬಿಸಿಲಿನಲ್ಲೇ ನಿಲ್ಲುವುದರಿಂದ ನೆತ್ತಿ ಕಾದು ಬೆವರು ನಿರಂತರ ಸುರಿಯುತ್ತದೆ. ಇದು ಅವರ ದೇಹದ ನಿರ್ಜಲೀಕರಣಕ್ಕೂ ಕಾರಣವಾಗಬಹುದು.

ಇದೆಲ್ಲದರಿಂದ ತಪ್ಪಿಸಿಕೊಳ್ಳಲು ಸುಲಭ ಉಪಾಯವೊಂದನ್ನು ಈ ಕಾನ್ಸ್ಟೆಬಲ್ ಕಂಡುಕೊಂಡರು. ಹಣೆಯ ಮುಂದೆ ಪುಟಾಣಿ ಪ್ಯಾನ್ ಹಾಕಿಕೊಂಡು ಕೆಲಸ ಶುರು ಮಾಡಿದರು. ಇದನ್ನು ಅವರಿಗೆ ಸ್ನೇಹಿತರೊಬ್ಬರು ಕಾಣಿಕೆ ನೀಡಿದ್ದಾರೆ.

ಹೇಗೆ ಕೆಲಸ ಮಾಡುತ್ತದೆ?: ಹಗುರವಾದ ಕ್ಯಾಪಿಗೆ ಒಂದು ಪುಟ್ಟ ಪಂಖ ಅಳವಡಿಸಲಾಗಿದೆ. ಅದಕ್ಕೆ ಶಕ್ತಿ ಸರಬರಾಜು ಮಾಡಲು ಸೋಲಾರ್ ಪ್ಯಾನಲ್ ಹಿಂಬದಿಯಲ್ಲಿ ಕೂಡ್ರಿಸಲಾಗಿದೆ. ಎರಡು ಮಧ್ಯೆ ವೈರ್ಗಳ ಜೋಡಣೆ ಇದೆ. ಸೂರ್ಯನ ಬಿಸಿಲನ್ನು ವಿದ್ಯುತ್ ಆಗಿ ಪರಿವರ್ತಿಸುವ ಪ್ಯಾನಲ್ ಅದನ್ನು ಫ್ಯಾನಿಗೆ ಸರಬರಾಜು ಮಾಡುತ್ತದೆ. ಫ್ಯಾನ್ ತಿರುಗುವುದರಿಂದ ಕಣ್ಣು, ಹಣೆ, ನೆತ್ತಿಗೆ ತಣ್ಣನೆಯ ಗಾಳಿ ಬೀಸುತ್ತದೆ.

ಇದೇ ಕ್ಯಾಪನ್ನು ಎಲ್ಲ ಪೊಲೀಸರಿಗೂ ನೀಡಬಹುದು ಎಂಬ ಅಭಿಪ್ರಾಯವನ್ನು ಹಿರಿಯ ಅಧಿಕಾರಿಗಳು ಹಂಚಿಕೊಂಡಿದ್ದಾರೆ. ಅದರ ಸುರಕ್ಷತೆ ಹಾಗೂ ಸಾಧ್ಯತೆಗಳು ಏನು ಎಂಬುದರ ಪರಿಶೀಲನೆ ನಡೆಸಿದ್ದಾರೆ. ಕಾನ್ಸ್ಟೆಬಲ್ ಅವರ ಕ್ಯಾಪ್ ನೋಡಿದ ಹಲವು ಬೈಕ್ ಸವಾರರು ತಾವೂ ಖರಿದಿಸುವುದಕ್ಕಾಗಿ ದುಂಬಾಲು ಬಿದ್ದಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260503-21-1789767469

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.