ಬೆಳಗಾವಿ: ನಗರಕ್ಕೆ ಬಂದ ಮೂರು ಬಸ್ಗಳಲ್ಲಿ ಬಾಂಗ್ಲಾದ ವಲಸಿಗರು ಇದ್ದಾರೆ ಎಂಬ ಸಂದೇಹದಿಂದ ಪೊಲೀಸರು ಎಲ್ಲರ ವಿಚಾರಣೆ ನಡೆಸಿದರು. ಅವರ ದಾಖಲೆಗಳನ್ನು ಪರಿಶೀಲಿಸಿದರು. ಇವರೆಲ್ಲರೂ ಪಶ್ಚಿಮ ಬಂಗಳಾದ ಕಾರ್ಮಿಕರು ಎಂದು ಗೊತ್ತಾದ ಬಳಿಕ ಕಳುಹಿಸಲಾಯಿತು.

ಹುಬ್ಬಳ್ಳಿಯಿಂದ ಮೂರು ಬಸ್ಗಳಲ್ಲಿ ಬೆಳಗಾವಿಗೆ ಬಂದಿದ್ದ ಜನರನ್ನು ವಶಕ್ಕೆ ಪಡೆದು ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಡಿಸಿಪಿ ನಾರಾಯಣ ಭರಮನಿ ನೇತೃತ್ವದಲ್ಲಿ ಪರಿಶೀಲನೆ ನಡೆಸಲಾಯಿತು. ಹಿಂದೂ ಸಂಘಟನೆಗಳ ಕಾರ್ಯಕರ್ತರು ನೀಡಿದ ಮಾಹಿತಿ ಮೇರೆಗೆ ಈ ಪರಿಶೀಲನೆ ನಡೆಸಲಾಯಿತು.

ಶಂಕಿತರೆಲ್ಲರೂ ಪಶ್ಚಿಮ ಬಂಗಾಳ ಮೂಲದವರಾಗಿದ್ದು, ಕಳೆದ ಏಳೆಂಟು ವರ್ಷಗಳಿಂದ ಬೆಳಗಾವಿ ನಗರದ ಶಹಾಪುರ ಪ್ರದೇಶದಲ್ಲಿ ವಾಸವಿದ್ದಾರೆ. ಅಕ್ಕಸಾಲಿಗರ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಪಶ್ಚಿಮ ಬಂಗಾಳದ ಚುನಾವಣೆಯಲ್ಲಿ ಮತದಾನ ಮಾಡಲು ತೆರಳಿದ್ದ ಅವರು ಇದೀಗ ವಾಪಸ್ಸಾಗಿರುವುದು ದೃಢಪಟ್ಟಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260524-21-150023972

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.