ಬೆಳಗಾವಿ: ಕಳವಾಗಿದ್ದ ಚಿನ್ನಾಭರಣ, ವಾಹನ, ಮೊಬೈಲ್ ಫೋನ್ ಹಾಗೂ ನಗದು ಸೊತ್ತುಗಳನ್ನು ಪತ್ತೆ ಹಚ್ಚಿದ ಬೆಳಗಾವಿ ನಗರ ಪೊಲೀಸರು ಮಂಗಳವಾರ ಮಾಲೀಕರಿಗೆ ಮರಳಿ ನೀಡಿದರು.

ವಸ್ತುಗಳನ್ನು ಕಳೆದುಕೊಂಡು ಗೋಳಾಡುತ್ತಿದ್ದ ಹಲವರು ತಮ್ಮ ಸ್ವತ್ತು ಮರಳಿ ಸಿಕ್ಕಾಗ ಆನಂದದಿಂದ ನಲಿದರು. ನಗರ ಪೊಲೀಸ್ ಕಮಿಷನರ್ ಭೂಷಣ ಬೊರಸೆ ಹಾಗೂ ಅಧಿಕಾರಿಗಳು ಮುಂದೆ ನಿಂತು ಎಲ್ಲರಿಗೂ ವಸ್ತುಗಳನ್ನು ಹಸ್ತಾಂತರಿಸಿದರು.

2025ನೇ ಸಾಲಿನಲ್ಲಿ ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಪ್ರಕರಣಗಳ ತನಿಖೆ ಕೈಗೊಂಡಿದ್ದ ಪೊಲೀಸರು, ಒಟ್ಟು ₹6.36 ಕೋಟಿಗೂ ಹೆಚ್ಚು ಮೌಲ್ಯದ ಸೊತ್ತುಗಳನ್ನು ಪತ್ತೆಹಚ್ಚಿದರು.

ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಪ್ರಕರಣಗಳನ್ನು ಕೇವಲ ಸಂಖ್ಯೆಗಳ ಮಟ್ಟಕ್ಕೆ ಸೀಮಿತಗೊಳಿಸದೆ, ಅವುಗಳ ಹಿಂದೆ ಇರುವ ನಾಗರಿಕರ ನಷ್ಟ, ಆತಂಕ ಮತ್ತು ಅಸಹಾಯಕತೆಯನ್ನು ಗಮನದಲ್ಲಿಟ್ಟುಕೊಂಡು ವಿಶೇಷ ತಂಡಗಳನ್ನು ರಚಿಸಿ ತನಿಖೆ ಮುಂದುವರಿಸಲಾಗಿದೆ. ಅದರ ಫಲವಾಗಿ ಕೋಟ್ಯಾಂತರ ರೂಪಾಯಿ ಮೌಲ್ಯದ ಸೊತ್ತುಗಳನ್ನು ಮರುಪಡೆಯಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಭೂಷಣ ಬೊರಸೆ ತಿಳಿಸಿದರು.

‘ಪತ್ತೆಯಾದ ಸೊತ್ತುಗಳಲ್ಲಿ 2.36 ಕೋಟಿ ಮೌಲ್ಯದ ಚಿನ್ನಾಭರಣಗಳು, 294 ಗ್ರಾಂ ಬೆಳ್ಳಿಯ ಆಭರಣಗಳು, 3.99 ಕೋಟಿ ಮೌಲ್ಯದ 85 ವಾಹನಗಳು, 1.10 ಲಕ್ಷ ನಗದು. ಸಿಇಐಆರ್ ಪೋರ್ಟಲ್ ನೆರವಿನಿಂದ ಪತ್ತೆ ಮಾಡಲಾದ ಸುಮಾರು ₹20 ಲಕ್ಷ ಮೌಲ್ಯದ 140 ಮೊಬೈಲ್ ಫೋನ್ಗಳು ಸೇರಿವೆ’ ಎಂದು ವಿವರಿಸಿದರು.

‘ನಗರದಲ್ಲಿ ಹೆಚ್ಚುತ್ತಿರುವ ಸವಾಲುಗಳ ನಡುವೆಯೂ ಪ್ರಕರಣ ಪತ್ತೆ ಪ್ರಮಾಣ ಹೆಚ್ಚಿಸಲು ಪೊಲೀಸರ ಸಂಯೋಜಿತ ಕಾರ್ಯ, ಸ್ಥಳೀಯ ಮಾಹಿತಿಯ ಸಂಗ್ರಹ, ತಾಂತ್ರಿಕ ವಿಶ್ಲೇಷಣೆ ಹಾಗೂ ಮೇಲ್ವಿಚಾರಣೆಯ ಪಾತ್ರ ಮುಖ್ಯವಾಗಿದೆ. ಅಪರಾಧ ನಡೆದ ಬಳಿಕ ದಾಖಲಾತಿ ಮಾಡಿ ಕಡತ ಮುಚ್ಚುವ ಕ್ರಮವಲ್ಲ, ಪತ್ತೆಹಚ್ಚಿ ಫಲಿತಾಂಶ ತರುವುದು ಮುಖ್ಯ’ ಎಂದು ಅವರು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.