ಬೆಳಗಾವಿ: ‘ಮೂರು ವರ್ಷಕ್ಕೊಮ್ಮೆ ಆಸ್ತಿ ತೆರಿಗೆ ಪರಿಷ್ಕರಿಸಬೇಕು. ಆದರೆ, ಇಲ್ಲಿನ ಮಹಾನಗರ ಪಾಲಿಕೆಯಲ್ಲಿ ಸತತ ಮೂರು ವರ್ಷಗಳಲ್ಲಿ ಮೂರು ಸಲ ಆಸ್ತಿ ತೆರಿಗೆ ಹೆಚ್ಚಿಸಿ, ಜನರ ಹಿತಾಸಕ್ತಿ ಕಾಪಾಡುವಲ್ಲಿ ಸದಸ್ಯರು ವಿಫಲವಾಗಿದ್ದಾರೆ’ ಎಂದು ಮಾಜಿ ಮೇಯರ್, ಮಾಜಿ ಉಪಮೇಯರ್ ಹಾಗೂ ಮಾಜಿ ಸದಸ್ಯರ ಸಂಘದ ಗೌರವಾಧ್ಯಕ್ಷ ರಮೇಶ ಕುಡಚಿ ದೂರಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪಾಲಿಕೆ ಸದಸ್ಯರು ಜನರ ಹಿತಾಸಕ್ತಿ ಕಡೆಗಣಿಸಿದ್ದಾರೆ. ಅಧಿಕಾರಿಗಳು ತಮ್ಮ ಅವ ಶ್ಯಕತೆಗೆ ಅನುಗುಣವಾಗಿ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ’ ಎಂದು ಆಪಾದಿಸಿದರು.

‘ಕೆಎಂಸಿ ಕಾಯ್ದೆಗೆ ತಿದ್ದುಪಡಿ ತರಲಾಗಿದ್ದು, ಮೂರು ವರ್ಷಕ್ಕೊಮ್ಮೆ ಆಸ್ತಿ ತೆರಿಗೆ ಪರಿಷ್ಕರಣೆಗೆ ಅವಕಾಶವಿದೆ. ಬೆಳಗಾವಿ ಮಹಾನಗರ ಪಾಲಿಕೆಯೂ ಸ್ಥಳೀಯಮಟ್ಟದ ಸರ್ಕಾರವಾಗಿದೆ. ಅದು ಜನರ ಹಿತಾಸಕ್ತಿಗೆ ಪೂರಕವಾಗಿ ನಿರ್ಧಾರ ತೆಗೆದುಕೊಳ್ಳಬೇಕೇ ಹೊರತು, ಅಧಿಕಾರಿಗಳ ಇಚ್ಛೆಯಂತೆ ಅಲ್ಲ’ ಎಂದರು.

‘ಪಾಲಿಕೆಯಲ್ಲಿ ಈಚೆಗೆ ಮಂಡನೆ ಯಾದ ಬಜೆಟ್ ಅನೇಕ ನ್ಯೂನತೆಗಳಿಂದ ಕೂಡಿದೆ. ಲಭ್ಯ ಅನುದಾನ ಮತ್ತು ಬರಬೇಕಿರುವ ಬಾಕಿ ಮೊತ್ತ ವಿಶ್ಲೇಷಿಸಿ ಬಜೆಟ್ ಮಂಡಿಸಬೇಕು. ಆದರೆ, ಸ್ಥಳೀಯ ಸಂಸ್ಥೆಗೆ ಬರಬೇಕಿರುವ ಬಾಕಿ ಹೆಚ್ಚಿದ್ದರೂ, ಹೆಚ್ಚುವರಿ ಬಜೆಟ್ ಮಂಡಿಸಿರುವುದು ಸರಿಯಲ್ಲ’ ಎಂದು ಆಪಾದಿಸಿದರು.

‘ಹೆಸ್ಕಾಂ ಹಾಗೂ ವಿವಿಧ ಪೈಪ್ಲೈನ್, ಕೇಬಲ್ ಹಾಕಿರುವ ನಾನಾ ಕಂಪನಿಗಳು ಉಳಿಸಿಕೊಂಡ ಬಾಕಿ ಮೊತ್ತವನ್ನು ಪಾಲಿಕೆ ಅಧಿಕಾರಿಗಳು ಸಂಗ್ರಹಿಸುತ್ತಿಲ್ಲ. ರಾಜ್ಯ ಹಣಕಾಸು ಆಯೋಗದಿಂದ ಪಾಲಿಕೆಗೆ ಬರುತ್ತಿರುವ ಮತ್ತು ಕಡಿತವಾಗುತ್ತಿರುವ ಹಣದ ವಿಚಾರವೂ ಕಂದಾಯ ವಿಭಾಗದ ಅಧಿಕಾರಿಗಳಿಗೆ ಗೊತ್ತಿಲ್ಲ’ ಎಂದು ಆಪಾದಿಸಿದರು.

‘ನಗರಕ್ಕೆ ಕುಡಿಯುವ ನೀರು ಪಡೆಯಲು ಜಾರಿಗೆ ತಂದ ಹಿಡಕಲ್ ಯೋಜನೆ ಅನುಷ್ಠಾನಕ್ಕಾಗಿ ಪಾಲಿಕೆ ಯಿಂದ ಹೆಚ್ಚುವರಿ ಕೊಡುಗೆ ನೀಡಲಾ ಗಿದೆ’ ಎಂದು ದೂರಿದರು.

‘ಸ್ಮಾರ್ಟ್ಸಿಟಿ ಯೋಜನೆಯಡಿ ನಿರ್ಮಿಸಿದ ರಸ್ತೆಗಳನ್ನು ಈಗ 24x7 ಕುಡಿಯುವ ನೀರಿನ ಸರಬರಾಜು ಪೈಪ್ಲೈನ್ಗಾಗಿ ಅಗೆಯುತ್ತಿದ್ದಾರೆ. ಇದು ವಿವಿಧ ಇಲಾಖೆಗಳ ಮಧ್ಯೆ ಇರುವ ಸಮನ್ವಯದ ಕೊರತೆ ಎತ್ತಿ ತೋರಿಸುತ್ತದೆ’ ಎಂದು ಆಪಾದಿಸಿದರು.

ಸಂಘದ ಕಾರ್ಯದರ್ಶಿ ದೀಪಕ ವಾಘೇಲಾ, ನಾಗೇಶ ಸಾತೇರಿ, ಮಾಲೋಜಿರಾವ್ ಅಷ್ಟೇಕರ, ವಂದನಾ ಬೆಳಗುಂದಕರ, ಎನ್.ಬಿ.ನಿರ್ವಾಣಿ, ರೇಣು ಕಿಲ್ಲೇಕರ, ಸುನೀಲ ಬಾಳೇಕುಂದ್ರಿ, ನೇತಾಜಿ ಜಾಧವ, ಶಿವನಗೌಡ ಪಾಟೀಲ, ರಂಜಿತ್ ಚವ್ಹಾಣಪಾಟೀಲ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260409-21-1452188098

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.