ಸಂಕೇಶ್ವರ: ‘ದಿನದ 24 ತಾಸು ದುಡಿಯುವ ಪತ್ರಕರ್ತರ ಕಾರ್ಯವು ಸೈನಿಕರ ಕಾರ್ಯಕ್ಕೆ ಸಮಾನವಾದದ್ದು, ಪತ್ರಕರ್ತರ ಅವಿಶ್ರಾಂತ ಕೆಲಸಕ್ಕೆ ಸಮಾನವಾದ ಪ್ರತಿಫಲ ದೊರೆಯಬೇಕು’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಹುಕ್ಕೇರಿ ತಾಲ್ಲೂಕು ಘಟಕದ ಅಧ್ಯಕ್ಷ ಪ್ರಕಾಶ ಅವಲಕ್ಕಿ ಹೇಳಿದರು.

ಪಟ್ಟಣದಲ್ಲಿ ಶುಕ್ರವಾರ ನಡೆದ ಹಿರಿಯ ಪತ್ರಕರ್ತ ದಿವಂಗತ ವಿಠ್ಠಲರಾವ್ ಪಾಟೀಲ ಅವರ 7ನೇ ಪುಣ್ಯಸ್ಮರಣೆ ಸಮಾರಂಭದಲ್ಲಿ ಮಾತನಾಡಿದರು.

‘ಸಮಾಜವು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಅಂಥ ಸಮಸ್ಯೆಗಳನ್ನು ಪ್ರಕಟಗೊಳಿಸಿ ಅದರ ನಿವಾರಣೆಗೆ ಯತ್ನವನ್ನು ಸರಣಿ ಸುದ್ದಿಗಳ ಮೂಲಕ ಪತ್ರಕರ್ತರು ಮಾಡುತ್ತಿದ್ದಾರೆ. ಸಮಸ್ಯೆಗಳ ನಿವಾರಣೆಗೆ ಜನಪ್ರತಿನಿಧಿಗಳು ಸ್ಪಂದಿಸಬೇಕು. ಗಡಿ ಭಾಗದಲ್ಲಿ ಪತ್ರಕರ್ತರು ಕನ್ನಡ ಮತ್ತು ಮರಾಠಿ ಭಾಷೆಗಳ ನಡುವೆ ಸೇತುವೆಯಂತೆ ಕೆಲಸ ಮಾಡುತ್ತಿದ್ದಾರೆ’ ಎಂದರು.

ಈ ಭಾಗದ ಪ್ರಥಮ ವಿಮಾನ ಪೈಲೆಟ್ ಗೌರವ ಭರಮಾಜಿ ಪಾಟೀಲ ಹಾಗೂ ಸ್ಥಳಿಯ ಪತ್ರಕರ್ತರನ್ನು ಹಾಗೂ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡಿದವರನ್ನು ಸತ್ಕರಿಸಲಾಯಿತು.

ನರೇಶ ಪಾಟೀಲ ಮಾತನಾಡಿ, ಬರುವ ವರ್ಷದಿಂದ ಸಂಕೇಶ್ವರ ಗಡಿ ಭಾಗದಲ್ಲಿ ಸಮಾಜ ಸೇವೆ ಮಾಡುವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದರು.

ಡಾ.ನಂದಕುಮಾರ ಹಾವಳ, ಸಂಕೇಶ್ವರ ಬ್ಲಾಕ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸಂತೋಷ ಮುಡಸಿ, ಸಹಕಾರಿ ಧುರೀಣ ಸುಭಾಷ ಕಾಸರಕರ, ಸಮಾಜ ಸೇವಾ ಧುರೀಣರಾದ ಅಪ್ಪಾ ಮೋರೆ, ಜಯಪ್ರಕಾಶ ಸಾವಂತ, ಪಾಂಡುರಂಗ ಪಾಟೀಲ ಇದ್ದರು. ಪುಷ್ಪರಾಜ ಮಾನೆ ಸ್ವಾಗತಿಸಿದರು. ಆನಂದ ಸಿಂಧೆ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260530-21-174324809

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.