ಗುರುವಾರ , ನವೆಂಬರ್ 14, 2019
19 °C

ನವಿಲುತೀರ್ಥ ಜಲಾಶಯದಿಂದ 36 ಕ್ಯುಸೆಕ್ ನೀರು ಬಿಡುಗಡೆ

Published:
Updated:

ಬೆಳಗಾವಿ: ಸತತ ಮಳೆ ಬೀಳುತ್ತಿರುವುದರಿಂದ ಜಿಲ್ಲೆಯ ಸವದತ್ತಿ ತಾಲ್ಲೂಕಿನ ನವಿಲುತೀರ್ಥದಲ್ಲಿರುವ ಮಲಪ್ರಭಾ ಜಲಾಶಯದಿಂದ 36 ಕ್ಯುಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಇದರಿಂದ ನದಿ ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದೆ. ಸವದತ್ತಿ, ರಾಮದುರ್ಗ ತಾಲ್ಲೂಕಿನಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ.

36094 ಕ್ಯುಸೆಕ್ ಒಳಹರಿವು ಇದ್ದು ಅಷ್ಟೂ ನೀರನ್ನು ನದಿಗೆ ಹರಿಸಲಾಗುತ್ತಿದೆ. ಹೊರಹರಿವಿನ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇರುವುದು ನದಿಪಾತ್ರದ ಜನರ ಆತಂಕಕ್ಕೆ ಕಾರಣವಾಗಿದೆ.

ಮುನವಳ್ಳಿ ಗ್ರಾಮದ ಯಲಿಗಾರ ಬಡಾವಣೆ ಜಲಾವೃತವಾಗಿದೆ. ಆಗಸ್ಟ್‌ನಲ್ಲಿ ನೆರೆಯಿಂದಾಗಿ‌ ನೊಂದಿದ್ದ ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ- ಯಡೂರ ಸೇತುವೆ ಕೃಷ್ಣಾ ನದಿ ನೀರಿನಲ್ಲಿ ಮುಳುಗಡೆಯಾಗಿದೆ. ದತ್ತ ಮಂದಿರ ಜಲಾವೃತಗೊಂಡಿದೆ.

ಮಳೆಯಿಂದಾಗಿ ರಾಮದುರ್ಗ- ಬೆಳಗಾವಿ ಮಾರ್ಗದಲ್ಲಿ ಸಂಚಾರ ಸ್ಥಗಿತಗೊಂಡಿದೆ. ರಾಮದುರ್ಗದಿಂದ ಕೊಣ್ಣೂರ, ಕಟಕೋಳ, ಕಟಕೋಳ-ಮುನವಳ್ಳಿ, ಸುರೇಬಾನ- ಕುಳಗೇರಿ ಕ್ರಾಸ್ ಮೊದಲಾದ ಮಾರ್ಗಗಳಲ್ಲಿ ಸಾರಿಗೆ ಬಸ್ ಗಳ ಸಂಚಾರ ಸ್ಥಗಿತಗೊಳಿಸಲಾಗಿದೆ ಎಂದು ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ಮಹದೇವಪ್ಪ ಮುಂಜಿ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)