ಬೆಳಗಾವಿ: ‘ಸಂಶೋಧನೆಗೆ ಸೌಲಭ್ಯಕ್ಕಿಂತ ಸಂಕಲ್ಪ ಶಕ್ತಿ ಮುಖ್ಯ. ನಮ್ಮಲ್ಲಿರುವ ಕ್ರಿಯಾ ಶಕ್ತಿ ಬಡಿದೆಬ್ಬಿಸಿದಾಗ ಮಹಾನ್ ಸಂಶೋಧನೆ ಮಾಡಲು ಸಾಧ್ಯ’ ಎಂದು ಕುಲಪತಿ ಪ್ರೊ.ಸಿ.ಎಂ.ತ್ಯಾಗರಾಜ ಅಭಿಪ್ರಾಯಪಟ್ಟರು.

ಇಲ್ಲಿನ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದಲ್ಲಿ ವಿಜ್ಞಾನ ಸಂಘ ಆಯೋಜಿಸಿದ್ದ ‘ವಿಜ್ಞಾನದಲ್ಲಿ ಮಹಿಳೆಯರು: ವಿಕಸಿತ ಭಾರತಕ್ಕೆ ಪ್ರೇರಕರು’ ವಿಷಯ ಕುರಿತ ರಾಷ್ಟ್ರೀಯ ವಿಜ್ಞಾನ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಒಂದು ರಾಷ್ಟ್ರ ನಿರ್ಮಾಣದಲ್ಲಿ ವಿಜ್ಞಾನದ ಪಾತ್ರ ಮುಖ್ಯವಾದದ್ದು. ವಿಜ್ಞಾನ ಲೋಕದಲ್ಲಿ ಆಗುವ ಬದಲಾವಣೆ, ಆವಿಷ್ಕಾರಗಳು ದೇಶದ ಭವಿಷ್ಯ ರೂಪಿಸುತ್ತವೆ. ಜ್ಞಾನವು ಸೂಕ್ಷ್ಮ ಅವಲೋಕನದಿಂದ ಆರಂಭವಾಗುತ್ತದೆ. ವಿದ್ಯಾರ್ಥಿಗಳು ತಮ್ಮ ವೀಕ್ಷಣಾ ಸಾಮರ್ಥ್ಯ, ವಿಶ್ಲೇಷಣಾತ್ಮಕ ಚಿಂತನೆ ಮತ್ತು ವೈಜ್ಞಾನಿಕ ಕುತೂಹಲ ಬಲಪಡಿಸಿಕೊಳ್ಳಬೇಕು’ ಎಂದರು.

‘ವಿದ್ಯಾರ್ಥಿಗಳು ಡಿಜಿಟಲ್ ಸಾಮರ್ಥ್ಯ ಮತ್ತು ಭಾಷಾ ಕೌಶಲಗಳನ್ನು ಬೆಳೆಸಿಕೊಳ್ಳಬೇಕು. ವಿಜ್ಞಾನದಲ್ಲಿ ಸಾಧನೆ ಮಾಡಬಯಸುವವರು ಏಕಾಗ್ರತೆಯಿಂದ ಅಧ್ಯಯನ ಮಾಡಬೇಕು’ ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಪ್ರೊ.ಎಸ್.ಸಿ.ಪಾಟೀಲ, ‘ವಿಜ್ಞಾನದ ಫಲವು ಅಂತಿಮವಾಗಿ ಸಮಾಜಕ್ಕೆ ಪ್ರಯೋಜನಕಾರಿ ಆಗಬೇಕು. ವಿದ್ಯಾರ್ಥಿಗಳು ತಮ್ಮ ಜ್ಞಾನವನ್ನು ನೈಜ ಪ್ರಪಂಚದ ಸವಾಲುಗಳನ್ನು ಎದುರಿಸುವ ಪರಿಹಾರಗಳಾಗಿ ಪರಿವರ್ತಿಸಬೇಕು’ ಎಂದು ಕರೆ ನೀಡಿದರು.

ಹುಬ್ಬಳ್ಳಿಯ ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದ ಅಡ್ವಾನ್ಸ್ ಸೈನ್ಸ್ ವಿಭಾಗದ ನಿರ್ದೇಶಕ ನರಸಿಂಹ ಆಯಾಚಿತ್ ಮಾರ್ಗದರ್ಶನ ನೀಡಿದರು. ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ವಿಜ್ಞಾನ ಮತ್ತು ತಂತ್ರಜ್ಞಾನ ನಿಕಾಯದ ನಿರ್ದೇಶಕ ಪ್ರೊ.ವಿಶ್ವನಾಥ ಆವಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಣಿತ ವಿಭಾಗದ ಮುಖ್ಯಸ್ಥ ಆದಿನಾಥ ಉಪಾಧ್ಯೆ, ಅನುಷಾ ಡಿ.ಎಸ್. ಇದ್ದರು. ಬಾಜಿಲಾ ಮುಲ್ಲಾ, ಅಕ್ಷತಾ ಬಡಿಗೇರ ನಿರೂಪಿಸಿದರು. ಖುಷಿ ಮೇತ್ರಿ ಸ್ವಾಗತಿಸಿದರು. ಫರ್ಹೀನ್ ತಾವರಗೇರಿ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260306-21-1213629954

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.